Advertisement

ಕಲ್ಯಾಣ್-ಡೊಂಬಿವಲಿಯಲ್ಲಿ 487 ಮಂದಿ ವಿರುದ್ಧ ಕ್ರಮ

05:16 PM Jun 27, 2020 | Suhan S |

ಕಲ್ಯಾಣ್‌, ಜೂ.26: ಕಲ್ಯಾಣ್‌-ಡೊಂ ಬಿವಲಿ ಪರಿಸರಗಳಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದ ರೊಂದಿಗೆ ಕೋವಿಡ್ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಿದ್ದು ಅವರ ವಿರುದ್ಧ ಮುನ್ಸಿಪಲ್‌ ಕಾರ್ಪೊರೇಶನ್‌ ಆಡಳಿತ ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Advertisement

ಮನಪಾ ಆಡಳಿತ ಹಾಗೂ ಪೊಲೀಸರು ಕಳೆದ ಎರಡು ದಿನಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 487 ಮಂದಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇವರಲ್ಲಿಮಾಸ್ಕ್ ಬಳಸದಿರುವುದು, ನಿಯಮ ಉಲ್ಲಂಘಿಸುವ ಚಾಲಕರು ಹಾಗೂ ವ್ಯಾಪಾರಿಗಳು ಸೇರಿದ್ದಾರೆ. ಪೊಲೀಸರು ಈ ವರೆಗೆ ಸುಮಾರು 465 ಮಂದಿ ವಿರುದ್ದ ಕ್ರಮಕೈಗೊಂಡಿದೆ. ಕಲ್ಯಾಣ್‌-ಡೊಂಬಿವಲಿ ಪರಿಸರಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಸೋಂಕಿತರ ಕುಟುಂಬದವರನ್ನು ಹೋಂ ಕ್ವಾರಂಟೈನ್‌ ಮಾಡಿ ಮನಪಾ ಮೊಹರು ಹಾಕಿದರೂ, ಕೈಗೆ ಕರವಸ್ತ್ರ ಕಟ್ಟಿಕೊಂಡು ಮಾರುಕಟ್ಟೆ, ಬೀದಿಗಳಲ್ಲಿ, ಸೊಸೈಟಿ ಆವರಣಗಳಲ್ಲಿ ತಿರುಗಾಡುತ್ತಿದ್ದು ಅವರ ವಿರುದ್ಧ ಆಡಳಿತ ಕ್ರಮ ಕೈಗೊಂಡಿದೆ. ವ್ಯಾಪಾರಿಗಳಿಗೆ ಒಂದುದಿನ ಬಿಟ್ಟು ಇನ್ನೊಂದು ದಿನದಂತೆ ಅಂಗಡಿ ತೆರೆಯಲು ಅವಕಾಶವನ್ನು ಮಹಾನಗರ ಪಾಲಿಕೆ ಮಾಡಿಕೊಟ್ಟಿದೆ. ಆದರೆ ಕೆಲವು ಅಂಗಡಿಯವರು ಎರಡೂ ದಿನಗಳು ಅಂಗಡಿಯನ್ನು ತೆರೆದಿಡುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಅಂತಹ ಅಂಗಡಿಯವರಿಗೆ ವಾರ್ಡ್‌ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ಫ‌ಡ್ಕೆ ರಸ್ತೆ, ದತ್‌ನಗರ, ರಾಜಾಜಿ ರಸ್ತೆ, ರೈಲ್ವೆ ನಿಲ್ದಾಣ ಪರಿಸರಗಳಲ್ಲಿ ಅನೇಕ ಬೀದಿ ವ್ಯಾಪಾರಿಗಳು ಬೆಳಗ್ಗೆಯಿಂದ ಸಂಜೆಯವರೆಗೆ ವ್ಯಾಪಾರ ಮಾಡಲು ಪ್ರಯತ್ನಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next