Advertisement
ಜನರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯುತ್ತಾರೆ. ತಮಗೆ ಅವಶ್ಯಕತೆ ಬ್ಯಾಂಕಿನೊಂದಿಗೆ ವ್ಯವಹಾರ ಮುಂದುವರಿಸುತ್ತಾರೆ. ಒಬ್ಬ ಗ್ರಾಹಕ ಇಷ್ಟೇ ದಿನ ಅಥವಾ ಇಷ್ಟು ದಿನಗಳು ಅಥವಾ ಇಷ್ಟು ವರ್ಷಗಳ ಕಾಲ ಖಾತೆಯನ್ನು ಇಟ್ಟುಕೊಳ್ಳಬಹುದು ಎನ್ನುವ ಕಟ್ಟಳೆ ಇರುವುದಿಲ್ಲ. ಗ್ರಾಹಕರು, ವಿವಿಧ ಕಾರಣಗಳಿಗಾಗಿ ಖಾತೆಗಳನ್ನು ಕ್ಲೋಸ್ ಮಾಡುತ್ತಾರೆ. ವರ್ಗಾವರ್ಗಿ, ಮನೆ ಬದಲಾಯಿಸುವಿಕೆ, ಸೇವೆಯಲ್ಲಿ ತೃಪ್ತಿ ಇರದಿರುವುದು, ಮನೆ, ಬಿಜಿನೆಸ್ ಸ್ಥಳ ಅಥವಾ ಕಚೇರಿ ಹತ್ತಿರ ಬ್ಯಾಂಕ್ ಖಾತೆಗಳನ್ನು ಇಟ್ಟುಕೊಳ್ಳುವ ಉದ್ದೇಶ,
Related Articles
Advertisement
ಈಗಾಗಲೇ ಚೆಕ್‌ಗಳನ್ನು ನೀಡಿದ್ದು, ಅದು ಪೇಮೆಂಟ್‌ಗೆ ಬಂದಿರದಿದ್ದರೆ, ಅದರ ಬಗೆಗೆ ಮಾಹಿತಿಯನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ. ಬಿಲ್ ಪೇಮೆಂಟ್ ಮತ್ತು ಸಾಲದ ಕಂತುಗಳ ಪೇಮೆಂಟ್‌ಗಾಗಿ ಖಾತೆಯನ್ನು ಲಿಂಕ್ ಮಾಡಿದ್ದರೆ, ಅದನ್ನು ಡಿ-ಲಿಂಕ್ ಮಾಡಬೇಕು. ಕ್ಲೋಸ್ ಮಾಡುವ ಮೊದಲು ಖಾತೆಯಲ್ಲಿರುವ ಎಲ್ಲಾ ಬ್ಯಾಲೆನ್ಸನ್ನು ಹಿಂಪಡೆಯಬಹುದು ಅಥವಾ ಖಾತೆ ಕ್ಲೋಸ್ ಮಾಡಿದ ನಂತರ ಬ್ಯಾಲೆನ್ಸನ್ನು ವರ್ಗಾಯಿಸಲು ಬೇರೆ ಬ್ಯಾಂಕ್ ಖಾತೆಯ ವಿವರಗಳನ್ನು ಕೊಡಬೇಕು. ಕೆಲವು ಸಂದರ್ಭದಲ್ಲಿ ಬ್ಯಾಲೆನ್ಸನ್ನು ನಗದು ರೂಪದಲ್ಲಿಯೂ ಕೊಡುತ್ತಾರೆ. ಕ್ಲೋಸ್ ಮಾಡುವ ಖಾತೆ ಜಂಟಿ ಖಾತೆಯಾಗಿದ್ದರೆ, ಖಾತೆ ಕ್ಲೋಸ್ ಮಾಡುವ ಕೋರಿಕೆ ಅರ್ಜಿಗೆ ಎಲ್ಲರೂ ಸಹಿ ಹಾಕಬೇಕು. ಸಾಲ ಬಾಕಿ ಇರುವಾಗ ಸಾಮಾನ್ಯವಾಗಿ ಬ್ಯಾಂಕ್ ಖಾತೆಯನ್ನುಕ್ಲೋಸ್ ಮಾಡಲಾಗದು. ಹೇಳದೇ ಬಂದ್ ಮಾಡುವಂತಿಲ್ಲ: ಬ್ಯಾಂಕುಗಳು ಒಬ್ಬ ಗ್ರಾಹಕನ ಖಾತೆಯನ್ನು ಗ್ರಾಹಕನ ಅನುಮತಿ ಇಲ್ಲದೇ, ಅವನ ಗಮನಕ್ಕೆ ಲಿಖೀತವಾಗಿ ತರದೇ ಬಂದ್ ಮಾಡಲಾಗದು. ಯಾವುದಾದರೂ ಕಾರಣಕ್ಕೆ ಒಬ್ಬರ ಖಾತೆಯನ್ನು ಬಂದ್ ಮಾಡುವ ಅನಿವಾರ್ಯತೆ ಬಂದರೆ, ಈ ನಿಟ್ಟಿನಲ್ಲಿ ಬ್ಯಾಂಕುಗಳು ಖಾತೆದಾರನಿಗೆ ಲಿಖೀತವಾಗಿ ಮಾಹಿತಿ ನೀಡಬೇಕಾಗುತ್ತದೆ. ಖಾತೆದಾರನಿಗೆ ಮಾಹಿತಿ ನೀಡದೇ ಖಾತೆಯನ್ನು ಬಂದ್ ಮಾಡಿದರೆ, ಖಾತೇದಾರನು ಬ್ಯಾಂಕ್‌ನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಗ್ರಾಹಕರು ಸಾಮಾನ್ಯವಾಗಿ ಸದುದ್ದೇಶದಿಂದಲೇ ಬ್ಯಾಂಕ್ ಖಾತೆಯನ್ನು ತೆರೆಯುತ್ತಾರೆ. ಆದರೆ, ಕೆಲವರು ಇದನ್ನು ದುರುಪಯೋಗ ಮಾಡಿಕೊಳ್ಳುವ ಸಂದರ್ಭಗಳು ಇರುತ್ತವೆ. ಅಂತೆಯೇ ಬ್ಯಾಂಕ್ ಖಾತೆ ತೆರೆಯುವಾಗ ತೆಗೆದುಕೊಳ್ಳಬಹುದಾದ ಮುಂಜಾಗ್ರತೆ ಮತ್ತು ಎಚ್ಚರಿಕೆಯನ್ನು ಬ್ಯಾಂಕ್ ಖಾತೆ ಬಂದ್ ಮಾಡುವಾಗಲೂ ಬ್ಯಾಂಕ್‌ಗಳು ತೆಗೆದುಕೊಳ್ಳುತ್ತಿದ್ದು, reasonable enquiry ಯನ್ನು ಮಾಡುತ್ತವೆ. ಅಕೌಂಟ್ ಕ್ಲೋಸ್ ಮಾಡಲು ಶುಲ್ಕ ಇದೆಯೇ?: ಯಾವ ಸೇವೆಯೂ ಉಚಿತವಾಗಿ ದೊರಕುವುದಿಲ್ಲ. ಉದಾರೀಕರಣ, ಜಾಗತೀಕರಣ ಮತ್ತು ಅರ್ಥಿಕ ಸುಧಾರಣೆಯ ನಂತರದ ಮಾತು ಇಲ್ಲಿಯೂ ಅನ್ವಯವಾಗುತ್ತದೆ. ಬ್ಯಾಂಕ್ ಖಾತೆ ಬಂದ್ ಮಾಡಿದರೆ ಬ್ಯಾಂಕುಗಳು ಅದಕ್ಕೂ ಶುಲ್ಕ ವಿಧಿಸುತ್ತವೆ. ಆದರೆ ಇದಕ್ಕೆ ಒಂದು ಸಮಯದ ಪರಿಮಿತಿ ಇದೆ. ಖಾತೆ ತೆರೆದು 14 ದಿವಸಗಳೊಳಗಾಗಿ ಬಂದ್ ಮಾಡಿದರೆ, ಸಾಮಾನ್ಯವಾಗಿ ಬ್ಯಾಂಕುಗಳು ಶುಲ್ಕವನ್ನು ವಿಧಿಸುವುದಿಲ್ಲ. ಖಾತೆ ತೆರೆದು ಒಂದು ವರ್ಷದ ನಂತರ ಬಂದ್ ಮಾಡಿದರೆ, ಆಗಲೂ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಮೊದಲು ಒಂದು ವರ್ಷದ ನಂತರ ಖಾತೆ ಬಂದ್ ಮಾಡಿದರೂ ಬ್ಯಾಂಕುಗಳು 500+GST ವಿಧಿಸುತ್ತಿದ್ದರು. ಮೃತಹೊಂದಿದವನ ಖಾತೆಯನ್ನು ಬಂದ್ ಮಾಡಿದರೆ ಯಾವುದೇ ಶುಲ್ಕವಿಲ್ಲ. ಬ್ಯಾಂಕುಗಳ ಪ್ರಕಾರ, ಈ ಶುಲ್ಕ ಖಾತೆ ತೆರೆಯುವ, ಚೆಕ್ ಬುಕ್ ಮತ್ತು ಡೆಬಿಟ್ ಕಾರ್ಡ್‌ಗಳ ವೆಚ್ಚವನ್ನು ಮರಳಿ ಪಡೆಯುವುದು. ಚಾಲ್ತಿ ಖಾತೆಗಳ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕುಗಳು 14 ದಿನಗಳ ಅವಧಿ ಮೀರಿದ ಖಾತೆಗಳಿಗೆ ಖಾತೆ ಬಂದ್ ಮಾಡುವಾಗ 500ರಿಂದ 1000ವರೆಗೆ ಶುಲ್ಕ ವಿಧಿಸುತ್ತವೆ. ಬ್ಯಾಂಕ್ ಖಾತೆ ಬಂದ್ ಮಾಡುವ ಶುಲ್ಕದ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್‌ನ ಯಾವುದೇ ನಿರ್ದೇಶನ ಅಥವಾ ಸುತ್ತೋಲೆ ಇರುವುದಿಲ್ಲ. ಇದು ಬ್ಯಾಂಕುಗಳ ವಿವೇಚನೆಗೆ ಬಿಟ್ಟದ್ದು. * ರಮಾನಂದ ಶರ್ಮಾ