Advertisement
ಸೋಮವಾರ ಸಿಂಡಿಕೇಟ್ ಬ್ಯಾಂಕ್ ವಲಯ ಕೇಂದ್ರ ಕಚೇರಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಕರ್ನಾಟಕದ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ನಾನು ಒಬ್ಬ ಕ್ರೀಡಾಪಟು ನನಗೂ ಗೊತ್ತು. ಕ್ರಿಕೆಟ್ ಎಂದರೆ ಕೇವಲ ಪುರುಷರು ಆಡುವ ಕ್ರೀಡೆ ಎಂದು ಗುರ್ತಿಸುವ ಕಾಲವಿತ್ತು. ಆದರೆ, ಇಂದು ವಿಶ್ವ ಮಹಿಳಾ ಕ್ರಿಕೆಟ್ ಬಗ್ಗೆ ತಲೆಎತ್ತಿ ಮಾತನಾಡುವಂತಾಗಿದೆ ಹಾಗೂ ಮಹಿಳಾ ಕ್ರಿಕೆಟಿಗರೂ ಮಾಡಿರುವ ಸಾಧನೆ ನೆನೆಯುವಂತಾಗಿದೆ. ಆ ಪ್ರಾಮುಖ್ಯತೆ ಈಗ ಬಂದಿದೆ. ಭಾರತೀಯ ಮಹಿಳಾ ಕ್ರಿಕೆಟ್‌ಗೆ ಗೌರವ ತಂದುಕೊಟ್ಟ ಶಾಂತಾ ರಂಗಸ್ವಾಮಿ ಮುಂತಾದವರನ್ನು ಇಂದಿಗೂ ನೆನೆಯುತ್ತೇವೆ.
ಸಾಧನೆ ವಿಶ್ವಕ್ಕೆ ಮಾದರಿ: ಇಂಗ್ಲೆಂಡ್‌ನಲ್ಲಿ ಮಿತಾಲಿ ರಾಜ್ ನೇತೃತ್ವದ ಮಹಿಳಾ ಏಕದಿನ ಕ್ರಿಕೆಟ್ ತಂಡ, ತೋರಿದ ಸಾಧನೆ ವಿಶ್ವಕ್ಕೆ ಮಾದರಿ. ಕ್ರಿಕೆಟ್ ಕಾಶಿ ಎಂದೇ ಹೆಸರಾದ ಲಾರ್ಡ್ಸ್ ಮೈದಾನದಲ್ಲಿ ಫೈನಲ್ಸ್ ನಲ್ಲಿ ಬಂದ ಫಲಿತಾಂಶ ಅಭಿಮಾನಿಗಳಿಗೆ ಒಂದು ಕ್ಷಣ ಆಘಾತಕಾರಿ ಎನಿಸಿದ್ದರೂ ಬೇಸರವಂತೂ ಆಗಿಲ್ಲ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ಕೋಚ್ ಕಲ್ಪನಾ ಹಾಗೂ ಅವರ ಕೋಚ್ ಇರ್ಫಾನ್ ಸೇಟ್ ಅವರು ಮಾತನಾಡಿದರು. ಸಿಂಡಿಕೇಟ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್.ಎಸ್. ಪಾಂಡೆ, ಎಸ್.ಎಸ್. ಮಲ್ಲಿಕಾರ್ಜುನರಾವ್, ಮಹಾಪ್ರಬಂಧ ಭಾಸ್ಕರ್ ಹಂಡೆ ಹಾಗೂ ಇತರರು ಭಾಗವಹಿಸಿದ್ದರು.
ವಿಜಯಪುರದಲ್ಲಿ ಹುಟ್ಟಿ, ಬೆಂಗಳೂರಿಗೆ ಬಂದು ಕ್ರಿಕೆಟ್ ಕಲಿತು, ಭಾರತೀಯ ಮಹಿಳಾ ತಂಡದಲ್ಲಿ ಸ್ಥಾನ ಪಡೆದು ವಿಶ್ವ ಕಪ್ ಫೈನಲ್‌ನಲ್ಲಿ ಆಡಿದ್ದು ನನ್ನ ಜೀವಮಾನದ ಸಾಧನೆ. ಇಂಗ್ಲಿಷ್ ಭಾಷೆ ಬರದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನನ್ನ ಗುರು ಕಲ್ಪನಾ ಮೇಡಂಗೆ ಧನ್ಯವಾದಗಳು.-ರಾಜೇಶ್ವರಿ ಗಾಯಕ್ವಾಡ್, ನಂತರ ಎಡಗೈ ಸ್ಪಿನ್ನರ್