Advertisement

ವಿದ್ಯಾರ್ಥಿಗಳಲ್ಲಿ ದೃಢನಂಬಿಕೆ-ಛಲವಿದ್ದರೆ ಗುರಿ ಸಾಧನೆ

05:41 PM Mar 13, 2022 | Shwetha M |

ತಾಳಿಕೋಟೆ: ವಿದ್ಯಾರ್ಥಿಗಳಲ್ಲಿ ದೃಢನಂಬಿಕೆಯಿದ್ದರೆ ಗುರಿ ಸಾಧನೆ ಮಾಡಬಹುದು ಎಂದು ಕಕ್ಕೇರಿ ಪಪೂ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಕಾಶೀನಾಥ ಹೊರಮಠ ಹೇಳಿದರು.

Advertisement

ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಮಹಿಳಾ ಪಪೂ ಮಹಾವಿದ್ಯಾಲಯದ 2021-22ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಕುರಿತು ಏರ್ಪಡಿಸಲಾದ ಬೀಳ್ಕೊಡುವ ಹಾಗೂ ಸನ್ಮಾನ ಸಮಾರಂಭದಲ್ಲಿಅವರು ಮಾತನಾಡಿದರು.

ವಿದ್ಯಾರ್ಥಿಯಾದವನು ಅನವಶ್ಯಕ ವಾದಂತಹವುಗಳನ್ನು ಬಳಸುವುದು ಬೇಡ ಎಂದು ತಮ್ಮ ಸಾಧನೆ ಕುರಿತು ವಿವರಿಸಿದ ಅವರು, ನಾನು ಶಿಕ್ಷಣ ನೀಡಿದ ವಿದ್ಯಾರ್ಥಿಗಳಿಗೆ ಕಲಿಕೆ ಕಲಿಸುವ ಮೂಲಕ ರ್‍ಯಾಂಕ್‌ ವಿಜೇತನಾದೆ. ನಾನು ಅಂದುಕೊಂಡಂತೆ ತಿಳಿದುಕೊಂಡಂತೆ ಮಾಡಿಕೊಂಡಿದ್ದೇನೆ. ಅದು ನಾನಂದಂತೆಯೇ ಆಗಿದೆ ಎಂದರು.

ಬೀಳ್ಕೊಡುವ ಸಮಾರಂಭ ಅಂದರೆ ಅದೊಂದು ಯೋಗ ದುಃಖ ಎಂದು ಹೇಳಬಹುದು. ಇಂತಹ ಕಾರ್ಯಕ್ರಮಕ್ಕೆ ಬಂಧುಗಳನ್ನು ಕರೆ ತರುತ್ತಾರೆ, ಇಂತಹ ಕಾರ್ಯಕ್ರಮಕ್ಕೆ ಬಂದವ ನಾನೊಬ್ಬ ಬಂಧುವಾಗಿದ್ದು ಪರೀಕ್ಷೆ ಮತ್ತು ಜೀವನ ಮಾರ್ಗದರ್ಶನ ಕುರಿತು ತಿಳಿ ಹೇಳುತ್ತೇನೆಂದರು.

ಸಾಧನೆಯೆಂಬುದು ಎಡರು ತೊಡರುಗಳನ್ನು ನಿವಾರಣೆ ಮಾಡುತ್ತದೆ. ದ್ವೇಷ ಮತ್ತು ಪ್ರೀತಿ ಇವುಗಳನ್ನು ಅರ್ಥೈಯಿಸಿಕೊಂಡರೆ ಜೀವನ ಸಾರ್ಥಕ. ದ್ವೇಷ ಮಾಡುವುದಾದರೆ ನಮ್ಮ ಜೊತೆ ನಾವೇ ಮಾಡಬೇಕು. ಅಂತರಂಗದಲ್ಲಿ ಏನು ಮನಸ್ಸು ಮಾಡುತ್ತದೆ ಅದೇ ಮುಖ್ಯವೆಂದು ಹೇಳಿದ ಅವರು, ಗುರುಗಳು ಹೇಳುವ ಪರೀಕ್ಷೆ ಹಾಗೂ ಜೀವನದ ಗುಟ್ಟಿನ ಕುರಿತು ತಿಳಿ ಹೇಳಿದರಲ್ಲದೇ ದೇವರು ಇದ್ದಾನೆ ಆತ ಒಳ್ಳೆಯದು ಕೆಟ್ಟದ್ದು ಮಾಡುವದಿಲ್ಲ ಎಂದರು.

Advertisement

ಶ್ರೀಕಾಂತ ಪತ್ತಾರ ಮಾತನಾಡಿ, ತಂದೆ ತಾಯಿಗೆ ಗೌರವಿಸಿ ಅವರು ನಿಮಗಾಗಿ ಮಾಡಿದ ತ್ಯಾಗ ಕಾಣುತ್ತದೆ. ಅಧ್ಯಯನ ನಿಜವಾಗಿ ಮಾಡಿದರೆ ಸಹಾಯಹಸ್ತ ಚಾಚಲು ಅನೇಕ ಶಿಕ್ಷಣ ಹಾಗೂ ಸಂಘ ಸಂಸ್ಥೆಗಳು ಶಿಕ್ಷಣ ಅಭಿಮಾನಿಗಳು ಸಿದ್ಧರಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿವಿಎಸ್‌ ಮಹಿಳಾ ಪಪೂ ಕಾಲೇಜಿನ ಪ್ರಾಚಾರ್ಯೆ ಜೆ.ಸಿ. ಹಿರೇಮಠ ಮಾತನಾಡಿದರು. ಖಾಸ್ಗೇತೇಶ್ವರ ಮಠದ ವೇ| ಮುರುಘೇಶ ವಿರಕ್ತಮಠ ಸಾನ್ನಿಧ್ಯ ವಹಿಸಿದ್ದರು.

ವಿವಿ ಸಂಘದ ಅಧ್ಯಕ್ಷ ಎಸ್‌.ಎ. ಸರೂರ, ಸಹ ಕಾರ್ಯದರ್ಶಿ ವಿ.ವಿ. ಸಜ್ಜನ, ಮಹಿಳಾ ಪಪೂ ಕಾಲೇಜಿ ನ ಅಧ್ಯಕ್ಷ ಕೆ.ಸಿ. ಸಜ್ಜನ, ಸದಸ್ಯರಾದ ಆರ್‌.ಸಿ. ಪಾಟೀಲ, ಎ.ಎಸ್‌. ಆಲ್ಯಾಳ, ಪಿಯು ಪಪೂ ಕಾಲೇಜಿನ ಶಂಕರಗೌಡ ಹಿಪ್ಪರಗಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಬಿ.ವಿ. ಅಂಬಿಗೇರ, ಚಾಲುಕ್ಯ ಕರಿಯರ್‌ ಅಕಾಡೆಮಿ ನಿರ್ದೇಶಕ ಶಿಶುಕುಮಾರ ಉದಯರೆಡ್ಡಿ, ವಿವಿ ಸಂಘದ ಸದಸ್ಯರಾದ ಬಿ.ಎಸ್‌. ಚಳಗೇರಿ, ಜಿ.ಎಂ. ಪಾಟೀಲ, ವಿಶ್ವನಾಥ ಬಿಳೇಬಾವಿ, ಮಹಾಂತೇಶ ವಾಲಿ, ನ್ಯಾಯವಾದಿ ಎಸ್‌.ಜಿ. ಹಿರೇಮಠ, ಪ್ರಾಚಾರ್ಯ ಕರ್ಜಗಿ, ಕೆ. ಕಿಶೋರ್‌, ಭಂಟನೂರ ಹಾಗೂ ವಿದ್ಯಾರ್ಥಿನಿ ಪ್ರತಿನಿಧಿ ಸುರೇಖಾ ರಾಠೊಡ ಇದ್ದರು. ಶಿಕ್ಷಕ ಸೋಮಶೇಖರಯ್ಯ ಹಿರೇಮಠ ಹಾಗೂ ಸಹನಾ ಪತ್ತಾರ ಪ್ರಾರ್ಥಿಸಿದರು. ಉಪನ್ಯಾಸಕ ಎಸ್‌.ಎಸ್‌. ನಾಡಗೌಡ ಸ್ವಾಗತಿಸಿದರು. ಉಪನ್ಯಾಸಕ ಎಸ್‌.ಬಿ. ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next