Advertisement
ಶ್ರೀಶಂಕರ್ ಪದಕವೊಂದನ್ನು ಗೆದ್ದು ಇತಿಹಾಸ ನಿರ್ಮಿಸಬಹುದೆಂಬ ದೂರದ ನಿರೀಕ್ಷೆಯೊಂದಿತ್ತು. ಆದರೆ ಇಲ್ಲಿ ಅವರ ಸಾಧನೆ ಪ್ರಸಕ್ತ ಋತುವಿನ ಶ್ರೇಷ್ಠ ವೈಯಕ್ತಿಕ ದಾಖಲೆಯಾದ 8.36 ಮೀಟರ್‌ಗಿಂತಲೂ ಕಡಿಮೆಯಾಗಿತ್ತು. ಅಷ್ಟೇ ಅಲ್ಲ, ಅರ್ಹತಾ ಸುತ್ತಿಗಿಂತಲೂ (8 ಮೀಟರ್) ಕಡಿಮೆ ಸಾಧನೆಯಾಗಿತ್ತು.
Related Articles
“6 ಪ್ರಯತ್ನಗಳಲ್ಲಿ ಒಮ್ಮೆಯೂ 8 ಮೀಟರ್ ಗಡಿ ತಲುಪಲು ಸಾಧ್ಯ ವಾಗ ದಿದ್ದುದು ನಿಜಕ್ಕೂ ಆತನ ದುರದೃಷ್ಟ’ ಎಂಬುದಾಗಿ ಶ್ರೀಶಂಕರ್ ಅವರ ಅವರ ತಂದೆ ಹಾಗೂ ಕೋಚ್ ಕೂಡ ಆಗಿರುವ ಎಸ್. ಮುರಳಿ ಹೇಳಿದರು.
“ಆತನ 3ನೇ ಜಂಪ್ ಕೇವಲ 3 ಎಂ.ಎಂ. ಅಂತರದಿಂದ ಫೌಲ್ ಆಯಿತು. ಇದು ಕ್ರಮಬದ್ಧ ನೆಗೆತವಾಗಿದ್ದರೆ ಕನಿಷ್ಠ 8.16 ಮೀ. ದೂರದ ಸಾಧನೆ ದಾಖಲಾಗುವ ಮೂಲಕ ಪದಕವೊಂದನ್ನು ಜಯಿಸುತ್ತಿದ್ದ’ ಎಂಬುದು ಮುರಳಿ ಅನಿಸಿಕೆ.
Advertisement
ಪಾರುಲ್ ಚೌಧರಿ 12ನೇ ಸ್ಥಾನ3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್ ಚೌಧರಿ 9:38.09 ಸೆಕೆಂಡ್ಸ್ ಗಳ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರ್ಪಡಿ ಸಿದರೂ ಫೈನಲ್ ಪ್ರವೇಶಿಸುವಲ್ಲಿ ವಿಫಲ ರಾದರು. ಹೀಟ್‌ನಲ್ಲಿ 12ನೇ, ಒಟ್ಟಾರೆ ಯಾಗಿ 31ನೇ ಸ್ಥಾನಕ್ಕೆ ಕುಸಿದರು. ಪುರುಷರ 400 ಮೀ. ಹರ್ಡಲ್ಸ್ ನಲ್ಲಿ ಎಂ.ಪಿ. ಜಬೀರ್ ನಿರ್ವಹಣೆಯೂ ಕಳಪೆ ಯಾಗಿತ್ತು. ಹೀಟ್‌ನಲ್ಲಿ ಕೊನೆಯವರಾದರೆ (7ನೇ ಸ್ಥಾನ), ಒಟ್ಟಾರೆಯಾಗಿ 31ನೇ ಸ್ಥಾನಕ್ಕೆ ಇಳಿದರು.