ಬೆಂಗಳೂರು: ಅವಧಿ ಮೀರಿದ ಇಂಜಕ್ಷನ್ ನೀಡಿ ಮೂರು ವರ್ಷ ಮಗುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ ಸಂಜೀವಿನಿ ಆಸ್ಪತ್ರೆ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಯಾದ್ವಿ(2) ಎಂಬ ಮಗುವಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಯಾದ್ವಿಗೆ ಜ್ವರ ಹೆಚ್ಚಾಗಿದ್ದರಿಂದ ಸಂಜೀವಿನಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು,
ಡ್ರಿಪ್ಸ್ ಮೂಲಕ ಇಂಜೆಕ್ಷನ್ ನೀಡಿದ್ದರು. ಈ ವೇಳೆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಮಗುವಿನ ತಂದೆಕಿರಣ್ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅ.29 ರಂದು ಮಗು ಯಾದ್ವಿಗೆ ಜ್ವರ ಬಂದಿದ್ದು ಪಾಲಕರು ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಮಗು ಸುಸ್ತಾಗಿದೆಅಂತ ವೈದ್ಯರು ಡ್ರಿಪ್ಸ್ ಹಾಗೂ ಅದರಲ್ಲಿ ಇಂಜೆಕ್ಷನ್ ಹಾಕಿದ್ದಾರೆ. ಈ ಮದ್ದುಮಗುವಿನ ದೇಹಕ್ಕೆ ಹೋಗುತ್ತಿದ್ದಂತೆ ಮಗುವಿನ ತುಟಿಯಲ್ಲಿ ಊತ ಹಾಗೂ ರಕ್ತಬರಲು ಆರಂಭವಾಗಿದೆ. ಅದನ್ನು ಗಮನಿ ಸಿದ ಪಾಲಕರಿಗೆ, ವೈದ್ಯರು ಅವಧಿ ಮುಗಿದ ಡ್ರಿಪ್ಸ್ ಮತ್ತು ಇಂಜಕ್ಷನ್ ಕೊಟ್ಟಿರುವುದು ಗೊತ್ತಾಗಿದೆ. ಅದನ್ನ ಪ್ರಶ್ನಿಸಿದ್ದಕ್ಕೆ ವೈದ್ಯರು ತಪ್ಪನ್ನೆ ಸಮರ್ಥಿಸಿಕೊಂಡಿದ್ದಾರೆ. ಕೂಡಲೇಮಗುವನ್ನು ಪಾಲಕರು ಬೇರೊಂದು ಆಸ್ಪತ್ರೆಗೆ ದಾಖಲಿಸಿದ್ದರು.