ಹುಣಸೂರು: ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 14 ಕೆ.ಜಿ 80 ಗ್ರಾಂ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಣಸೂರು ತಾಲೂಕಿನ ಕೂಡ್ಲೂರು ಗ್ರಾಮದ ಅಂತೋಣಿಯವರ ಪುತ್ರ ಸಂತೋಷ್ ಕುಮಾರ್ ಬಂಧಿತ ಆರೋಪಿ.
ತನ್ನ ಜಮೀನಿನಲ್ಲಿ ಶುಂಠಿ, ತೊಗರಿ ಮತ್ತು ಕಬ್ಬಿನ ಮಧ್ಯೆ ಗೌಪ್ಯವಾಗಿ ಗಾಂಜಾವನ್ನು ಬೆಳೆದಿದ್ದನು. ಖಚಿತ ಮಾಹಿತಿ ಮೇಲೆ ಹುಣಸೂರು ಡಿವೈಎಸ್ಪಿ ಎಂ.ಕೆ.ಮಹೇಶ್ ಮರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಸಿ.ವಿ.ರವಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿ ಸಮೇತ ಹೊಲದಲ್ಲಿ ಬೆಳೆದ 9 ಗಾಂಜಾ ಗಿಡವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ದಾಳಿ ಸಿಬ್ಬಂದಿಗಳಾದ ಮಂಜುನಾಥ್, ರಮೇಶ್, ಮಲ್ಲೇಶ್, ನಂದೀಶ್, ರವಿ, ಇಮ್ರಾನ್‌ಷರೀಫ್, ಮೆಹರಾಜ್ ಪಾಷ,ಸುಂದರ್‌ರಾಜ್ ಭಾಗವಹಿಸಿದ್ದರು.