Advertisement

ಖರ್ಚು-ವೆಚ್ಚ  ಲೆಕ್ಕ ಪತ್ರ ಸಲ್ಲಿಕೆ ಕಡ್ದಾಯ

05:36 PM Aug 26, 2018 | Team Udayavani |

ನರೇಗಲ್ಲ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಿದ ಪ್ರತಿಯೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿದ ದಿನದಿಂದ ಫಲಿತಾಂಶ ಘೋಷಣೆಯ ದಿನಾಂಕದವರೆಗೆ ಮಾಡಲಾದ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ವಿವರ ನೀಡುವುದು ಕಡ್ಡಾಯವಾಗಿದೆ. ಖರ್ಚು ವೆಚ್ಚ ನೀಡದ ಪಕ್ಷದಲ್ಲಿ ಸದಸ್ಯತ್ವವನ್ನು ಅನರ್ಹಗೊಳಿಸುವ ಸಾಧ್ಯತೆ ಇದೆ ಎಂದು ನರೇಗಲ್ಲ ಪಪಂ ಚುನಾವಣಾಧಿಕಾರಿ ಎಸ್‌.ಆರ್‌. ಹೂಗಾರ ತಿಳಿಸಿದರು.

Advertisement

ಸ್ಥಳೀಯ ಪಪಂ ಸಭಾಭವನದಲ್ಲಿ ಶನಿವಾರ ಪಪಂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಏರ್ಪಡಿಸಿದ್ದ ಚುನಾವಣಾ ಖರ್ಚು ವೆಚ್ಚ ದಾಖಲಾತಿ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬ ಅಭ್ಯರ್ಥಿಯು ಕಡ್ಡಾಯವಾಗಿ ದೈನಂದಿನ ಚುನಾವಣಾ ಖರ್ಚು ವೆಚ್ಚಗಳನ್ನು ನೀಡಲಾದ ನಮೂನೆಯ ರಜಿಸ್ಟರ್‌ಗಳಲ್ಲಿ ನಿರ್ವಹಿಸತಕ್ಕದ್ದು. ಚುನಾವಣಾ ಫಲಿತಾಂಶ ಘೋಷಣೆಯಾದ 30 ದಿನದೊಳಗೆ ರಿಟರ್ನಿಂಗ್‌ ಅಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ತಪ್ಪಿದಲ್ಲಿ ಚುನಾವಣಾ ಆಯೋಗವು ಸದಸ್ಯತ್ವ ಅನರ್ಹಗೊಳಿಸುವ ಸಾಧ್ಯತೆ ಇರುತ್ತದೆ ಎಂದರು.

ಚುಣಾವಣಾಧಿಕಾರಿ ಡಿ.ಐ. ಅಸುಂಡಿ ಮಾತನಾಡಿ, ಸರ್ವಜನಿಕ ಸಭೆ, ಮೆರವಣಿಗೆ ಹಾಗೂ ಪ್ರಚಾರದ ಕರಪತ್ರ, ಆಡಿಯೋ ಮತ್ತು ವಿಡಿಯೋ ಕ್ಯಾಸೆಟ್‌ಗಳು, ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡವುದು ಸೇರಿದಂತೆ ಇತರೆ ಚುನಾವಣಾ ಖರ್ಚುವೆಚ್ಚಗಳಿಗೆ ರಾಜ್ಯ ಚುನಾವಣಾ ಆಯೋಗವು ದರ ನಿಗದಿ ಮಾಡಿದೆ. ಪಪಂ ಅಭ್ಯರ್ಥಿಗಳು ಒಂದು ಲಕ್ಷ ರೂ.ಗಳ ಮಿತಿ ನೀಡಲಾಗಿದೆ. ಎಲ್ಲ ಅಭ್ಯರ್ಥಿಗಳ ಚುನಾವಣಾ ಖರ್ಚು ವೆಚ್ಚದ ಮೇಲೆ ಆಯೋಗದ ಅಧಿಕಾರಿಗಳ ಕಣ್ಗಾವಲು ಇರುತ್ತದೆ. ರಾಜ್ಯ ಚುನಾವಣಾ ಅಯೋಗ ತಿಳಿಸಿರುವ ಮಾದರಿ ನೀತಿ ಸಂಹಿತೆಯ ಅಡಿಯಲ್ಲಿ ಚುನಾವಣೆ ನಡೆಸಬೇಕು ಎಂದರು.

ಪಪಂಗೆ ಸ್ಪರ್ಧಿಸಿರುವ 52 ಅಭ್ಯರ್ಥಿಗಳು ಇದ್ದರು. ಸೇಕ್ಟರ್‌ ಅಧಿಕಾರಿ ಸಂತೋಷ ಪಾಟೀಲ, ಸಹಾಯಕ ಚುನಾವಣಾ ಅಧಿಕಾರಿ ಎಸ್‌.ಆರ್‌. ಶಾನಬೋಗ್‌, ಭಾರತಿ ಮಲ್ಲಾಪುರ, ಚುನಾವಣಾ ಲೆಕ್ಕಪತ್ರ ಅಧಿಕಾರಿ ಸಲ್ಮಾ ಸಂಗ್ರೇಶಕೊಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next