Advertisement
ಈ ಸಂಬಂಧ ಶಾಲಾ ಶಿಕ್ಷಣ ರಾಜ್ಯ ಪಠ್ಯಕ್ರಮ ಸಮಿತಿ (ಎಸ್‌ಸಿಎಫ್-ಎಸ್‌ಇ)ಗೆ ಶಿಫಾರಸು ಮಾಡಲು ತಜ್ಞರ ಪರಿಶೀಲನ ಸಮಿತಿಯನ್ನು ರಚಿಸಲಾಗಿತ್ತು. ಜೂನಿಯರ್ ಕಾಲೇಜುಗಳಲ್ಲಿ ಮರಾಠಿ ಭಾಷೆ ಕಡ್ಡಾಯದೊಂದಿಗೆ ಕನಿಷ್ಠ ಒಂದು ಮತ್ತು ಗರಿಷ್ಠ ಮೂರು ಭಾಷೆಗಳನ್ನು ಕಲಿಸಬೇಕು ಎಂದು ಶಿಕ್ಷಣ ತಜ್ಞರು ಶಿಫಾರಸು ಮಾಡಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ 11 ಮತ್ತು 12ನೇ ತರಗತಿಗಳಿಗೆ ಮರಾಠಿ ಭಾಷೆ ಕಲಿಕೆಯು ಕಡ್ಡಾಯವಲ್ಲ.
ಸಮಿತಿಯ ಶಿಫಾರಸುಗಳ ಪ್ರಕಾರ ಮರಾಠಿ ಯನ್ನು ಮಾಧ್ಯಮವಾಗಿ ಕಲಿಯುವವರಿಗೆ ಶಾಲೆಯು “ವೃತ್ತಿಪರ ಮರಾಠಿ’ಯನ್ನು ಕಡ್ಡಾಯ ವಾಗಿ ಬೋಧಿಸಬೇಕು. 10ನೇ ತರಗತಿಯವರೆಗೆ ಮರಾಠಿಯನ್ನು ಅಧ್ಯಯನ ಮಾಡದ ವಿದ್ಯಾರ್ಥಿ ಗಳಿಗೆ “ಕ್ರಿಯಾತ್ಮಾಕ ಮರಾಠಿ’ಯನ್ನು ಪರಿ ಚಯಿಸಬೇಕು. ಮರಾಠಿಯೇತರ ಮಾಧ್ಯಮದ ಶಾಲೆಗಳ ವಿದ್ಯಾರ್ಥಿಗಳು “ಸಾಮಾನ್ಯ ಮರಾಠಿ’ ಕಲಿಯಬೇಕಾಗುತ್ತದೆ. ರಾಜ್ಯ ಪಠ್ಯಪುಸ್ತಕ ಬ್ಯೂರೋ “ಬಾಲ ಭಾರತಿ’ಯು ವಿವಿಧ ಹಂತದ ವಿದ್ಯಾರ್ಥಿಗಳಿಗಾಗಿ ಸ್ವತಂತ್ರ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸುವಂತೆ ಸಮಿತಿಯು ಶಿಫಾರಸು ಮಾಡಿದೆ.
Related Articles
ಸರಕಾರದ ಈ ನಿರ್ಧಾರದಿಂದ ಮರಾಠಿ ಭಾಷೆಯನ್ನು ಐಚ್ಛಿಕವಾಗಿ ಕಲಿಸುತ್ತಿದ್ದ ಜೂನಿಯರ್ ಕಾಲೇಜು ಹಾಗೂ ರಾಜ್ಯ ಪಠ್ಯಕ್ರಮ ಹೊರತುಪಡಿಸಿದ ಮಂಡಳಿಗಳಿಗೆ ತೊಂದರೆ ಎದುರಾಗಲಿದೆ. ಶಾಲೆಗಳಲ್ಲಿ ಮರಾಠಿ ಕಲಿಕೆ ಮತ್ತು ಬೋಧನೆ ಕಡ್ಡಾಯ ಕಾಯ್ದೆ 2020ರಲ್ಲೇ ಅನುಷ್ಠಾನಕ್ಕೆ ಬಂದಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಶಾಲಾ ಶಿಕ್ಷಣ ಪಠ್ಯಕ್ರಮ ಕರಡಿನಲ್ಲಿ ಇಂಗ್ಲಿಷ್ ಕಡ್ಡಾಯ ಕಲಿಕೆಗೆ ಕೊಕ್ ನೀಡಿ ಕಡ್ಡಾಯ ಕಲಿಕೆಯ ಭಾಷೆಗಳಲ್ಲಿ ಮರಾಠಿಯನ್ನೂ ಸೇರಿಸಲಾಗಿತ್ತು.
Advertisement