Advertisement

ಕೊಲ್ಹಾರ್‌ ಬಸ್‌ ನಿಲ್ದಾಣದಲ್ಲಿಲ್ಲ ಸೌಕರ್ಯ

04:40 PM Jan 28, 2018 | |

ಬಸವನಬಾಗೇವಾಡಿ: ತಾಲೂಕಿನ ಕೊಲ್ಹಾರ ಬಸ್‌ ನಿಲ್ದಾಣ ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದು, ಪ್ರವಾಸಿಗರು ದಿನನಿತ್ಯ ಪರದಾಡುವಂತಾಗಿದೆ.

Advertisement

ಕೊಲ್ಹಾರ ತಾಲೂಕು ಕೇಂದ್ರದ ಸ್ಥಾನಮಾನ ಹೊಂದಿದ್ದು, ಹತ್ತಾರು ಹಳ್ಳಿಗಳ ಕೇಂದ್ರಬಿಂದುವಾಗಿದೆ. ವಿಜಯಪುರ, ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲಿರುವ ಈ ಪಟ್ಟಣಕ್ಕೆ ದಿನನಿತ್ಯ ಹುಬ್ಬಳ್ಳಿ, ಸೊಲ್ಲಾಪುರ, ವಿಜಯಪುರ, ಹೈದ್ರಾಬಾದ
ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ದಿನನಿತ್ಯ ನೂರಾರು ಸಾರಿಗೆ ಬಸ್‌ಗಳು ಸಂಚರಿಸುತ್ತವೆ.

ಕೊಲ್ಹಾರ ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರು, ಸುಲಭ ಶೌಚಾಲಯ, ಊಟ ಮತ್ತು ಉಪಹಾರ ಹೋಟೆಲ್‌ ಹಾಗೂ
ಸಾರಿಗೆ ನಿಯಂತ್ರಕರ ಕೊರತೆ, ದಿನನಿತ್ಯ ಬಸ್‌ ನಿಲ್ದಾಣದಲ್ಲಿ ಸ್ವತ್ಛತೆ ಸೇರಿದಂತೆ ಹತ್ತಾರು ಸಮಸ್ಯೆಗಳು ಎದುರಾಗುತ್ತಿವೆ. ಇಲ್ಲಿನ ಜನರು ಮತ್ತು ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರೂ ಈಶಾನ್ಯ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಗಮನಹರಿಸುತ್ತಿಲ್ಲ. 

ಇದರಿಂದ ಈ ಭಾಗದಲ್ಲಿ ದಿನನಿತ್ಯ ನೂರಾರು ವಾಹನಗಳಲ್ಲಿ ಸಂಚರಿಸುತ್ತಿರುವ ಜನರು ಹಿಡಿಶಾಪ ಹಾಕುವುದು
ಸಾಮಾನ್ಯವಾಗಿದೆ. ಕೊಲ್ಹಾರ ಪಟ್ಟಣ ವ್ಯಾಪಾರಿ ಕೇಂದ್ರಕ್ಕೆ ಹೆಸರುವಾಸಿಯಾಗಿದೆ.

ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನರು ಮತ್ತು ರಾಜ್ಯ ಹೊರ ರಾಜ್ಯಗಳು ಈ ಕೋಲ್ಹಾರ ಮಾರ್ಗವಾಗಿ ಸಂಚರಿಸುತ್ತವೆ. ಜನರಿಗೆ ಶುದ್ಧ ಕುಡಿಯುವ ನೀರು, ಉಪಹಾರ, ಮಹಿಳೆಯರಿಗೆ ಸುಲಭ ಶೌಚಾಲಯ
ವ್ಯವಸ್ಥೆ ಮರೀಚಿಕೆಯಾಗಿದೆ. 

Advertisement

ಗ್ರಾಮೀಣ ಭಾಗದಿಂದ ಬಂದ ಜನರಿಗೆ ಬಸ್‌ಗಳ ಸಂಚಾರದ ಮಾಹಿತಿ ನೀಡಲು ಸಾರಿಗೆ ನಿಯಂತಕರ ಕೊರತೆ
ಕಂಡುಬರುತ್ತದೆ. ಸ್ವಲ್ಪ ಸಮಯ ಪಡೆದು ವಿಶ್ರಾಂತಿ ಪಡೆಯಬೇಕೆಂದರೆ ಬಸ್‌ ನಿಲ್ದಾಣದಲ್ಲಿನ ಸ್ವತ್ಛತೆಯ ಕೊರತೆ.
ಇದರಿಂದ ಜನ ಬೇಸತ್ತಿದ್ದಾರೆ ಕೊಲ್ಹಾರ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಉಪಹಾರ ಹೋಟೆಲ್‌ ಬಗ್ಗೆ ಈಗಾಗಲೇ
2 ಬಾರಿ ಟೆಂಡರ್‌ ಕರೆಯಲಾಗಿದೆ. ಆದರೆ ಯಾರು ಕೂಡಾ ಟೆಂಡರ್‌ ಹಾಕಿಲ್ಲಾ. ಬಸ್‌ ನಿಲ್ದಾಣದ ಸ್ವತ್ಛತೆಗಾಗಿ ಒಬ್ಬರನ್ನು ನೇಮಿಸಲಾಗಿದೆ. ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯಿದೆ. ಸಾರಿಗೆ ನಿಯಂತ್ರಕರ ಕೊರತೆಯಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
 ಎಂ.ಎಸ್‌. ಹಿರೇಮಠ, ಬಸವನಬಾಗೇವಾಡಿ ಸಾರಿಗೆ ಘಟಕ ವ್ಯವಸ್ಥಾಪಕ 

ಈ ಮುನ್ನ ಕೊಲ್ಹಾರ ಬಸ್‌ ನಿಲ್ದಾಣಕ್ಕೆ ಯಾವುದೇ ಬಸ್‌ಗಳು ಬರುತ್ತಿರಲ್ಲಿಲ್ಲ. ರಾಷ್ಟ್ರೀಯ ಹೆದ್ದಾರಿಯ ಮೇಲೆ
ಸಂಚರಿಸುತ್ತಿದ್ದವು. ಶಾಸಕ ಶಿವಾನಂದ ಪಾಟೀಲ ಬಸ್‌ ನಿಲ್ದಾಣಕ್ಕೆ ಬರುವ ವ್ಯವಸ್ಥೆ ಕೈಗೊಂಡಿದ್ದಾರೆ. ಅಲ್ಲದೇ
ಸೌಕರ್ಯ ಒದಗಿಸಿಕೊಡಲಾಗಿದೆ. 
 ರಫೀಕ ಪಕಾಲಿ, ಕೊಲ್ಹಾರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಪ್ರಕಾಶ ಬೆಣ್ಣೂರ

Advertisement

Udayavani is now on Telegram. Click here to join our channel and stay updated with the latest news.

Next