Advertisement
ನಂಜನಗೂಡು-ಮೈಸೂರು ಮಧ್ಯ ದಲ್ಲಿರುವ ರಾಷ್ಟ್ರೀಯ ಹೆದ್ದಾರಿಯು ಅವ್ಯವಸ್ಥೆಗಳ ಆಗರವಾಗಿದೆ. ಇಲ್ಲಿ ಸಂಚರಿಸುವ ವಾಹನ ಗಳಿಂದ ಟೋಲ್ ಸುಂಕ ದಿಂದ ಕೋಟಿ ಕೋಟಿ ರೂ. ವಸೂಲಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ವಾಹನ ಸವಾರರಿಗೆ ನೀಡಿರುವ ಕೊಡುಗೆ ಎಂದರೆ ಅದು ಸರಣಿ ಅಪಘಾತ ಹಾಗೂ ಆಸ್ಪತ್ರೆ ವಾಸ ಎಂಬಂತಾಗಿದೆ. ಈ ರೀತಿಯ ಪರಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
Related Articles
Advertisement
ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ಹಾಲಿ ಅಧ್ಯಕ್ಷರೂ ಆಗಿರುವ ಮಹದೇವ ಪ್ರಸಾದ್ ಇದೇ ಸ್ಥಳದಲ್ಲಿ ಅಪಘಾತಕ್ಕೀಡಾಗಿ ಕೈ ಮುರಿದು ಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಸಾಕಷ್ಟು ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿರುವ ನಿದರ್ಶನಗಳು ಇವೆ. ಇಲ್ಲಿ ಅಪಘಾತ ಸಂಭವಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ನೇರ ಕಾರಣ ಎಂದು ವಾಹನ ಸವಾರರು ದೂರಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಕಚೇರಿಯೂ ಈಗ ಮೈಸೂರಿನಲ್ಲಿ ಇಲ್ಲವಾಗಿದ್ದು, ಅದಕ್ಕೆ ನೈಜ ಸ್ಥಿತಿಯನ್ನು ತಿಳಿಸುವ ಬಗೆ ಹೇಗೆ ಎಂಬುದೇ ವಾಹನ ಸವಾರರ ಯಕ್ಷಪ್ರಶ್ನೆಯಾಗಿದೆ.
ಮತ್ತಷ್ಟು ಮಣ್ಣು ಕುಸಿದರೆ ಸಂಚಾರವೇ ಸ್ಥಗಿತ
ರಾಷ್ಟ್ರೀಯ ಹೆದ್ದಾರಿಯ ಏರಿ (ಧರೆ) ಕಡಕೊಳ ಬಳಿ ಈಗ ಕುಸಿಯಲು ಆರಂಭಿಸಿದೆ. ಅಲ್ಲಿ ಕೆಲವೇ ಮೀಟರ್ ಅಂತರದಲ್ಲಿರುವ ವರುಣಾ ನಾಲೆಯ ಮೇಲ್ಗಾಲುವೆ ಹಾಗೂ ರೈಲಿನ ಮೇಲ್ಸೇತುವೆ ಬಳಿ ಧರೆಯ ಮಣ್ಣು ಕುಸಿಯತೊಡಗಿದ್ದು, ಅಲ್ಲಿನ ಕಲ್ಲು ಮಣ್ಣುಗಳ ರಾಶಿ ಹೆದ್ದಾರಿಗೆ ಬಂದು ಬೀಳತೊಡಿಗಿದೆ. ಈ ಜಾಗದಲ್ಲಿ ಮತ್ತಷ್ಟು ಕುಸಿತವಾದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಕುಸಿತ ಸ್ವಲ್ಪ ಹೆಚ್ಚಾದರೆ ಬೆಂಗಳೂರು ನೀಲಗಿರಿ ರಸ್ತೆಯ (ನಂಜನಗೂಡು-ಮೈಸೂರು ಮಧ್ಯೆ) ಸಂಚಾರವೇ ಸ್ಥಗಿತವಾಗುವ ಸಾಧ್ಯತೆ ಇದೆ.
– ಶ್ರೀಧರ್ ಆರ್.ಭಟ್