ವಿಜಯಪುರ: ಮಹಾರಾಷ್ಟ್ರದ ಖಂಡಾಲಾ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪುಣೆ ನಗರಕ್ಕೆ ಗುಳೆ ಹೊರಟಿದ್ದ ವಿಜಯಪುರ ಜಿಲ್ಲೆ ಕೂಲಿ ಕಾರ್ಮಿಕರ ಪೈಕಿ 18 ಮಂದಿ ಮೃತಪಟ್ಟ ದುರ್ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಮುಂಜಾನೆ 4.45ರ ಸುಮಾರಿಗೆ ಬೆಂಗ ಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಸತಾರ ಬಳಿಯ ಖಂಡಾಲಾದಲ್ಲಿ ಸಾಗುತ್ತಿದ್ದಾಗ ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ಮಿಕರಿದ್ದ ಕ್ಯಾಂಟರ್ ಬ್ಯಾರಿಕೇಡ್‌ಗೆ ಅಪ್ಪ ಳಿಸಿ ಕಂದಕಕ್ಕೆ ಬಿದ್ದು ಅವಘಡ ಸಂಭವಿಸಿದೆ.
ವಿಜಯಪುರ ಜಿಲ್ಲೆಯ ಮದಭಾವಿ ತಾಂಡಾ, ಕೂಡಗಿ ತಾಂಡಾ, ಹಡಗಲಿ ತಾಂಡಾ, ರಾಜನಾಳ ಹಾಗೂ ನಾಗಠಾಣ ತಾಂಡಾ ನಿವಾಸಿ ಕೂಲಿ ಕಾರ್ಮಿಕರು ದುಡಿಮೆ ಅರಸಿ ಪುಣೆಗೆ ಹೊರಟಿದ್ದರು. ಮೃತ ಕಾರ್ಮಿಕರೆಲ್ಲರೂ ಲಂಬಾಣಿ ತಾಂಡಾದ ಬಂಜಾರಾ ಸಮು ದಾಯದಕ್ಕೆ ಸೇರಿದವರಾಗಿದ್ದಾರೆ. ಘಟನೆ ಯಲ್ಲಿ ಇನ್ನೂ 14 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಖಂಡಾಲಾ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದಭಾವಿ ತಾಂಡಾದ ದೇವಾನಂದ ರಾಠೊಡ (35), ದೇವಾಬಾಯಿ ರಾಠೊಡ (27), ಕಿರಣ ರಾಠೊಡ (15), ಸಂಗೀತಾ (ರಂಗೀತಾ)ರಾಠೊಡ (25), ಪ್ರಿಯಾಂಕಾ ರಾಠೊಡ (18), ಪಲ್ಲುಭಾಯಿ ರಾಠೊಡ (34), ತನ್ವೀರ್ ರಾಠೊಡ (ಒಂದೂವರೆ ವರ್ಷ), ವಿsuಲ ರಾಠೊಡ (40), ಕೂಡಗಿ ತಾಂಡಾದ ಅರ್ಜುನ ಚವ್ಹಾಣ (30), ಶ್ರೀಕಾಂತ ರಾಠೊಡ (37), ಸೀನಿ ರಾಠೊಡ (30), ಹಡಗಲಿ ತಾಂಡಾದ ಶಂಕರ ಚವ್ಹಾಣ (55), ಸಂತೋಷ ನಾಯಕ (32), ಮಂಗಳಾಬಾಯಿ ನಾಯಕ (42), ನಾಗಠಾಣದ ಮಾಧವಿ ರಾಠೊಡ (45), ರಾಜನಾಳ ತಾಂಡಾದ ಕೃಷ್ಣಾ ಪವಾರ (57), ಲಾರಿ ಚಾಲಕ ವಿಜಯಪುರದ ಮೆಹಬೂಬ ಅತ್ತಾರ (55) ಹಾಗೂ ಆತನ ಮಗ ಮಾಜಿದ ಅತ್ತಾರ (25) ಸಾವಿಗೀಡಾದವರು.
ಘಟನೆಯ ಸುದ್ದಿ ತಿಳಿಯುತ್ತಲೇ ವಿಜಯಪುರ ಗ್ರಾಮೀಣ ಪೊಲೀಸರಿಗೆ ಎಸ್ಪಿ ಪ್ರಕಾಶ ನಿಕ್ಕಂ ಸೂಚನೆ ನೀಡಿ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವ ಹಾಗೂ ಮೃತದೇಹಗಳನ್ನು ಜಿಲ್ಲೆಗೆ ತರಿಸಿಕೊಳ್ಳಲು ಸಾತಾರ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿದರು.