Advertisement
ಫೆ.18ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಡೆಯುತ್ತಿದ್ದು, ಗುರುವಾರ ಯಲ್ಲಾಪುರದ ಗಂಗೆ ಮನೆಯ ಬ್ರಹ್ಮಚಾರಿ ಶ್ರೀನಾಗರಾಜ ಭಟ್ಟರು ಸಂಸ್ಥಾನದ 55ನೇ ಯತಿಗಳಾಗಿ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳಿಂದ ಸನ್ಯಾಸ ಸ್ವೀಕರಿಸಲಿದ್ದಾರೆ.
Related Articles
Advertisement
ಮಧ್ಯಾಹ್ನ 3.30ಕ್ಕೆ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಧರ್ಮ ಸಭೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ.
ಹರಿಹರಪುರದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಮಹಾ ಸ್ವಾಮೀಜಿ, ಕೂಡಲಿ ಶೃಂಗೇರಿ ಮಠದ ಶ್ರೀವಿದ್ಯಾ ವಿಶ್ವೇಶ್ವರ ಭಾರತೀ ಮಹಾ ಸ್ವಾಮೀಜಿ, ಹೊಳೆನರಸಿಪುರದ ಪ್ರಕಾಶಾನಂದೇಂದ್ರ ಸರಸ್ವತೀ ಮಹಾಸ್ವಾಮೀಜಿ, ಕಾಸರಗೋಡು ಎಡನೀರುಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾ ಸ್ವಾಮೀಜಿಗಳು, ಶ್ರೀಮನ್ನೆಲಮಾವುಮಠದ ಶ್ರೀಮಾಧವಾನಂದ ಭಾರತೀಯ ಮಹಾ ಸ್ವಾಮೀಜಿ, ತುರುವೇಕೆರೆಯ ಶ್ರೀಪ್ರಣವಾನಂದ ತೀರ್ಥ ಮಹಾಸ್ವಾಮೀಜಿಗಳು, ಕಾಂಚಿಂಪುರಂದ ಶ್ರೀಆತ್ಮಬೋಧ ತೀರ್ಥ ಸ್ವಾಮೀಜಿ, ಶ್ರೀಸಹಜಾನಂದ ತೀರ್ಥ ಸ್ವಾಮೀಜಿ, ಶ್ರೀಅಂಜನಾನಂದ ತೀರ್ಥ ಸ್ವಾಮೀಜಿ ಹಾಗೂ ನೂತನ ಶ್ರೀಗಳು ಸಾನ್ನಿಧ್ಯ ನೀಡಲಿದ್ದಾರೆ. ಕೇಂದ್ರ ಸಚಿವ ಪ್ರಹ್ಕಾಯ ಜೋಶಿ ಪಾಲ್ಗೊಳ್ಳುವರು. ಇದೇ ವೇಳೆ ಶ್ರೀಗಳಿಂದ ವಿರಚಿತ ಯೋಗ ವಾಸಿಷ್ಠ ಪ್ರಥಮ ಸಂಪುಟ ಬಿಡುಗಡೆ ಆಗಲಿದೆ. ಗುರುವಾರ ಶ್ರೀಮಠಕ್ಕೆ ೨೦ ಸಹಸ್ರಕ್ಕೂ ಅಧಿಕ ಭಕ್ತರ ಆಗಮನದ ನಿರೀಕ್ಷೆ ಇದೆ.
ವಿವಿಧ ಧಾರ್ಮಿಕ ಕಾರ್ಯಕ್ರಮ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಕಂಚಿಪುರದ ಶ್ರೀಆತ್ಮಬೋಧ ತೀರ್ಥ ಸ್ವಾಮೀಜಿ, ಶ್ರೀಸಹಜಾನಂದ ತೀರ್ಥ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಶತಚಂಡಿ ಹವನದ ಪೂರ್ಣಾಹುತಿ ಬುಧವಾರ ನಡೆಯಿತು. ಬ್ರಹ್ಮ ಚಾರಿ ನಾಗರಾಜ ಭಟ್ಟರ ಸಂನ್ಯಾಸ ಗ್ರಹಣ ಸಂಕಲ್ಪ, ಪುಣ್ಯಾಹ, ನಾಂದಿಶ್ರಾದ್ಧ, ಮಾತೃಕಾ ಪೂಜಾದಿ ಕರ್ಮಗಳು ಅಗ್ನಿಹೋತ್ರಿ ಭಾಲಚಂದ್ರ ಉಪಾಧ್ಯಾಯರು ಗೋಕರ್ಣ ಹಾಗೂ ಶ್ರೀಮಠದ ವೈದಿಕರು, ಅನೇಕ ವಿದ್ವಾಂಸರಿಂದ ನಡೆದವು.
8 ಸಹಸ್ರಕ್ಕೂ ಅಧಿಕ ಭಕ್ತರಿಗೆ ಅನ್ನ ಪ್ರಸಾದ ವಿತರಣೆ
ಸ್ವರ್ಣವಲ್ಲೀ ಮಠದಲ್ಲಿ ನಡೆಯುತ್ತಿರುವ ನಾಲ್ಕನೇ ದಿನದ ಅನ್ನ ಪ್ರಸಾದ ವಿತರಣೆಯೂ 8 ಸಾವಿರಕ್ಕೂ ಅಧಿಕ ಶಿಷ್ಯ ಭಕ್ತರಿಗೆ ಶ್ರದ್ಧೆಯಿಂದ ವಿತರಿಸಲಾಯಿತು. ಕೇವಲ ಒಂದುವರೆ ತಾಸಿನಲ್ಲಿ ಪ್ರಸಾದ ವಿತರಣೆ ನಡೆಯಿತು.
ಅನ್ನ ಪ್ರಸಾದದಲ್ಲಿ ಸಂಬಾರ, ಸಾಸಿವೆ, ಪಲ್ಯ, ಪಾಯಸ, ಬುಂದಿಲಾಡುಗಳನ್ನು 15 ಕೌಂಟರ್ ಮೂಲಕ ವಿತರಿಸಲಾಯಿತು.
ಎರಡು ಕೌಂಟರ ಮೂಲಕ ಚಹಾ, ಕಷಾಯ, ಅವಲಕ್ಕಿ, ಮೊಸರು ನೀಡಿ ಆಗಮಿಸಿದ ಶಿಷ್ಯ ಭಕ್ತರಿಗೆ ಬೆಳಗಿನಿಂದ ಸಂಜೆ ತನಕ ವಿತರಿಸಲಾಯಿತು. ಭಕ್ತರು ತಮ್ಮ ಶಕ್ತ್ಯಾನುಸಾರ ಹಾಲು, ಮೊಸರು, ಅಡಿಕೆ ಹಾಳೆ, ಬೆಲ್ಲ, ಕಿರಾಣಿ, ತುಪ್ಪ, ತರಕಾರಿ, ಅಕ್ಕಿ, ಕಾಯಿಗಳೂ ಸೇವೆಯಾಗಿ ಸಮರ್ಪಿಸಿದರು.