ಚಿತ್ತಾಪುರ: ಕ್ಷಯರೋಗ ನಿವಾರಿಸಲು ರೋಗಿಗಳಿಗೆ ಪೌಷ್ಟಿಕ ಪೌಡರ್ ನೀಡುತ್ತಿರುವ ಎಸಿಸಿ ಸಿಮೆಂಟ್ ಕಂಪನಿ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ| ವಿವೇಕಾನಂದ ರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ತಾಲೂಕು ಆರೋಗ್ಯ ಕಚೇರಿ, ಕಲಬುರಗಿಯ ಸಕ್ಷಮ್ ಪರ್ವ ಟಾಟಾ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ , ಎಸಿಸಿ ಸಿಮೆಂಟ್ ಕಂಪನಿ ಸಹಯೋಗದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಪೌಡರ್ ವಿತರಿಸುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕ್ಷಯರೋಗಿಳ ಆರೋಗ್ಯ ಸೇವೆಗೆ ಸಹಕಾರ ನೀಡುತ್ತಿರುವ ವಾಡಿ ಎಸಿಸಿ ಸಿಮೆಂಟ್ ಕಂಪನಿ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಎಸಿಸಿ ಸಿಮೆಂಟ್ ಕಂಪನಿ ಹಿರಿಯ ಪ್ರಧಾನ ವ್ಯವಸ್ಥಾಪಕ ನಾಗೇಶ್ವರರಾವ್ ಮಾತನಾಡಿ, ಕಂಪನಿ ವತಿಯಿಂದ ನೀಡುತ್ತಿರುವ ಪೌಷ್ಟಿಕ ಪೌಡರ್ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೂರಕವಾಗಿದೆ ಎಂದರು.
ಆರೋಗ್ಯಾಧಿಕಾರಿ ಡಾ| ಅಮರದೀಪ ಪವಾರ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಧಾನ ವ್ಯವಸ್ಥಾಪಕ ಪೆದ್ದಣ್ಣ ಬಿದಾಳ್, ಡಾ| ಶಫಿ ಬಂಡಾ, ಮೈರಾಡ್ ಪ್ರಾಜೆಕ್ಟ್ ವ್ಯವಸ್ಥಾಪಕ ಲಕ್ಷ್ಮಣ ರೆಡ್ಡಿ, ಮಜಿದ್ ಪಟೇಲ್, ಮಂಜುನಾಥ ಕಂಬಾಳಿಮಠ, ಉದಯಕುಮಾರ ಬಾಗೋಡಿ, ಜಗದೀಶ ರಾಠೊಡ, ಜಿತೇಂದ್ರ, ಸೈಯ್ಯದ ಮುನಾವಾರ್ ಪಾಲ್ಗೊಂಡಿದ್ದರು. ರಜನಿ ಟಿಳ್ಳೆ ಸ್ವಾಗತಿಸಿದರು.