Advertisement

ಸದೃಢ ದೇಶ ನಿರ್ಮಾಣ ಎಬಿವಿಪಿ ಗುರಿ: ವಿನಯ್‌

11:35 AM Jul 10, 2017 | Team Udayavani |

ಬೆಂಗಳೂರು: ವಿದ್ಯಾರ್ಥಿ ಸಮೂಹದೊಂದಿಗೆ ಸೇರಿಕೊಂಡು ಸದೃಢ ಮತ್ತು ಸ್ವಾಭಿಮಾನಿ ಭಾರತ ನಿರ್ಮಾಣ ಮಾಡುವುದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಗುರಿ ಎಂದು ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್‌ ಬಿದರೆ ಹೇಳಿದ್ದಾರೆ.

Advertisement

ನಗರದ ಶೇಷಾದ್ರಿಪುರದ ಎಬಿವಿಪಿ ಪ್ರಾಂತ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಲ್ಲಿ ಎಬಿವಿಪಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. “ಸದೃಢ ಮತ್ತು ಸ್ವಾಭಿಮಾನಿ ದೇಶ ನಿರ್ಮಾಣದ ಸಂಕಲ್ಪಕ್ಕೆ ವಿದ್ಯಾರ್ಥಿಗಳು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಜು. 9ರಂದು ರಾಷ್ಟ್ರೀಯ ವಿದ್ಯಾರ್ಥಿ ದಿನ ಆಚರಿಸಲಾಗುತ್ತಿದೆ,’ ಎಂದು ಹೇಳಿದರು.

“ಎಬಿವಿಪಿ ಹುಟ್ಟಿ 69 ಸಂವತ್ಸರ ಸಂದಿದೆ. ಅಂದಿನಿಂದ ಇಂದಿನವರೆಗೂ ತನ್ನ ತತ್ವ-ಸಿದ್ಧಾಂತಗಳ ಆಧಾರದ ಮೇಲೆ ಸಾಗುತ್ತಿರುವ ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆ ಇದಾಗಿದೆ. ದೇಶದ 30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎಬಿವಿಪಿ ಸದಸ್ಯರಾಗಿದ್ದಾರೆ. 7 ಸಾವಿರಕ್ಕೂ ಅಧಿಕ ಸ್ಥಾನಗಳಲ್ಲಿ ಸಂಘಟನೆಯು ಕಾರ್ಯ ನಿರ್ವಸುತ್ತಿದೆ. ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ಕಾರ್ಯ ನಿರ್ವಸುತ್ತಿರುವ ಎಬಿವಿಪಿ, ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರದ ಜತೆಗೆ ಸಂಘಟನಾತ್ಮಕ ಹೋರಾಟ ವಿಧಾನದ ಮೂಲಕ ಅನೇಕ ಸುಧಾರಣೆ ತಂದಿದೆ,’ ಎಂದು ವಿವರಿಸಿದರು.

ವಿದ್ಯಾರ್ಥಿ ಪರಿಷತ್ತಿನ ಸೇವಾ ಚಟುವಟಿಕೆಗಳಲ್ಲಿ ಒಂದಾದ ಉಚಿತ ಬುಕ್‌ ಬ್ಯಾಂಕ್‌ನಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬುಕ್‌ ವಿತರಿಸಲಾಯಿತು. ಎಬಿವಿಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕೆ.ಎನ್‌.ರಘುನಂದನ್‌, ಮಹಾನಗರ ಕಾರ್ಯದರ್ಶಿ ವೀಣಾ, ಬೆಂಗಳೂರು ಸಂಚಾಲಕ ಹರ್ಷ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next