Advertisement

ಮೌಲ್ಯಮಾಪನ ಖಂಡಿಸಿ ಎಬಿವಿಪಿ ಪ್ರತಿಭಟನೆ

11:22 AM Aug 17, 2018 | Team Udayavani |

ಬೆಂಗಳೂರು: ಬೆಂಗಳೂರು ವಿವಿ ವ್ಯಾಪ್ತಿಯ ಎಂ.ಕಾಂ. ಪ್ರಥಮ ಸೆಮಿಸ್ಟರ್‌ ಪರೀಕ್ಷೆಯ ಮೌಲ್ಯಮಾಪನವನ್ನು ಬೇಜವಾಬ್ದಾರಿಯಿಂದ ಮಾಡಿದ್ದರ ಪರಿಣಾಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಜ್ಞಾನಭಾರತಿ ಆರವಣದ ಪರೀಕ್ಷಾ ಭವನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಬೆಂವಿವಿಯ ವಾಣಿಜ್ಯ ವಿಭಾಗದ ಶೇ.80ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ವಿಭಾಗದ ಪ್ರಾಧ್ಯಾಪಕರ ಕಚ್ಚಾಟದಿಂದ ವಿದ್ಯಾರ್ಥಿಗಳ ಮೌಲ್ಯಮಾಪನ ಸಮರ್ಪಕವಾಗಿ ನಡೆದಿಲ್ಲ. ಇದರ ಪರಿಣಾಮ ವಿದ್ಯಾರ್ಥಿಗಳು ಅನುಭವಿಸುವಂತಾಗಿದೆ. ಇದನ್ನು ಸರಿಪಡಿಸಬೇಕು ಎಂದು ಕುಲಸಚಿವರ(ಮೌಲ್ಯಮಾಪನ) ಕಚೇರಿಗೆ ಮುತ್ತಿಗೆ ಹಾಕಲಾಯಿತು.

ಮೌಲ್ಯಮಾಪನ ಸಮಸ್ಯೆಯಿಂದ ಹಾಸ್ಟೆಲ್‌ ಮತ್ತು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತೊಂದರೆಯಾಗಿದೆ. ನೆಟ್‌ ಪರೀಕ್ಷೆಗೆ ತಯಾರಿ ಮಾಡಬೇಕಾದ ವೇಳೆಯಲ್ಲಿ ಈ ರೀತಿಯ ಗೊಂದಲಗಳಿಂದ ವಿದ್ಯಾರ್ಥಿಗಳಿಗೆ ಆಘಾತವಾಗಿದೆ. ಆದಷ್ಟು ಬೇಗ ಬೆಂವಿವಿ ಅಧಿಕಾರಿಗಳು ಇದನ್ನು ಸರಿಪಡಿಸಿಬೇಕು ಎಂದು ಎಬಿವಿಪಿ ಮಹಾನಗರ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್‌ ಆಗ್ರಹಿಸಿದರು.

ಕಾರ್ಯದರ್ಶಿ ಸೂರಜ್‌ ಪಂಡಿತ್‌, ಬೆಂಗಳೂರು ವಿವಿ ಸಂಚಾಲಕ ವೆಂಕಟೇಶ್‌, ಸಹ ಸಂಚಾಲಕ ತಿಪ್ಪೇಶ್‌ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next