Advertisement

ಭಾರತದ ಯಶಸ್ವಿ ಕಾರ್ಯಾಚರಣೆ: ಮುಂಬಯಿ ಸರಣಿ ಸ್ಫೋಟದ ಮೋಸ್ಟ್ ವಾಂಟೆಡ್ ಉಗ್ರ UAEನಲ್ಲಿ ಬಂಧನ

02:56 PM Feb 05, 2022 | Team Udayavani |

ಯುಎಇ: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಭಾರತದ ಗುಪ್ತಚರ ಇಲಾಖೆಯ ಮಹತ್ವದ ಕಾರ್ಯಾಚರಣೆಯಲ್ಲಿ 1993ರ ಮುಂಬಯಿ ಸರಣಿ ಬಾಂಬ್ ಸ್ಪೋಟದಲ್ಲಿ ಶಾಮೀಲಾಗಿದ್ದ ಭಾರತದ ಮೋಸ್ಟ್ ವಾಂಟೆಡ್ ಉಗ್ರ ಅಬುಬಕರ್ ನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಮೊದಲ ಪಂದ್ಯಕ್ಕೆ ಮಯಾಂಕ್ ಕೂಡಾ ಅಲಭ್ಯ; ರೋಹಿತ್ ಜೊತೆ ಆರಂಭಿಕನ್ಯಾರು?

1993ರಲ್ಲಿ ವಾಣಿಜ್ಯ ನಗರಿ ಮುಂಬಯಿಯ 12 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಿಸಲಾಗಿದ್ದು, ಘಟನೆಯಲ್ಲಿ 257 ಮಂದಿ ಸಾವನ್ನಪ್ಪಿದ್ದು, 713 ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನ್ ಆಕ್ರಿಮಿತ ಕಾಶ್ಮೀರದಲ್ಲಿ ಅಬುಬಕರ್ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತಯಾರಿಕೆ ತರಬೇತಿ ಪಡೆದಿದ್ದ ಎಂದು ವರದಿ ತಿಳಿಸಿದೆ.

ದುಬೈಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿವಾಸದಲ್ಲಿ ಮುಂಬಯಿಯಲ್ಲಿ ಆರ್ ಡಿಎಕ್ಸ್ ಬಳಸಿ ಸರಣಿ ಬಾಂಬ್ ಸ್ಫೋಟಗೊಳಿಸುವ ಸಂಚು ರೂಪಿಸಲಾಗಿತ್ತು. 1993ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರ ಎಂಬುದಾಗಿ ಅಬುಬಕರ್ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಅಬುಬಕರ್ ಯುಎಇ ಮತ್ತು ಪಾಕಿಸ್ತಾನದಲ್ಲಿ ವಾಸ್ತವ್ಯ ಹೂಡುತ್ತಿದ್ದ. ಇತ್ತೀಚೆಗೆ ಭಾರತದ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಯುಎಇನಲ್ಲಿ ತಲೆಮರೆಯಿಸಿಕೊಂಡಿದ್ದ ಅಬುಬಕರ್ ನನ್ನು ಬಂಧಿಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

2019ರಲ್ಲಿ ಅಬುಬಕರ್ ನನ್ನು ಯುಎಇನಲ್ಲಿ ಬಂಧಿಸಲಾಗಿತ್ತು. ಆದರೆ ಕೆಲವೊಂದು ದಾಖಲೆಗಳ ಕೊರತೆಯಿಂದಾಗಿ ಅಬುಬಕರ್ ಜೈಲಿನಿಂದ ಹೊರಬಂದಿದ್ದ. ಇದೀಗ ಬಂಧಿತ ಅಬುಬಕರ್ ನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಬರೋಬ್ಬರಿ 29ವರ್ಷಗಳ ಬಳಿಕ ಮುಂಬಯಿ ಸರಣಿ ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರ ಅಬುಬಕರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಯುಎಇನಿಂದ ಅಬುಬಕರ್ ಹಸ್ತಾಂತರಗೊಂಡ ಬಳಿಕ ಕೊನೆಗೂ ಉಗ್ರ ಅಬುಬಕರ್ ಭಾರತದಲ್ಲಿ ವಿಚಾರಣೆ ಎದುರಿಸಬೇಕಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next