Advertisement

ಕನ್ಸಾಸ್‌ ಶೂಟಿಂಗ್‌-ಟ್ರಂಪ್‌ ಹೇಳಿಕೆಗೆ ಸಂಬಂಧ ಕಲ್ಪಿಸಲಾಗದು

11:15 AM Feb 25, 2017 | Team Udayavani |

ವಾಷಿಂಗ್ಟನ್‌ : ಕನ್ಸಾಸ್‌ನಲ್ಲಿ ನಡೆದ ಶೂಟಿಂಗ್‌ನಲ್ಲಿ  ಭಾರತಿಯ ಟೆಕ್ಕಿ ಬಲಿಯಾಗಿರುವ ಘಟನೆಗೂ, ವಲಸಿಗರ ಕುರಿತಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊಂದಿರುವ ನಿಲುವು ಹಾಗೂ ನೀಡಿರುವ ಹೇಳಿಕೆಗೂ ತಳುಕು ಹಾಕುವುದು ಅಸಂಗತವಾದೀತು ಎಂದು ಶ್ವೇತ ಭವನ ಹೇಳಿದೆ.

Advertisement

ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಶ್ಯಾನ್‌ ಸ್ಪೈಸರ್‌ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಕನ್ಸಾಸ್‌ ಶೂಟಿಂಗ್‌ ನಂತಹ ಘಟನೆಯಲ್ಲಿ ಅಮಾಯಕ ಜೀವ ಬಲಿಯಾಗುವುದು ನಿಜಕ್ಕೂ ದುರದೃಷ್ಟಕರ. ಆದರೆ ಈ ರೀತಿಯ ಘಟನೆಗೂ ಅಧ್ಯಕ್ಷ ಟ್ರಂಪ್‌ ಹೇಳಿಕೆಗೂ ಸಂಬಂಧ ಕಲ್ಪಿಸುವುದು ಅಸಂಗತವಾದೀತು’ ಎಂದು ಹೇಳಿದರು. 

ಕನ್ಸಾಸ್‌ನಲ್ಲಿ ಕಳೆದ ಬುಧವಾರ ರಾತ್ರಿ ನಡೆದಿದ್ದ ಶೂಟಿಂಗ್‌ನಲ್ಲಿ 32ರ ಹರೆಯದ ಹೈದರಾಬಾದ ಟೆಕ್ಕಿ ಶ್ರೀನಿವಾಸ ಕುಚಿಬೋಟ್ಲ ಅವರನ್ನು ಅಮೆರಿಕ ನೌಕಾಪಡೆಯ ಮಾಜಿ ಯೋಧ ಜನಾಂಗೀಯ ದ್ವೇಷದ ಕಿಚ್ಚಿನಲ್ಲಿ “ನನ್ನ ದೇಶದಿಂದ ತೊಲಗು’ ಎಂದು ಕಿರುಚುತ್ತಾ ಗುಂಡಿಕ್ಕಿ ಕೊಂದಿದ್ದ; ಇನ್ನೋರ್ವ ಭಾರತೀಯ ಟೆಕ್ಕಿ ಈ ಘಟನೆಯಲ್ಲಿ ಗಾಯಗೊಂಡಿದ್ದ.

ಈ ಘಟನೆಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಲಸೆ ನೀತಿ, ಅಮೆರಿಕ ಫ‌ಸ್ಟ್‌ ಹೇಳಿಕೆಗಳೇ ಕಾರಣವೆಂದು ವ್ಯಾಪಕವಾಗಿ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಶ್ವೇತ ಭವನವು ಈ ಹೇಳಿಕೆಯನ್ನು ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next