Advertisement

ಗೃಹ ಖಾತೆ ಕೊಟ್ರೆ ಬೇಡ ಅನ್ನಲ್ಲ,ಆದ್ರೆ ಕೇಳಲ್ಲ: ರಾಮಲಿಂಗಾ ರೆಡ್ಡಿ 

04:37 PM Jul 09, 2017 | Team Udayavani |

ಬೆಂಗಳೂರು : ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ಭರ್ತಿ ಮಾಡಲಿದ್ದು, ಗೃಹ ಖಾತೆ ಯಾರಿಗೆ ನೀಡಲಿದ್ದಾರೆ ಎನ್ನುವ ಕುತೂಹಲ ಇದೀಗ ಎಲ್ಲರಲ್ಲೂ ಮೂಡಿದೆ. 

Advertisement

ಖಾತೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ  ಅವರ ಹೆಸರು ಕೇಳಿ ಬರುತ್ತಿದ್ದು ಈ ಬಗ್ಗೆ ಸುದ್ದಿಗಾರರು ಭಾನುವಾರ ಪ್ರಶ್ನಿಸಿದಾಗ  ಪ್ರತಿಕ್ರಿಯೆ ನೀಡಿದ ರೆಡ್ಡಿ ಖಾತೆ ಕೊಟ್ಟರೆ  ಯಾರು ಬೇಡ ಅಂತಾರೆ ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಈ ಹಿಂದೆ ಸಾರಿಗೆ ಖಾತೆಯನ್ನು ನಿಭಾಯಿಸಿದ್ದೇನೆ. ಯಾವುದೇ ಖಾತೆಯನ್ನು ನಾನು ಕೇಳುವುದಿಲ್ಲ. ಅದರ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಿಲ್ಲ.ಯಾರಿಗೆ ಯಾವ ಖಾತೆ ನೀಡಬೇಕು ಎಂದು ಅವರು ನಿರ್ಧರಿಸುತ್ತಾರೆ. ಕೊಡದೇ ಇದ್ದರೂ ಬೇಸರವಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next