Advertisement

ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದ ಎಸ್‌ಪಿ ನಾಯಕ ಶವವಾಗಿ ಪತ್ತೆ

09:43 AM Jun 21, 2019 | Vishnu Das |

ಬಿಜಾಪುರ: ಛತ್ತೀಸ್‌ಗಡದಲ್ಲಿ ಸಮಾಜವಾದಿ ಪಕ್ಷದ ನಾಯಕರೊಬ್ಬರನ್ನು ನಕ್ಸಲರು ಅಪಹರಿಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ.

Advertisement

ಮಾರಿಮಲ್ಲಾ ಎಂಬಲ್ಲಿ ಮಂಗಳವಾರ ನಕ್ಸಲರಿಂದ ಅಪಹರಣಕ್ಕೊಳಗಾದ ಸಮಾಜವಾದಿ ಪಕ್ಷದ ನಾಯಕ ಸಂತೋಷ್‌ ಪುನೆಮ್‌ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ.

ಗುತ್ತಿಗೆದಾರರಾಗಿದ್ದ ಸಂತೋಷ್‌ ಅವರನ್ನು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ನಕ್ಸಲರು ಅಪಹರಿಸಿದ್ದರು.

ಸಂತೋಷ್‌ ಅವರು ಬಿಜಾಪುರ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಎಸ್‌ಪಿ ರಾಜ್ಯ ಉಪಾಧ್ಯಕ್ಷರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next