Advertisement

ಆಮ್‌ ಆದ್ಮಿ ಪಕ್ಷದಿಂದ 15 ಸ್ಟಾರ್‌ ಕ್ಯಾಂಪೇನರ್‌ ಹೆಸರು ಪ್ರಕಟ

09:12 AM Mar 29, 2019 | Team Udayavani |

ಹೊಸದಿಲ್ಲಿ : ಆಮ್‌ ಆದ್ಮಿ ಪಕ್ಷ  ದಿಲ್ಲಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ತನ್ನ ಪಕ್ಷದ ಹದಿನೈದು ಸ್ಟಾರ್‌ ಕ್ಯಾಂಪೇನರ್‌ ಗಳನ್ನು ಹೆಸರಿಸಿದೆ ಎಂದು ಪಕ್ಷದ ಹಿರಿಯ ನಾಯಕ ಗೋಪಾಲ್‌ ರಾಯ್‌ ತಿಳಿಸಿದ್ದಾರೆ.

Advertisement

ಇಂದು ಈ 15 ಹೆಸರುಗಳನ್ನು ಚುನಾವಣಾ ಆಯೋಗದ ಅನುಮೋದನೆಗಾಗಿ ಒಪ್ಪಿಸಲಾಗಿದ್ದು ಮುಂಬರುವ ವಾರಗಳಲ್ಲಿ ಇನ್ನಷ್ಟು ಸ್ಟಾರ್‌ ಕ್ಯಾಂಪೇನರ್‌ ಗಳನ್ನು ಹೆಸರಿಸಲಾಗುವುದು ಎಂದು ರಾಯ್‌ ಹೇಳಿದ್ದಾರೆ.

ಪಕ್ಷದ ಸ್ಟಾರ್‌ ಕ್ಯಾಂಪೇನರ್‌ ಗಳಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌, ಡಿಸಿಎಂ ಮನೀಶ್‌ ಸಿಸೋಡಿಯ, ಪಕ್ಷದ ಹಿರಿಯ ನಾಯಕ ಸತ್ಯೇಂದ್ರ ಜೈನ್‌, ಸಂಜಯ್‌ ಸಿಂಗ್‌, ಭಗವಂತ್‌ ಮಾನ್‌, ಸುಶೀಲ್‌ ಗುಪ್ತಾ, ಎನ್‌ ಡಿ ಗುಪ್ತಾ, ಇಮ್ರಾನ್‌ ಹುಸೇನ್‌, ಕೈಲಾಶ್‌ ಗೆಹಲೋಟ್‌, ಸೌರವ್‌ ಭಾರದ್ವಾಜ್‌, ರಾಜೇಂದ್ರ ಪಾಲ್‌ ಗೌತಮ್‌, ರಾಖೀ ಬಿರ್ಲಾ, ಜರ್ನಲ್‌ ಸಿಂಗ್‌ ಮತ್ತು ಶಹನಾಜ್‌ ಹಿಂದುಸ್ಥಾನೀ ಸೇರಿದ್ದಾರೆ.

ದಿಲ್ಲಿಯ 7 ಲೋಕಸಭಾ ಸ್ಥಾನಗಳಿಗೆ ಮೇ 12ರಂದು ಚುನಾವಣೆ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next