Advertisement

AAP ಸಂಸದ ರಾಘವ್ ಚಡ್ಡಾ ರಾಜ್ಯಸಭೆಯಿಂದ ಅಮಾನತು

05:52 PM Aug 11, 2023 | Team Udayavani |

ಹೊಸದಿಲ್ಲಿ: ಎಎಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಶುಕ್ರವಾರ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.ನಿಯಮ ಮೀರಿದ ವರ್ತನೆ, ದುರ್ನಡತೆ ಮತ್ತು ಅವಹೇಳನಕಾರಿ ಹೇಳಿಕೆ ನೀಡಿ ಸದನದ ನಿಯಮದ ಸಂಪೂರ್ಣ ಉಲ್ಲಂಘನೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರಕಾರದ (ತಿದ್ದುಪಡಿ) ಮಸೂದೆ, 2023 ರ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಮೇಲ್ಮನೆಯ ನಾಲ್ವರು ಸದಸ್ಯರ ಹೆಸರನ್ನು ಸೇರಿಸಿದ್ದಕ್ಕಾಗಿ ಎಎಪಿ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸದನದ ನಾಯಕ ಪಿಯೂಷ್ ಗೋಯಲ್ ಅವರು ಮಂಡಿಸಿದ ಪ್ರಸ್ತಾವನೆಯನ್ನು ಅನುಸರಿಸಿ ಅವರನ್ನು ಅಮಾನತುಗೊಳಿಸಲಾಗಿದೆ. ಧ್ವನಿ ಮತದ ಮೂಲಕ ಈ ಪ್ರಸ್ತಾವವನ್ನು ಅಂಗೀಕರಿಸಲಾಯಿತು.

ಆಪ್ ಆಕ್ರೋಶ
”ಬಿಜೆಪಿಯ ಸುಳ್ಳನ್ನು ಬಯಲಿಗೆಳೆದ ರಾಘವ್ ಚಡ್ಡಾ ಅವರನ್ನು ಅಮಾನತುಗೊಳಿಸಲಾಗಿದೆ. ಅಮಿತ್ ಶಾ ಅವರದ್ದು ನಕಲಿ ಸಹಿ ಆರೋಪದ ಉದಾಹರಣೆ ನೀಡುವ ಮೂಲಕ ಉತ್ತರಿಸಲಾಗಿದೆ” ಎಂದು ಆಮ್ ಆದ್ಮಿ ಪಕ್ಷದ ನಾಯಕರು ಕಿಡಿ ಕಾರಿದ್ದಾರೆ.

ಸಂಜಯ್ ಸಿಂಗ್ ಕಿಡಿ
ಎರಡು ಬಾರಿ ಶಿಕ್ಷೆ ನೀಡುತ್ತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಇಂದು ಸಂಸತ್ತಿನ ಅಧಿವೇಶನ ಮುಗಿಯುತ್ತಿದ್ದಂತೆ ನನ್ನ ಅಮಾನತು ಅವಧಿಯನ್ನು ವಿಸ್ತರಿಸಲಾಗಿದೆ.ಪ್ರಧಾನಿ ಮೋದಿ ಅವರು ಮಣಿಪುರ ವಿಚಾರದಲ್ಲಿ ಮಾತನಾಡುವುದು ನೋಡಿದಾಗ ನನಗೆ ಇದರ ಕಾರಣ ಅರ್ಥವಾಯಿತು. ಅವರು ಏನೂ ಹೇಳಲಾಗದೆ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ.ಬ್ಲಾ ಬ್ಲಾ… ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next