Advertisement

ರಾಜ್ಯಸಭೆಗೆ ರಘುರಾಮ ರಾಜನ್‌ ? ಆಪ್‌ ನಾಮಕರಣ ಸಾಧ್ಯತೆ

03:47 PM Nov 08, 2017 | udayavani editorial |

ಹೊಸದಿಲ್ಲಿ : ಮುಂದಿನ ವರ್ಷ ಜನವರಿಯಲ್ಲಿ ತೆರವಾಗುವ ದಿಲ್ಲಿಯ ಮೂರು ರಾಜ್ಯಸಭಾ ಸ್ಥಾನಗಳಿಗೆ ಆಮ್‌ ಆದ್ಮಿ ಪಕ್ಷ ಹೊರಗಿನ ಮಹತ್ವದ ವ್ಯಕ್ತಿಗಳನ್ನು ನಾಮಕರಣ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. 

Advertisement

ಅಂತೆಯೇ ಈ ಮೂರರಲ್ಲಿ ಒಂದು ರಾಜ್ಯಸಭಾ ಸ್ಥಾನಕ್ಕೆ ಮಾಜಿ ಆರ್‌ಬಿಐ ಗವರ್ನರ್‌ ರಘುರಾಮ ರಾಜನ್‌ ಅವರ ಹೆಸರನ್ನು ಆಪ್‌ ಸೂಚಿಸುವ ಸಾಧ್ಯತೆ ಇದೆ. 

ರಾಜನ್‌ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ನಾಮಕರಣ ಮಾಡುವ ಕುರಿತು ಆಮ್‌ ಆದ್ಮಿ ಪಕ್ಷ ತನ್ನ ಸಭೆಯಲ್ಲಿ ಚರ್ಚಿಸಿದೆ. ಅಂತೆಯೇ ಅದು ರಾಜನ್‌ ಗೆ ಈ ಸಂಬಂಧ ಅಧಿಕೃತ ಇ-ಮೇಲ್‌ ರವಾನಿಸಿದೆ; ರಾಜನ್‌ ಇದಕ್ಕೆ ಇನ್ನೂ ಉತ್ತರಿಸಬೇಕಷ್ಟೇ.

ಆರ್‌ಬಿಐ ಗವರ್ನರ್‌ ಹುದ್ದೆಯಿಂದ ಇಳಿದ ಬಳಿಕ ರಾಜನ್‌ ಅವರ ಹೆಸರು ನೊಬೆಲ್‌ ಅರ್ಥಶಾಸ್ತ್ರ ಪಾರಿತೋಷಕಕ್ಕೆ ಸೂಚಿಸಲ್ಪಟ್ಟಿರುವುದಾಗಿ ವರದಿಯಾಗಿತ್ತು. ಅನಂತರ ರಾಜನ್‌ ಅವರ ಹೆಸರನ್ನು ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಮುಖ್ಯಸ್ಥನ ಹುದ್ದೆಗೆ ಬ್ಯಾರನ್‌ ಸಂಸ್ಥೆ ಶಿಫಾರಸು ಮಾಡಿರುವುದಾಗಿ ವರದಿಯಾಗಿತ್ತು. ಹಾಗಾಗಿ ರಾಜನ್‌ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿತ್ತು. 

ಇಂಟರ್‌ನ್ಯಾಶನಲ್‌ ಮಾನಿಟರಿ ಫ‌ಂಡ್‌ (ಐಎಂಎಫ್) ಇದರ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞರಾಗಿರುವ ರಾಜನ್‌, 1992ರ ಬಳಿಕದಲ್ಲಿ ಆರ್‌ಬಿಐ ಗವರ್ನರ್‌ ಆಗಿ ಐದು ವರ್ಷಗಳ ಅವಧಿ ಪೂರೈಸಿದ ಮೊದಲ ಗವರ್ನರ್‌ ಎನಿಸಿಕೊಂಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next