Advertisement
“ಮುಖ್ಯಮಂತ್ರಿ ಸಮ್ಮಾನ್ ಯೋಜನೆ’ಯಡಿಯಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತೀ ತಿಂಗಳು ಈ ಹಣ ಪಾವತಿಯಾಗಲಿದೆ ಎಂದು ಬಜೆಟ್ ಮಂಡಿಸಿದ ಆತಿಷಿ ಘೋಷಿಸಿದ್ದಾರೆ. ಈ ಬಗ್ಗೆ ಪ್ರತ್ರಿಕ್ರಿಯೆ ನೀಡಿದ ಕೇಜ್ರಿವಾಲ್ “ನಾವು ಮಹಿಳಾ ಸಶಕ್ತೀಕರಣ ಬಗ್ಗೆ ಮಾತನಾಡುತ್ತೇವೆ. ಆದರೆ ಅವರ ಬಳಿ ಹಣವಿದ್ದರೆ ಮಾತ್ರ ಇದು ಸಾಧ್ಯ. ನಾವು ಅವರಿಗೆ ಹಣ ನೀಡಿದರೆ, ಅವರು ತಾವು ಸಶಕ್ತರಾಗಿದ್ದೇವೆ ಎಂದು ಭಾವಿಸುತ್ತಾರೆ’ ಎಂದು ಹೇಳಿದರು.
ಇಲ್ಲಿನ ರೋಸ್ ಅವೆನ್ಯೂನಲ್ಲಿ ದಿಲ್ಲಿ ಹೈಕೋರ್ಟ್‌ಗೆ ಸೇರಿದ ಜಾಗದಲ್ಲಿರುವ ಕಚೇರಿ ಯನ್ನು ಜೂ. 15ರೊಳಗೆ ತೆರವುಗೊಳಿಸು ವಂತೆ ಸುಪ್ರೀಂ ಕೋರ್ಟ್ ಆಪ್‌ಗೆ ನಿರ್ದೇಶನ ನೀಡಿದೆ. ಮುಂಬರುವ ದಿನಗಳಲ್ಲಿ ಲೋಕಸಭಾ ಚುನಾವಣೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಕಚೇರಿ ತೆರವು ಮಾಡುವ ಅವಧಿಯನ್ನು ಹೆಚ್ಚು ಮಾಡಲಾಗಿದೆ. ಮುಂದಿನ 4 ವಾರಗಳಲ್ಲಿ ಸಂಬಂಧಪಟ್ಟ ಇಲಾಖೆ ಅರ್ಜಿ ಸ್ವೀಕಾರ ಸಂಬಂಧಿ ಸಿದಂತೆ ಇತರ ದಾಖಲಾತಿ ಕೆಲಸಗಳನ್ನು ಪೂರ್ಣ ಗೊಳಿಸಬೇಕು ಎಂದು ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾ| ಮನೋಜ್ ಮಿಶ್ರಾ ಮತ್ತು ನ್ಯಾ| ಜೆ.ಬಿ. ಪದೀìವಾಲಾ ಅವರಿದ್ದ ಪೀಠ ಹೇಳಿದೆ.
Related Articles
ಪ್ರಕರಣದ ವಿಚಾರಣೆಯ ಸಮಯದಲ್ಲಿ ಆಪ್ ಪರ ವಾದಿಸಿದ ಅಭಿಷೇಕ್ ಮನು ಸಿಂಘ್ವಿ ಅವರನ್ನು ಉದ್ದೇಶಿಸಿ ಸಿಜೆಐ ಚಂದ್ರಚೂಡ್ ನೀವು ವಕೀಲರಾಗಿ ಯಾವಾಗಲೂ ಕೋರ್ಟ್ ಪರವಾಗಿ ನಿಲ್ಲಬೇಕು. ರಾಜಕೀಯ ಪಕ್ಷದ ಪರವಾಗಿ ಅಲ್ಲ ಎಂದರು.
Advertisement