ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನನ್ನು ಬಿಜೆಪಿ ಕೈಯಿಂದ ಕಸಿದುಕೊಂಡ ನಂತರ, ಆಮ್ ಆದ್ಮಿ ಪಕ್ಷವು ಶನಿವಾರ (ಡಿ 10) ಆಘಾತಕಾರಿ ಆರೋಪಗಳನ್ನು ಮಾಡಿದ್ದು, ಕೇಸರಿ ಪಕ್ಷವು ಎಎಪಿಯ ದೆಹಲಿ ಕೌನ್ಸಿಲರ್‌ಗಳನ್ನು ಬೇಟೆಯಾಡುತ್ತಿದೆ ಎಂದು ಆರೋಪಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಬಿಜೆಪಿ ತನ್ನ ಕೊಳಕು ಆಟವಾಡಲು ಪ್ರಾರಂಭಿಸಿದೆ ಮತ್ತು ಕೌನ್ಸಿಲರ್‌ಗಳನ್ನು ಖರೀದಿಸಲು 100 ಕೋಟಿ ಬಜೆಟ್ ಹೊಂದಿದೆ ಎಂದು ಆರೋಪಿಸಿದರು.
ಎಎಪಿ ಚುನಾಯಿತ ಪ್ರತಿನಿಧಿಗಳಲ್ಲಿ ಒಬ್ಬರಾದ ರೋನಾಕ್ಷಿ ಶರ್ಮಾ ಅವರಿಗೆ ಯೋಗೇಂದ್ರ ಎಂಬ ವ್ಯಕ್ತಿಯಿಂದ ಫೋನ್ ಕರೆ ಬಂದಿದೆ ಎಂದು ಸಿಂಗ್ ಆರೋಪಿಸಿದರು.
ಅವರು ಬಿಜೆಪಿ ರಾಜ್ಯಾಧ್ಯಕ್ಷ ಆದೇಶ್ ಕುಮಾರ್ ಗುಪ್ತಾ ಅವರೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿದರು, ಗುಪ್ತಾ ಮತ್ತು ಬಿಜೆಪಿ ಕಾರ್ಯಕರ್ತರು ಎಂಸಿಡಿ ಕೌನ್ಸಿಲರ್‌ಗಳನ್ನು ಖರೀದಿಸಲು 100 ಕೋಟಿ ರೂ. ಬಜೆಟ್ ಅನ್ನು ಪ್ರಸ್ತಾಪಿಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
” 2022 ಕ್ಕಿಂತ 30 ಸೀಟುಗಳು ಕಡಿಮೆ ಪಡೆದಿದ್ದರೂ, ಮಹಾರಾಷ್ಟ್ರ, ಕರ್ನಾಟಕ, ಗೋವಾ ಮತ್ತು ಗುಜರಾತ್, ಅರುಣಾಚಲ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶದಲ್ಲಿ ಶಾಸಕರ ಕುದುರೆ ವ್ಯಾಪಾರದಂತೆಯೇ ಬಿಜೆಪಿ ತನ್ನ ಕೊಳಕು ಆಟಗಳಿಗೆ ಇಳಿದಿದೆ” ಎಂದು ಸಿಂಗ್ ಹೇಳಿದರು.