Advertisement

ರಾಕಿ ಭಾಯ್ ಗೆ ಟಕ್ಕರ್ ನೀಡಲು ಬಂದ ಅಮಿರ್: ಒಂದೇ ದಿನ ಕೆಜಿಎಫ್2- ಲಾಲ್ ಸಿಂಗ್ ಚಡ್ಡಾ ರಿಲೀಸ್

03:44 PM Nov 20, 2021 | Team Udayavani |

ಭಾರತದ ಎರಡು ಬಹುನಿರೀಕ್ಷಿತ ಚಿತ್ರಗಳು ಒಂದೇ ದಿನ ತೆರೆಕಾಣಲು ರೆಡಿಯಾಗಿದೆ. ಅಮಿರ್ ಖಾನ್ ಅವರು ತಮ್ಮ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ರಿಲೀಸ್ ಡೇಟ್ ಘೋಷಣೆ ಮಾಡಿದ್ದು, ಕನ್ನಡದ ರಾಕಿಂಗ್ ಸ್ಟಾರ್ ಗೆ ಸಡ್ಡು ಹೊಡೆದಿದ್ದಾರೆ.

Advertisement

ಹೌದು, ಅಮಿರ್ ಖಾನ್ ಅವರ ಲಾಲ್ ಸಿಂಗ್ ಚಢ್ಢಾ ಚಿತ್ರ ಮುಂದಿನ ವರ್ಷದ ಎಪ್ರಿಲ್ 14ರಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಇಂದು ಅಮಿರ್ ಖಾನ್ ಪ್ರೊಡಕ್ಷನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತ ಘೋಷಣೆ ಮಾಡಿಕೊಂಡಿದೆ.

ಆದರೆ ಅದೇ ದಿನ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಪಾನ್ ಇಂಡಿಯಾ ಚಿತ್ರ ‘ಕೆಜಿಎಫ್ -2’ ಬಿಡುಗಡೆಯಾಗುತ್ತಿದೆ. ಒಂದೇ ದಿನ ಎರಡು ದೊಡ್ಡ ಚಿತ್ರಗಳು ತೆರೆಕಾಣಲು ಸಜ್ಜಾಗಿದೆ.

ಇದನ್ನೂ ಓದಿ:ಪಾವನಾ ‘ಇನ್‌’ ಸೈಡ್‌ ಸ್ಟೋರಿ!

ಬಾಲಿವುಡ್ ಟ್ರೇಡ್ ಎನಲಿಸ್ಟ್ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, “ ದಿ ಬಿಗ್ ಕ್ಲ್ಯಾಶ್” ಎಂದು ಕರೆದಿದ್ದಾರೆ. “14  ಏಪ್ರಿಲ್ 2022 ಎರಡು ದೊಡ್ಡವರ ಘರ್ಷಣೆಗೆ ಸಾಕ್ಷಿಯಾಗಲಿದೆ. ಲಾಲ್ ಸಿಂಗ್ ಚಡ್ಡಾ ಮತ್ತು ಕೆಜಿಎಫ್ 2… ಅಮೀರ್ ಖಾನ್ ವರ್ಸಸ್ ಯಶ್” ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

Advertisement

ಕೆಜೆಎಫ್ ಚಿತ್ರದ ಮೊದಲ ಭಾಗ 2018ರ ಡಿಸೆಂಬರ್ 21ರಂದು ಬಿಡುಗಡೆಯಾಗಿತ್ತು. ಆಗಲೂ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅಭಿನಯದ ‘ಜೀರೋ’ ಚಿತ್ರ ಬಿಡುಗಡೆಯಾಗಿತ್ತು. ಕೆಜಿಎಫ್ ಬಾಕ್ಸಾಫೀಸ್  ಧೂಳಿಪಟ ಮಾಡಿದ್ದರೆ, ಶಾರುಖ್ ಚಿತ್ರ ಯಶಸ್ಸು ಕಾಣಿರಲಿಲ್ಲ.

ಅಮಿರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಚಿತ್ರವು 1994ರಲ್ಲಿ ತೆರೆಕಂಡ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್. ಚಿತ್ರದಲ್ಲಿ ಅಮಿರ್ ಜೊತೆ ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದ್ವೈತ್ ಚಂದನ್ ನಿರ್ದೇಶನವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next