Advertisement
ಆಜ್ರಿಯಿಂದ ಜಡ್ಡಿನಮೂಲೆ, ಯಡೂರು, ಯಡ್ನಾಡಿಯಾಗಿ ಬಡಬಾಳುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಮಳೆಗಾಲದಲ್ಲಿ ಕೆಸರುಮಯ ರಸ್ತೆಯಾದರೆ, ಬೇಸಿಗೆಯಲ್ಲಿ ಧೂಳುಮಯ ರಸ್ತೆಯಿಂದಾಗಿ ಇಲ್ಲಿನ ಜನ ವರ್ಷವಿಡೀ ಸಂಕಷ್ಟಪಡುತ್ತಿದ್ದಾರೆ.
ಈ ಮಾರ್ಗವಾಗಿ ಆಜ್ರಿಯಿಂದ ಬಡಬಾಳು ಮೂಲಕವಾಗಿ ಜನ್ಸಾಲೆ, ಅಂಪಾರು, ಕುಂದಾಪುರಕ್ಕೂ ಸಂಚರಿಸಲು ಹತ್ತಿರದ ಮಾರ್ಗ ಇದಾಗಿದೆ. ಡಾಮರೀಕರಣವಾದರೆ ಸಾವಿರಾರು ಮಂದಿಗೆ ಪ್ರಯೋಜನ ವಾಗಲಿದೆ. ಈ ಮಾರ್ಗದಲ್ಲಿ 3-4 ಶಾಲಾ ಬಸ್‌ಗಳು, ನೂರಾರು ಬೇರೆ ಬೇರೆ ವಾಹನಗಳು ಸಂಚರಿಸುತ್ತವೆ. ಸುಮಾರು 3 ರಿಂದ 4 ಸಾವಿರ ಜನ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. 2 ದಶಕದ ಬೇಡಿಕೆ
ಈ ಮಣ್ಣಿನ ರಸ್ತೆಗೆ ಡಾಮರು ಆಗಬೇಕು ಎನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಬರೋಬ್ಬರಿ 20 ವರ್ಷಗಳಿಗೂ ಹಿಂದಿನಿಂದಲೂ ಈ ರಸ್ತೆಗೆ ಡಾಮರೀಕರಣ ಆಗಬೇಕು ಎನ್ನುವುದು ಇಲ್ಲಿನ ಜನರ ಬೇಡಿಕೆಯಾಗಿದೆ.
200 ಮೀಟರ್ ಡಾಮರು
ಆಜ್ರಿಯಿಂದ ಆರಂಭಗೊಳ್ಳುವ ಈ ರಸ್ತೆಯ ಸುಮಾರು 200 ಮೀಟರ್ ಮಾತ್ರ ಡಾಮರೀಕರಣ ಆಗಿದೆ. ಬಾಕಿ ಉಳಿದ ಸುಮಾರು 8 ಕಿ.ಮೀ. ದೂರದ ರಸ್ತೆಗೆ ಇನ್ನೂ ಡಾಮರು ಆಗಿಲ್ಲ.
Related Articles
ಈ ರಸ್ತೆ ಡಾಮರೀಕರಣ ಆಗಬೇಕು ಎನ್ನುವುದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳಿಗೂ ಬೇಡಿಕೆ ಸಲ್ಲಿಸಿದ್ದೇವೆ. ಆದರೆ ಅವರಿಗೆ ಚುನಾವಣೆ ಬಂದಾಗ ಒಮ್ಮೆ ಮಾತ್ರ ನೆನಪು ಆಗುತ್ತದೆ. ಈ ಬಾರಿಯಾದರೂ ಡಾಮರೀಕರಣ ಆಗಲಿ ಎನ್ನುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.
Advertisement
ಮನವಿ ಸಲ್ಲಿಸಲಾಗಿದೆಸುಮಾರು 8 ಕಿ.ಮೀ. ದೂರದ ರಸ್ತೆಗೆ ಡಾಮರೀಕರಣ ಬೇಡಿಕೆಯಿದ್ದು, ಇದಕ್ಕೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಅಷ್ಟೊಂದು ಅನುದಾನ ಪಂಚಾಯತ್‌ನಲ್ಲಿ ಇಲ್ಲದಿರುವುದರಿಂದ ಈ ಬಗ್ಗೆ ಈಗಿನ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.
– ವಿನೋದ,ಅಧ್ಯಕ್ಷರು,ಆಜ್ರಿ ಗ್ರಾ.ಪಂ.