Advertisement
ವಿಧಾನಸಭಾ ಚುನಾವಣೆ ಸನಿಹವಾಗಿರುವ ವೇಳೆಯಲ್ಲಿ ಈ ಬಗ್ಗೆ ಹೇಳಲಾಗಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಈಗಾಗಲೇ ಈ ಬಗ್ಗೆ ಮಾತುಕತೆಗಳು ನಡೆದಿವೆ ಎನ್ನಲಾಗಿದೆ.
Related Articles
Advertisement
ಬಿಜೆಪಿ ಶಿವಸೇನೆಯ ಪ್ರಸ್ತಾವನೆಯನ್ನು ಒಪ್ಪಿ ಆದಿತ್ಯ ಠಾಕ್ರೆಗೆ ಡಿಸಿಎಂ ಹುದ್ದೆ ನೀಡಿದ್ದೇ ಆದಲ್ಲಿ ಈ ಹಿಂದಿನ ಪ್ರೀತಿ ಮತ್ತು ದ್ವೇಷದ ಶಿವಸೇನೆ -ಬಿಜೆಪಿ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎನ್ನಲಾಗಿದೆ.
ಶಿವಸೇನೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡಿತ್ತು. ಆದರೆ ಅನಿವಾರ್ಯವಾಗಿ ಸರ್ಕಾರ ರಚನೆ ವೇಳೆ ಕೈ ಜೋಡಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ನಿರಂತರ ಟೀಕೆಗಳ ಹೊರತಾಗಿಯೂ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟದಲ್ಲಿ ಮುಂದುವರಿದು 48 ಕ್ಷೇತ್ರಗಳ ಪೈಕಿ 18 ನ್ನು ಗೆದ್ದುಕೊಂಡಿತ್ತು. ಬಿಜೆಪಿ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಶಿವಸೇನೆ ಪರಮೋಚ್ಛ ನಾಯಕ ದಿವಂಗತ ಬಾಳ್ ಠಾಕ್ರೆ ಅವರಾಗಲಿ, ಪುತ್ರ ಉದ್ಭವ್ ಠಾಕ್ರೆ ಅವರಾಗಲಿ ಇದುವರೆಗೆ ಚುನಾವಣಾ ಸ್ಪರ್ಧೆಗೆ ಇಳಿದಿಲ್ಲ, ಆ ಅಪವಾದವನ್ನ 3 ನೇ ತಲೆಮಾರಿನ ಕುಡಿ ಆದಿತ್ಯ ಮೂಲಕ ಸುಳ್ಳಾಗಿಸಲು ಉದ್ಭವ್ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ.
ಶಿವಸೇನೆ ಲೋಕಸಭೆಯ ಡೆಪ್ಯುಟಿ ಸ್ಪೀಕರ್ ತನಗೆ ಸಿಗಬೇಕು ಎಂದು ಪಟ್ಟು ಹಿಡಿದಿತ್ತು, ಇದು ನಮ್ಮ ಬೇಡಿಕೆಯಲ್ಲ 18 ಸ್ಥಾನ ಹೊಂದಿರುವ ನಮ್ಮ ಹಕ್ಕು ಎಂದೂ ಹೇಳಿತ್ತು. ಡ್ಯೆಪುಟಿ ಸ್ವೀಕರ್ ಹುದ್ದೆ ಸಿಗದಿದ್ದಲ್ಲಿ ಡಿಸಿಎಂ ಹುದ್ದೆಗೆ ಪಟ್ಟು ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ.
ಬಿಜೆಪಿ ಈಗಾಗಲೇ ದೇವೇಂದ್ರ ಫಡ್ನವೀಸ್ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಹೇಳಿದೆ.