ಹೊಸದಿಲ್ಲಿ: ಭವಿಷ್ಯನಿಧಿ (ಪಿಎಫ್) ಖಾತೆಯಲ್ಲಿರುವ ಪೂರ್ತಿ ಪಿಂಚಣಿ ಹಣವನ್ನು ಹಿಂಪಡೆಯಲು ಆಧಾರ್ ಸಂಖ್ಯೆ ನೀಡಬೇಕಾದ ಅಗತ್ಯವಿಲ್ಲ ಎನ್ನುವ ಮೂಲಕ ಇಲಾಖೆ ಖಾತೆದಾರರಲ್ಲಿ ಮೂಡಿರುವ ಗೊಂದಲಕ್ಕೆ ತೆರೆ ಎಳೆದಿದೆ. ಕಳೆದ ಜನವರಿಯಲ್ಲಿ ಭವಿಷ್ಯನಿಧಿ ಪಿಂಚಣಿ ಹಿಂಪಡೆದುಕೊಳ್ಳಲು ಆಧಾರ್ ನಂಬರ್ ಕಡ್ಡಾಯಗೊಳಿಸಲಾಗಿತ್ತು. ಇದರಿಂದಾಗಿ ಆಧಾರ್ ಕಾರ್ಡ್ ಇಲ್ಲದವರು ಹಣಹಿಂಪಡೆಯಲು ಸಾಧ್ಯವಾಗದೇ ದೂರು ಸಲ್ಲಿಸಿದ್ದರು. ಖಾತೆದಾರರ ದೂರು ಆಲಿಸಿ ಈ ಕ್ರಮಕೈಗೊಳ್ಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿ, ಪಿಂಚಣಿ ಹಿಂಪಡೆಯಲು ಆಧಾರ್ ನಂಬರ್ ಅಗತ್ಯವಿಲ್ಲ. 10 ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿರುವವರೂ 10ಸಿ ಫಾರ್ಮ್ ನೀಡುವ ಮೂಲಕ ಪೂರ್ಣ ಮತ್ತು ಅಂತಿಮವಾಗಿ ಪಡೆದುಧಿಕೊಳ್ಳಬೇಕಾದ ಪಿಂಚಣಿಯನ್ನು ಪಡೆದುಕೊಳ್ಳಲಡ್ಡಿಯಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆಧಾರ್ ಸಂಖ್ಯೆ ನೀಡಿಧಿದರೆ ಹಣ ಹಿಂಪಡೆಯಲು ಅನುಕೂಲಧಿವಾಗಲಿದೆ ಎಂದರು. ಇದಕ್ಕಿಂತಲೂ ಮೊದಲು ಮುಂದಿನ ತಿಂಗಳ ಅಂತ್ಯದ ವರೆಗೆ ಆಧಾರ್ ನೀಡಿಕೆ ಅವಧಿ ವಿಸ್ತರಿಸಿ ಆದೇಶ ಹೊರಡಿಸಿತ್ತು.