Advertisement

ಗ್ರಾಮ ಪಂಚಾಯತ್‌ಗಳಲ್ಲಿ ಇಂದಿನಿಂದ ಆಧಾರ್‌ ತಿದ್ದುಪಡಿ

10:49 AM Sep 05, 2018 | Team Udayavani |

ಮಂಗಳೂರು/ ಉಡುಪಿ: ಗ್ರಾಮ ಪಂಚಾಯತ್‌ಗಳಲ್ಲಿಯೇ ಆಧಾರ್‌ ಕಾರ್ಡ್‌ನ ತಿದ್ದುಪಡಿ ಸೆ.5ರಿಂದ ಆರಂಭಗೊಳ್ಳಲಿದೆ. 

Advertisement

ದ.ಕ. ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ಆಧಾರ್‌ ಬದಲಾವಣೆ/ ತಿದ್ದುಪಡಿ ಕಾರ್ಯ ಸೆ. 5ರಿಂದ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್‌ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೂ ಇದು ಸೆ. 5ರಿಂದ ಆರಂಭವಾಗುತ್ತದೆ. ಆದರೆ ಕೆಲವೆಡೆ ತಾಂತ್ರಿಕ ಸಮಸ್ಯೆಗಳಿದ್ದು, ಅಂತಹ ಕಡೆ ಬಿಟ್ಟು ಉಳಿದೆಡೆ ಆರಂಭವಾಗುತ್ತದೆ ಎಂದು ಜಿ.ಪಂ. ಸಿಇಒ ಶಿವಾನಂದ ಕಾಪಶಿ ತಿಳಿಸಿದ್ದಾರೆ.  

ಆಧಾರ್‌ ತಿದ್ದುಪಡಿಗಾಗಿ ಆಧಾರ್‌ ನೋಂದಣಿ ಕೇಂದ್ರಗಳನ್ನು ಇನ್ನು ಮುಂದೆ ಹುಡುಕಬೇಕಾಗಿಲ್ಲ. ಈ ಸೌಲಭ್ಯಗಳು ಇನ್ನು ಮುಂದೆ ಗ್ರಾ.ಪಂ.ನಲ್ಲಿಯೇ ಲಭ್ಯವಾಗಲಿವೆ. ಆಧಾರ್‌ (ಇ-ಆಧಾರ್‌) ಪ್ರತಿಗಳನ್ನು ಕಲರ್‌/ಕಪ್ಪು-ಬಿಳುಪು ಪ್ರಿಂಟ್‌ಗಳಲ್ಲಿ ನೀಡಲಾಗುತ್ತದೆ. ತಮ್ಮಲ್ಲಿರುವ ಆಧಾರ್‌ನಲ್ಲಿ ಮನೆ ವಿಳಾಸ ಬದಲಾವಣೆ/ ಹೆಸರು ತಿದ್ದುಪಡಿ/ಹೊಸ ಮೊಬೈಲ್‌ ಸಂಖ್ಯೆ ಸೇರ್ಪಡೆ ಮಾಡುವುದಿದ್ದರೆ ಗ್ರಾಮ ಪಂಚಾಯತ್‌ ಅನ್ನು ಸಂಪರ್ಕಿಸಬಹುದು. 

ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲ ಪಂಚಾಯತ್‌ಗಳ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಸಿಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಸಹಯೋಗದೊಂದಿಗೆ ಆಧಾರ್‌ ತಿದ್ದುಪಡಿ ಬಗ್ಗೆ ಜಿ.ಪಂ. ಹಂತದಲ್ಲಿ ತರಬೇತಿ ನೀಡಲಾಗಿದೆ. ಎಲ್ಲ ಗ್ರಾ.ಪಂ.ಗಳಲ್ಲಿ ಸಾಫ್ಟ್ವೇರ್‌ ಅಳವಡಿಕೆ ಕೂಡ ಪೂರ್ಣಗೊಂಡಿದೆ. ಆನ್‌ಲೈನ್‌ ಮೂಲಕ ಆಧಾರ್‌ ನೋಂದಣಿ ಪ್ರಕ್ರಿಯೆ ಕೂಡ ಬಹುತೇಕ ಪೂರ್ಣವಾಗಿದೆ. ಜಿಲ್ಲೆಯ ಕೆಲವು ಗ್ರಾ.ಪಂ.ನಲ್ಲಿ ನೆಟ್‌ವರ್ಕ್‌ ಹಾಗೂ ಸಾಫ್ಟ್ವೇರ್‌ ಸಮಸ್ಯೆ ಇದ್ದರೂ ಮುಂದೆ ಅದನ್ನು ಸರಿಪಡಿಸಲಾಗುವುದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next