Advertisement
ತಾನು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಬುಧವಾರ ರಾತ್ರಿ 9.45ರ ಸುಮಾರಿಗೆ ಪ್ರೇಯಸಿಯನ್ನು ದ್ವಿಚಕ್ರ ವಾಹನದಲ್ಲಿ ಆಕೆಯ ಮನೆ ಬಳಿ ಡ್ರಾಪ್ ಮಾಡಿ ಮಾತನಾಡುತ್ತಾ ನಿಂತಿದ್ದೆ. ಕೆಲ ದೂರದಲ್ಲೇ ಪಾಲಿಕೆ ಸದಸ್ಯ ಆನಂದ್ ಮನೆ ಇದ್ದು, ತಾವಿಬ್ಬರು ಮಾತನಾಡುತ್ತಿರುವುದನ್ನು ನೋಡಿ ಬಳಿಗೆ ಬಂದ ಅವರು ರಾತ್ರಿ ಇಷ್ಟೊತ್ತಿನಲ್ಲಿ ರಸ್ತೆಯಲ್ಲಿ ನಿಲ್ಲುವುದು ಸರಿಯಲ್ಲ ಎಂದು ಹೇಳಿ, ಬೈಕ್‌ನ ಫೋಟೋ ತೆಗೆದುಕೊಳ್ಳಲು ಮುಂದಾದರು.
Related Articles
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನನ್ನ ಮಾತ್ರ ಠಾಣೆಗೆ ಕರೆದುಕೊಂಡು ಹೋದರು. ಪಾಲಿಕೆ ಸದಸ್ಯನನ್ನು ಠಾಣೆಗೆ ಕರೆ ತರಲಿಲ್ಲ. ಈ ಮೂಲಕ ಮದ್ಯ ಸೇವಿಸಿದ್ದ ಪಾಲಿಕೆ ಸದಸ್ಯನನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸದೆ ರಕ್ಷಿಸಿದ್ದಾರೆ. ಠಾಣೆಗೆ ಕರೆದೊಯ್ದ ವೇಳೆ ತಕ್ಷಣಕ್ಕೆ ನನ್ನಿಂದ ದೂರು ಪಡೆಯಲು ಹಿಂದೇಟು ಹಾಕಿದರು. ರಾತ್ರಿ 1.30ರ ಸುಮಾರಿಗೆ ನನ್ನಿಂದ ದೂರು ಪಡೆದರು.
-ಗಿರಿ ಕೇಶವನ್, ಹಲ್ಲೆಗೊಳಗಾದವ
Advertisement
ಜನರು ತಳ್ಳಾಡಿದರು,ನಾನು ಹಲ್ಲೆ ನಡೆಸಿಲ್ಲ ಯುವಕ ರಸ್ತೆ ಬದಿಯಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಆತ ಹೋದ ಮೇಲೆ ಯುವತಿಗೆ ಬುದ್ದಿ ಹೇಳ್ಳೋಣವೆಂದು 30 ನಿಮಿಷ ಕಾದರೂ ಅವರು ಕದಲಲಿಲ್ಲ. ಹೀಗಾಗಿ ನಾನೇ ಸ್ಥಳಕ್ಕೆ ಹೋಗಿ ಯುವಕನನ್ನು ಪ್ರಶ್ನಿಸಿ ಬೈಕ್‌ನ ಫೋಟೋ ತೆಗೆಯಲು ಮುಂದಾದಾಗ ಆತ ನನ್ನನ್ನು ತಳ್ಳಿದ. ಇದನ್ನು ನೋಡಿದ ಕೆಲ ಸಾರ್ವಜನಿಕರು ಪಾಲಿಕೆ ಸದಸ್ಯರ ಮೇಲೆ ಹಲ್ಲೆ ನಡೆಸುತ್ತೀಯಾ? ಎಂದು ಆತನನ್ನು ಹಿಡಿದುಕೊಂಡರು. ಈ ಸಂದರ್ಭದಲ್ಲಿ ಯವಕನಿಗೆ ಗಾಯವಾಗಿರಬಹುದು. ನಾನು ಹಲ್ಲೆ ನಡೆಸಿಲ್ಲ.
-ಪಿ.ಆನಂದ್, ಎಚ್‌ಬಿಆರ್ ವಾರ್ಡ್ ಪಾಲಿಕೆ ಸದಸ್ಯ