Advertisement

ಮಂಗಳನಲ್ಲಿಗೆ ಮಹಿಳಾ ಯಾತ್ರಿ

12:30 AM Mar 14, 2019 | |

ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿ ವಾಸಯೋಗ್ಯ ವಾತಾವರಣ ಇದೆಯೇ ಎಂಬ ಬಗ್ಗೆ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈಗಾಗಲೇ ಅಧ್ಯಯನ ನಡೆಸುತ್ತಿವೆ. ಈಗಾಗಲೇ ಹಲವು ಮಾಹಿತಿ ಮಂಗಳನ ಅಂಗಳದಿಂದ ರವಾನೆಯಾಗಿದ್ದರೂ, ಅದರ ಬಗ್ಗೆ ಇನ್ನಷ್ಟೇ ಸಮಗ್ರ ವಿವರ ಹೊರಬರ ಬೇಕಾಗಿದೆ. ಅದರ ಬೆನ್ನಲ್ಲಿಯೇ ಮಂಗಳ ಗ್ರಹಕ್ಕೆ ಮಾನವನ ಯಾತ್ರೆ ನಡೆಯುವುದಿದ್ದರೆ, ಮಹಿಳೆಯೇ ಮೊದಲ ಯಾತ್ರಿಯಾಗಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಆಡಳಿತಾಧಿಕಾರಿ ಜಿಮ್‌ ಬ್ರಿಡೆನ್‌ಸ್ಟೈನ್‌ ಬುಧವಾರ ಹೇಳಿದ್ದಾರೆ. 

Advertisement

ಮಹಿಳೆಯರಲ್ಲಿ ಯಾರು ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯ ಹೇಳದಿದ್ದರೂ, ಅಂಗಾರಕನ ಅಂಗಳಕ್ಕೆ ಮುಂದಿನ ದಿನಗಳಲ್ಲಿ ಮಾನವ ಸಹಿತ ಯಾತ್ರೆ ಕೈಗೊಳ್ಳುವುದಿದ್ದರೆ ಅದು ಮಹಿಳೆಯೇ ಮೊದಲ ಯಾತ್ರಿ ಎಂಬ ಸುಳಿವನ್ನು ನೀಡಿದ್ದಾರೆ.  ಮಾಸಾಂತ್ಯದಲ್ಲಿ ಮಹಿಳೆಯರೇ ಒಳಗೊಂಡ ಗಗನಯಾತ್ರಿಗಳ ತಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿದೆ ಎಂದು ಇತ್ತೀಚೆಗಷ್ಟೇ ನಾಸಾ ಹೇಳಿಕೊಂಡಿತ್ತು. ಹೀಗಾಗಿ ಈ ಹೇಳಿಕೆಗೆ ಮಹತ್ವ ಬಂದಿದೆ. ಇದೇ ವೇಳೆ ಫೆಬ್ರವರಿಯಲ್ಲಿ ಅಧಿಕೃತವಾಗಿ ವಿದಾಯ ಹೇಳಿದ್ದ ಗಗನನೌಕೆ “ಒಪೊರ್ಚುನಿಟಿ’ ಮಂಗಳ ಗ್ರಹದ 360 ಡಿಗ್ರಿಯ ಛಾಯಾಚಿತ್ರ ಕಳುಹಿಸಿಕೊಟ್ಟಿದೆ. 

Advertisement

Udayavani is now on Telegram. Click here to join our channel and stay updated with the latest news.

Next