Advertisement

Festive: ಹಬ್ಬದ ಋತುವಿಗೆ ಸಾಂಪ್ರದಾಯಿಕ ಕ್ರೀಡಾ ಮೆರುಗು

11:51 PM Oct 06, 2023 | Team Udayavani |

ಕಡಲು ಮತ್ತು ಮಲೆನಾಡ ನಡುವಣ ತುಳುನಾಡು ಎಂಬ ಪ್ರತಿಷ್ಠಿತ ಪ್ರದೇಶ ಸಾಂಪ್ರ ದಾಯಿಕ ಪರಂಪರೆಯ ಜತೆಗೆ ಇಲ್ಲಿನದೇ ಆದ ಆಟಗಳ ಮೆರು ಗನ್ನು ಹೊಂದಿದೆ. ಈ ಪ್ರದೇಶದ ಭೌಗೋಳಿಕ ಸ್ವರೂಪ ಕೂಡ ಈ ವಿಶಿಷ್ಟ ಜೀವನ ಶೈಲಿಗೆ ಕಾರಣವೂ ಆಗಿದೆ. ಇನ್ನು ಹಬ್ಬಗಳ ಋತು ಶಿವರಾತ್ರಿಯಿಂದ ಆರಂಭವಾಗಿ ಅಷ್ಟಮಿ, ಚೌತಿಯಿಂದ ಮುಂದು ವರಿದು ಬಹುವಿಧದ ಹಬ್ಬಗಳು. ಈ ಹಬ್ಬಗಳ ಆಚರಣೆಯೊಂದಿಗೆ ಜನ ಪದೀಯ, ಪಾರಂಪರಿಕ ಮತ್ತು ಆಧು ನಿಕ ಕ್ರೀಡೆಗಳು ಬೆಸೆದು ಕೊಂಡಿವೆ.

Advertisement

ಇಲ್ಲಿನ ಜನತೆ ಅನಾದಿ ಕಾಲ ದಿಂದಲೂ ಆಯಾ ಋತುವಿಗೆ ಅನು ಗುಣವಾಗಿ ಪಾರಂಪರಿಕ ಆಟಗಳನ್ನು ಸವಿಯುತ್ತಿರುತ್ತಾರೆ. ಬೇಸಗೆಯಲ್ಲಿ ಬಹು ಆಯಾಸವಿಲ್ಲದ ಆಟಗಳು. ಆದರೆ ಚಳಿಗಾಲದಲ್ಲಿ ತುಸು ಬೆಚ್ಚನೆಯ ಸ್ಪರ್ಶ ನೀಡುವ ಆಟಗಳು. ಮಳೆಗಾಲದಲ್ಲಂತೂ ಬಗೆಬಗೆಯ ಒಳಾಂಗಣ ಮತ್ತು ಹೊರಾಂಗಣ ಆಟಗಳ ವೈಭವ.

ಸಾಮಾನ್ಯವಾಗಿ ತುಳುನಾಡಿನ ಅಂಗಣ ಗಳಲ್ಲಿ ಒಂದಿಷ್ಟು ವಿಸ್ತೃತ ಅವಕಾಶ ದೊರೆತರೆ ಅಲ್ಲಿ ಕುಟ್ಟಿ ದೊಣ್ಣೆ (ಚಿನ್ನಿದಾಂಡು)ಯ ಆಟ ವಿಜೃಂಭಿಸುತ್ತದೆ. ಪುಟ್ಟ ಭೂಚಡಿಯಲ್ಲಿ ಕುಟ್ಟಿ ಯನ್ನು ಇರಿಸಿ ದೊಣ್ಣೆಯಿಂದ ಎದುರಾಳಿಯ ತಂಡದತ್ತ ಚಿಮ್ಮಿಸುವ ಸೊಬಗಿನ ಆಟವಿದು. ಇದರಲ್ಲಿ ಕ್ಯಾಚಿಂಗ್‌, ಓಟ ಇತ್ಯಾದಿಗಳೆಲ್ಲ ಅಂತರ್ಗತಗೊಳ್ಳುತ್ತದೆ.

ಗೇರು ಬೀಜದ ಋತು ಬಂತೆಂದರೆ ಮತ್ತು ಗೇರುಬೀಜ ಸಂಗ್ರಹವಾಯಿತೆಂದರೆ ಅಲ್ಲಿ ಈ ಗೇರುಬೀಜಗಳನ್ನೇ ಪಣಕ್ಕಿಟ್ಟು ಆಡುವ ಆಟಗಳು ಅನೇಕ. ನಿಶಾನೆ ಇರಿಸಿ ಕಲ್ಲು ಎಸೆತದ ದೂರಕ್ಕೆ ಅನುಗುಣವಾಗಿ ಈ ನಿಶಾನೆಗೆ ಹೊಡೆದು ಬೀಳಿಸಿದರೆ ಪಣಕ್ಕಿಟ್ಟ ಗೇರು ಈತನ ವಶ. ಅಂತೆಯೇ ಗೇರು ಬೀಜದ ಜತೆಯಲ್ಲಿ ಬಿಲ್ಲಿಸ್‌ ಕೂಡ ಜನಪ್ರಿಯ. ಆದರೆ ಜತೆಯಲ್ಲಿ ಸರಿ- ಮುಗುಳಿಯಂತೂ ಗೇರು ಮಾತ್ರವಲ್ಲದೆ ಇತರ ಪುಟ್ಟಪುಟ್ಟ ಧಾನ್ಯ, ಫಲಗಳಿಗೂ ಸಂಬಂಧಿಸಿದೆ. ಅಂಗೈಯಲ್ಲಿ ಅಡಗಿಸಿಟ್ಟ ವಸ್ತು ಸರಿ- ಮುಗುಳಿಯ ಪಂಥವಾದರೆ ಗೆದ್ದವನಿಗೆ ಆ ವಸ್ತು ಲಭ್ಯ. ಒಂದು ರೀತಿಯಲ್ಲಿ ಬಹುಜನ ವಿವಿಧ ಸಂದರ್ಭಗಳಲ್ಲಿ ಪಂಥ ಇಟ್ಟುಕೊಳ್ಳುವ ಆಟವಿದು. ಇನ್ನು ಚೆನ್ನೆಮಣೆ ಆಟವು ಮಹಿಳೆಯರ ಜನಪ್ರಿಯ ಕ್ರೀಡೆ. ಮಂಜುಟ್ಟಿ ಅಥವಾ ಇತರ ಧಾನ್ಯಗಳನ್ನು ಬಳ ಸುವುದಿದೆ. (ಜನಪದೀಯ ನಂಬಿಕೆಯ ಪ್ರಕಾರ ಅಕ್ಕ ತಂಗಿಯರು ಈ ಆಟ ಆಡುವಂತಿಲ್ಲ.) ಇನ್ನು ತಪಂಗಾಯಿ (ಅದು ತೆಂಗಿನಕಾಯಿಯನ್ನು ಅಡಗಿಸಿಟ್ಟು ಆಡುವ ಆಟ), ಅಂತೆಯೇ ಪರಸ್ಪರ ಎದುರಾಳಿಗಳು ತೆಂಗಿನ ಸಿಪ್ಪೆ ಸುಲಿದು ಒಂದಕ್ಕೊಂದು ಗಟ್ಟಿಸಿ ಒಡೆಯುವ ಆಟವೂ ಇದೆ. ಒಡೆದವನೂ ಗೆದ್ದ ಮತ್ತು ಸಾಮಾನ್ಯವಾಗಿ ಹುಡುಗಿಯರು ಆಡುವ ಜುಬುಲಿ ಆಟ ಕೌಶಲವನ್ನು ಪ್ರತಿಪಾ ದಿಸುತ್ತದೆ. ಪಲ್ಲಿ ಪತ್ತ್ ಎಂಬುದು ಸಾಹಸಿಗರ ವಿಶೇಷವಾಗಿ ಯುವಕರ ಗಂಭೀರವಾದ ಆಟ.

ಅನೇಕ ಜನಪದೀಯ ತಜ್ಞರ ಸಂಶೋಧನ ಲೇಖನಗಳನ್ನಾಧರಿಸಿ ಉಲ್ಲೇಖೀಸಬಹುದಾದ ಆಟಗಳು: ಪೆತ್ತ ಪಿಲಿಯಾಟ (ಹುಲಿ-ದನ ಆಟ), ಕಕ್ಕೆ ಗಿಳಿ- ಎರಡು ಬೆರಳುಗಳ ನಡುವೆ ಜಲಸ್ಪರ್ಶವಾದರೆ ಆತ ಕಕ್ಕೆ. ಆತನನ್ನು ಆಡಿ ಸುವುದು ಗಿಳಿ. ಕೊನೆಗೆ ಏನೂ ಇಲ್ಲವಾದರೆ ತೆಂಗಿನ ಸೋಗೆಯಲ್ಲಿ ಓರ್ವ ಕುಳಿತು ಇನ್ನೋರ್ವ ಅದನ್ನು ಎಳೆಯುವುದು ಕೂಡ ಮೋಜಿನ ಆಟವೇ ಸರಿ. ಇದನ್ನು ಕೆಸರು ಗದ್ದೆಯಲ್ಲಿ ಆಡಿ ಮಕ್ಕಳು ಸಂಭ್ರಮಿ ಸುವುದನ್ನು ನೋಡುವುದೇ ಸೊಗಸು. ಇನ್ನು ಜನಪದೀಯವಾಗಿ ಚೆನ್ನೆ ನಲಿಕೆ, ದುಡಿ ನಲಿಕೆ ಇತ್ಯಾದಿಗಳೆಲ್ಲ ಒಟ್ಟು ಈ ತುಳುನಾಡ ಪರಂಪರೆಯನ್ನು ಸಮೃದ್ಧಗೊಳಿಸುತ್ತವೆ. ಚೆನ್ನು ನಲಿಕೆ ಎಂಬುದು ಜನಪದೀಯ ನಂಬಿಕೆಯ ಆಟ.

Advertisement

ಇದು ಹೆಚ್ಚಾಗಿ ಸುಗ್ಗಿಯ ಹುಣ್ಣಿಮೆಯಂದು ಆಚರಣೆಯಾಗುತ್ತದೆ. ಮುಟ್ಟಾಳೆಯನ್ನು ಧರಿಸಿ ದುಡಿ ಬಡಿತಕ್ಕೆ ತಕ್ಕಂತೆ ಮನೆ ಮನೆಗಳಲ್ಲಿ ನಲಿಯುವುದು ಸಂಪ್ರದಾಯ. ಸ್ವಲ್ಪ ಮಟ್ಟಿಗೆ ಆಟಿಕಳಂ ಜದಂತೆ ಈ ಪ್ರದರ್ಶನವಿರುತ್ತದೆ. ಹಾಗೆಯೇ ಹುಡುಗರ ಮೆಚ್ಚಿನ ಆಟ ಬುಗರಿ ಪಂಥ. ಮಳೆಗಾಲದಲ್ಲಿ ಮನೆಯ ಆವರಣದಲ್ಲೂ ಇದು ಸಾಧ್ಯ. ನಿರ್ದಿಷ್ಟ ವೃತ್ತಾಕಾರದೊಳಗೆ ಬುಗರಿಯನ್ನು ಹಗ್ಗದಲ್ಲಿ ತಿರುಗಿಸುತ್ತಾ ಇನ್ನೊಂದು ಬುಗರಿಗೆ ಬಡಿದು ಅದನ್ನು ವಶಪಡಿಸಿಕೊಳ್ಳುವ ಕೌಶಲದ ಆಟವಿದು. ಬುಗರಿಗೆ ಹಗ್ಗ ಸುತ್ತಿ ಚಿಮ್ಮಿಸಿದಾಗ ಗೋಸ್‌ ಎಂಬ ಸದ್ದು ಮುಗಿಲು ಮುಟ್ಟುವುದಿದೆ. ಈ ಎಲ್ಲ ಸಂಪ್ರದಾಯದ ನಡುವೆ ಕಣ್ಣಾಮುಚ್ಚೆ ಕಾಡೆ ಗೂಡೆ, ಟೊಪ್ಪಿ ಆಟ ಮುಂತಾದವು ಕೂಡ ಇಲ್ಲಿನ ಪರಂಪರೆಯೇ ಸರಿ. ಮರಮಂಗೆ ಆಟವನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು.

ಹಾಗೆಂದು ಇಲ್ಲಿ ಹೆಸರಿಸಲಾದ ಆಟಗಳು ಕೇವಲ ಪ್ರಾತಿನಿಧಿಕ. ಇಂತಹ ನೂರಾರು ಆಟಗಳು ತುಳು ನಾಡಿನ ಪರಂಪರೆಯಲ್ಲಿ ಅಂತರ್ಗ ತಗೊಂಡಿವೆ. ಇಲ್ಲಿ ಪ್ರಾಕೃತಿಕವಾಗಿ ಲಭ್ಯವಿರುವ ಸೊತ್ತುಗಳೇ ಆಟದ ಪರಿಕರಗಳಾಗುವುದಿದೆ. ಗೋಡೆಗೆ ಮೂರು ಸುಣ್ಣದ ಗೆರೆ ಬಳಿದು, ಕೊತ್ತಲಿಗೆಯ ಬ್ಯಾಟ್‌ನಿಂದ ಬಟ್ಟೆಯ ಚೆಂಡನ್ನು ಎದುರಿಸಿ ಆಡುವುದು ಕೂಡ ಕ್ರಿಕೆಟಿನ ಒಂದು ರೀತಿಯ ಮೂಲ ಸ್ವರೂಪ. ಇನ್ನು ಕೆಲವು ದೇವಳಗಳ ಮತ್ತು ಶಕ್ತಿಕೇಂದ್ರಗಳ ಆವರಣಗಳಲ್ಲಿ ನುಣುಪಾದ ದೊಡ್ಡ ಕಲ್ಲನ್ನು ಎತ್ತಿ ಭುಜದಿಂದ ಹಿಂದೆ ಸರಿಸುವುದು ಸಾಹಸಮಯ ಆಟ.

ಇನ್ನು ಆಪ್ತ ವಲಯದ ಸದಸ್ಯರು ಟೊಂಕದ ಆಟವನ್ನು ಕೂಡ ಆಡುತ್ತಾ ಒಂದು ರೀತಿಯಲ್ಲಿ ಆಧುನಿಕ ಶೈಲಿಯ ವ್ಯಾಯಾ ಮವನ್ನು ಮಾಡಿದಂತಹ ಫಲಿತಾಂಶ. ಒಂದೆರಡು ದಶಕಗಳ ಹಿಂದೆ ತುಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಆಟ ಗಳು ಬಹು ಜನಪ್ರಿಯವಾಗಿದ್ದವು. ಆದರೆ ಆಧುನೀಕರಣದ ಭರಾಟೆ ಈ ಪರಂಪರೆಯ ಮೇಲೂ ಫಲಿತಾಂಶವನ್ನು ಬೀರಿದೆ. ಮರಗಿಡಗಳಲ್ಲಿ ಆಟ, ನೀರಲ್ಲಿ ಈಜು, ಪರಿಕರಗಳ ಹೊಂದಾಣಿಕೆ, ಸಾಮೂಹಿಕವಾದ ಮನೋಭಾವ, ಹೊಸತನಗಳ ಶೋಧನೆ, ಹೊಸ ಗೆಳೆಯರ ಸಂಪಾದನೆ, ಹುಣಸೆ ಬೀಜ ಕೂಡ ಆಟದ ವಸ್ತು ಆಗುವ ಬಗೆ ಎಲ್ಲವೂ ನಿಧಾನಕ್ಕೆ ಮರೆಯಾಗುತ್ತಿದೆ. ಈಗ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರೂ ಸೆಲ್‌ಫೋನ್‌ (ಮೊಬೈಲ್‌)ಗಳನ್ನು ಬಳಸುತ್ತಿರುವುದರಿಂದ ಇಂತಹ ಆಟಗಳಿಗೆ ವಸ್ತುಶಃ ವಿರಾಮ ಹೇಳಿದಂತಿದೆ. ಒಂದು ಕಾಲಕ್ಕೆ ಮಕ್ಕಳು ಊಟ ಮಾಡ ಬೇಕಾದರೆ ಚಂದಮಾಮನನ್ನು ಅಥವಾ ನಕ್ಷತ್ರ ಪುಂಜಗಳನ್ನು ತೋರಿಸುವ ಪರಿ ಪಾಠವಿತ್ತು. ಈಗ ಪುಟ್ಟ ಮಕ್ಕಳಿಗೆ ಊಟ ಮಾಡಿಸುವಾಗ ತಾಯಂದಿರು ಸೆಲ್‌ಫೋನ್‌ಗಳಲ್ಲೇ ಚಂದಿರನನ್ನು ಅಥವಾ ಕಾಟೂìನ್‌ಗಳನ್ನು ತೋರಿಸುವುದು ರೂಢಿಯಾಗಿ ಬಿಟ್ಟಿದೆ.

ಅಂದಹಾಗೆ:
ಪುಟ್ಟ- ಅಜ್ಜಮ್ಮ, ನನಗೆ 100 ಮೀಟರ್‌ ಓಟದಲ್ಲಿ ಬೆಳ್ಳಿಯ ಪದಕ ಸಿಕ್ಕಿತು.
ಅಜ್ಜಮ್ಮ- ಹೌದ ಮಗ! ಎಷ್ಟು ಮಂದಿ ಓಟದಲ್ಲಿ ಇದ್ದರು?
ಪುಟ್ಟ- ನಾನು ಸೇರಿ ಇಬ್ಬರು!

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next