Advertisement
36 ಗಂಟೆಯಾದ್ರೂ ಮನೆಯಲ್ಲೇ ಸೋಂಕಿತ: ಶಿವಾಜಿನಗರ ಬಳಿಯ ಭಾರತಿನಗರದ ನಿವಾಸಿಯೊಬ್ಬರಿಗೆ ಕೋವಿಡ್ 19 ದೃಢಪಟ್ಟು 36 ಗಂಟೆಗಳಾದರೂ, ಆಸ್ಪತ್ರೆಗೆ ದಾಖಲಿಸಲಾಗಿಲ್ಲ. ಮನೆಗೆ ಆ್ಯಂಬುಲೆನ್ಸ್ ಕಳುಹಿಸುವುದಾಗಿ ಪಾಲಿಕೆ ಅಧಿಕಾರಿಗಳು ಹೇಳಿದ್ದರು. ಆದರೆ, ಆ್ಯಂಬುಲೆನ್ಸ್ ಕಳಿಸಿರಲಿಲ್ಲ ಎಂದು ಸೋಂಕಿತ ಕುಟುಂ ಬದ ಸದಸ್ಯರು ಆರೋಪಿಸಿದ್ದಾರೆ. ಸೋಂಕಿತ ವ್ಯಕ್ತಿಯ ಮನೆಯಲ್ಲಿ ಆರು ಜನ ಇದ್ದು, ಅವರಲ್ಲಿ ಇಬ್ಬರು ಹಿರಿಯ ನಾಗರಿಕರು, ಇಬ್ಬರು ಮಕ್ಕಳೂ ಇದ್ದಾರೆ. ನೋಡಲ್ ಅಧಿಕಾರಿ ಗಳು ಯಾರೂ ಕರೆ ಸ್ವೀಕರಿಸುತ್ತಿಲ್ಲ. 108ಗೆ ಕರೆ ಮಾಡಿದರೆ, “ಮೊದಲು ಆಸ್ಪತ್ರೆಯಲ್ಲಿ ಹಾಸಿಗೆ ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಿ.
Related Articles
Advertisement
ಸಮನ್ವಯದ ಕೊರತೆ ಗರ್ಭಿಣಿ ಅಲೆದಾಟ: ಪಾಲಿಕೆ ಅಧಿಕಾರಿಗಳ ಸಮ ನ್ವಯ ಕೊರತೆಯಿಂದ ಗರ್ಭಿ ಣಿ ಮಂಗಳವಾರ ಮನೆಯಿಂ ದ ಆಸ್ಪತ್ರೆಗಳಿಗೆ ಅಲೆದಾಡಿದ ಘಟನೆ ನಡೆದಿದೆ. ಮೊದಲು ಸೋಂಕು ಹಿನ್ನೆಲೆಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಸೋಂಕು ಇಲ್ಲ ಎಂದು ವಾಪಸ್ ಕರೆತಂದು ಬಿಟ್ಟಿದ್ದಾರೆ. ಬೆನ್ನಲ್ಲೇ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲು ಮೊಗ ದೊಂದು ಆ್ಯಂಬುಲನ್ಸ್ ಮನೆ ಮುಂದೆ ಬಂದು ನಿಂತಿದೆ. ಆಗ, ಕುಟುಂಬದ ಸದಸ್ಯರು ಚಾಲಕನಿಗೆ ತರಾಟೆಗೆ ತೆಗೆದುಕೊಂಡು, ವಾಪಸ್ ಕಳುಹಿಸಿದ್ದಾರೆ.
ನಡೆದಿದ್ದಿಷ್ಟು: ಹೊಸಗುಡ್ಡದಹಳ್ಳಿಯ ಗರ್ಭಿಣಿಯೊಬರು ಸೋಂಕು ಪರೀಕ್ಷೆಗೆ ಒಳಗಾಗಿದ್ದು, ಸೋಮವಾರ ತಡರಾತ್ರಿ ಪಾಲಿಕೆ ಅಧಿಕಾರಿಗಳು ಕರೆ ಮಾಡಿ ಗರ್ಭಿಣಿಗೆ ಸೋಂಕು ದೃಢಪಟ್ಟಿದ್ದು, “ಬೆಳಗ್ಗೆ 10 ಗಂಟೆಗೆ ಆ್ಯಂಬುಲೆನ್ಸ್ ಮನೆ ಬಳಿ ಬರಲಿದೆ’ ಎಂದು ತಿಳಿಸಿದ್ದಾರೆ. ಅದರಂತೆ ಬೆಳಗ್ಗೆ ಆ್ಯಂಬುಲೆನ್ಸ್‌ನಲ್ಲಿ ಹೊಸ ಕೋಟೆ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಅಲ್ಲಿ ವೈದ್ಯರು, “ನಿಮಗೆ (ಗರ್ಭಿಣಿಗೆ) ಸೋಂಕು ಇಲ್ಲ’ ಎಂದು ವಾಪಸ ಕಳುಹಿಸಿದ್ದಾರೆ.
ಮನೆಗೆ ಬಂದ ನಂತರ ಮತ್ತೂಂದು ಆ್ಯಂಬುಲೆನ್ಸ್ ಬಂದಿದೆ. “ನಿಮಗೆ ಸೋಂಕು ದೃಢಪಟ್ಟಿದೆ’ ಎಂದು ಚಾಲಕ ತಿಳಿಸಿದ್ದಾರೆ. ಆಗ ಕುಟುಂಬಸ್ಥರು, “ಈಗಷ್ಟೇ ಆಸ್ಪತ್ರೆಗೆ ಹೋಗಿಬಂದಿರುವುದಾಗಿ’ ಹೇಳಿದ್ದಾರೆ. ಆದರೆ ಚಾಲಕ, “ರಾಜಾಜಿನಗರದ ಇಎಸ್‌ಐ ಆಸ್ಪ ತ್ರೆಗೆ ಹೋಗಬೇಕಿತ್ತು. ಅದುಬಿಟ್ಟು ಖಾಸಗಿ ಆಸ್ಪತ್ರೆಗೆ ಹೇಗೆ ಹೋಗಿದ್ದೀರಿ’ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಕುಟುಂಬಸ್ಥರು, “ಮೊದಲು ಸೋಂಕು ದೃಡ ಪಟ್ಟಿದೆಯೇ ಅಥವಾ ಇಲ್ಲವೇ ಎಂದು ಬಹಿರಂಗಪಡಿಸಿ. ನಂತರ ಆಸ್ಪತ್ರೆಗೆ ಬರಲಾಗು ವುದು’ ಎಂದು ಹೇಳಿಕಳುಹಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಧರಣಿ: ಖಾಸಗಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಹೊರಟ ಅಧಿಕಾರಿಗಳ ವಿರುದ್ಧ ಸ್ಥಳೀಯರು ಧರಣಿ ನಡೆಸಿರುವ ಘಟನೆ ನಗರದ ಕೋಣನಕುಂಟೆ ಬಳಿ ನಡೆದಿದೆ. ಬಡಾವಣೆಯಲ್ಲಿರುವ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನ ಸ್ಥಳೀಯರು ಆಸ್ಪತ್ರೆಯ ಮುಂದೆ ಜಮಾವಣೆಗೊಂಡು, “ಆಸ್ಪತ್ರೆ ಅಕ್ಕಪಕ್ಕದಲ್ಲಿ ಮನೆಗಳಿವೆ. ಹೀಗಾಗಿ, ಸೋಂಕು ಹರಡುವ ಸಾಧ್ಯತೆ ಇದೆ’ ಎಂದು ಆರೋಪಿಸಿದರು.