Advertisement
ಕೋಟ್ಯಂತರ ಮೌಲ್ಯದ ಬೆಳೆ ನಷ್ಟವಾ ಗಿದೆ. ಕಳೆದ ವಾರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಸಮೀಪ ಮನು ಎಂಬ ಯುವಕ ಕಾಡಾನೆ ದಾಳಿಗೆ ಬಲಿಯಾಗಿದ್ದು, ಇದು ಜನರ ಆಕ್ರೋಶ ಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮಾನವ ಪ್ರಾಣಿ ಸಂಘರ್ಷದಿಂದ ಉಂಟಾಗಿರುವ ಪ್ರಾಣ ಹಾನಿ ಮತ್ತು ವನ್ಯ ಪ್ರಾಣಿಗಳಿಂದ ಆಗಿರುವ ಬೆಳೆ ನಾಶ ಹಾಗೂ ಇನ್ನಿತರೇ ಮಾನವ ಪ್ರಾಣಿ ಸಂಘರ್ಷಕ್ಕೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ, ಈ ಸಮಸ್ಯೆಗೆ ಪರಿಹಾರ ಕ್ರಮ ಗಳನ್ನು ಒಳಗೊಂಡ ಒಂದು ವಿಸ್ತ್ರತವಾದ ವರದಿ ಸಲ್ಲಿಸಲು ರಚಿಸಲಾಗಿದ್ದ ತಂಡ ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಿದ್ದು ಕಾಡಾನೆ ಸಮಸ್ಯೆಗೆ ಅಂತಿಮವಾಗಿ ಪರಿಹಾರ ಕಾಣುವ ನಿರೀಕ್ಷೆಯನ್ನು ಬೆಳೆಗಾರರು ಹೊಂದಿದ್ದಾರೆ.
Related Articles
Advertisement
ಅರಣ್ಯಾಧಿಕಾರಿಗಳೊಂದಿಗೆ ಚರ್ಚೆ: ನ.8 ರಂದು ತಂಡವು ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳೊಂದಿಗೆ ಮತ್ತು ತಂಡದ ಸದಸ್ಯರೊಂದಿಗೆ ಚರ್ಚೆ ನಡೆಸಲಿದೆ. ಕೊಡಗು ಜಿಲ್ಲೆಗೆ ತೆರಳಿ ಅರಣ್ಯಾಧಿಕಾರಿಗಳೊಂದಿಗೆ ಮತ್ತು ತಂಡದ ಸದಸ್ಯರೊಂದಿಗೆ ಸಭೆ ನಡೆಸಲಿದೆ. ನಂತರ ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗಟ್ಟಲು ದುಬಾರೆ, ಎಡವನಾಡು, ಸಿದ್ಧಾಪುರ, ಅತ್ತೂರು ಮತ್ತು ನೆಲ್ಲಿ ಹುದಿಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಫಿ ತೋಟದ ರೈತರೊಂದಿಗೆ ಚರ್ಚೆ ಮತ್ತು ಮಡಿಕೇರಿ ಮತ್ತು ವಿರಾಜಪೇಟೆ ವಿಭಾಗದಲ್ಲಿ ಕ್ಷೇತ್ರ ತಪಾಸಣೆ ಮತ್ತು ವಾಸ್ತವ್ಯ ಹೂಡಲಿದೆ. ನ.9ರಂದು ಮಡಿಕೇರಿ ವನ್ಯಜೀವಿ, ವಿರಾಜಪೇಟೆ ಮತ್ತು ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್‌ಗಳ ಕ್ಷೇತ್ರ ತಪಾಸಣೆ ನಡೆಸಿ ನಂತರ ಕೇಂದ್ರಸ್ಥಾನಕ್ಕೆ ಹಿಂತಿರುಗಲಿದೆ.
ಕಾಡಾನೆ ಸಮಸ್ಯೆ ಬಗೆಹರಿಸುವ ನೆಪದಲ್ಲಿ ಕಳೆದ 10 ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ ಅಧ್ಯಯನ ಮಾಡಿಕೊಂಡು ಬಂದಿದೆ. ಇನ್ನು ಎಷ್ಟು ಬಾರಿ ಅಧ್ಯಯನ ಮಾಡಿದರು ಪ್ರಯೋಜನವಿಲ್ಲ, ಇದು ಅಂತಿಮ ಅಧ್ಯಯನವಾಗಬೇಕು ಹಾಗೂ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು. – ಯಡೇಹಳ್ಳಿ ಮಂಜುನಾಥ್, ಕಾಡಾನೆ ಸಮಸ್ಯೆ ಹೋರಾಟಗಾರ
ಸಿಎಂ ಬೊಮ್ಮಾಯಿಯವರು ವಿಶೇಷ ಕಾಳಜಿ ವಹಿಸಿ ಉನ್ನತ ಅರಣ್ಯಾಧಿಕಾರಿಗಳ ತಂಡವನ್ನು ಜಿಲ್ಲೆಗೆ ಕಳುಹಿಸಿಕೊಡುತ್ತಿದ್ದಾರೆ. ಈ ಬಾರಿ ಕಾಡಾನೆ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವ ನಿರೀಕ್ಷೆಯಿದೆ. -ಎಚ್.ಎಂ ವಿಶ್ವನಾಥ್, ಮಾಜಿ ಶಾಸಕರು
– ಸುಧೀರ್ ಎಸ್.ಎಲ್