Advertisement
ಆದರೆ ಒಂದು ಗುಂಪು ಜನರು ಇವೆಲ್ಲಕ್ಕೂ ವ್ಯತಿರಿಕ್ತವಾಗಿ ತಮ್ಮ ಆಲೋಚನೆಗಳೇ ಶ್ರೇಷ್ಠ ಎನ್ನುವ ಬಲವಾದ ನಂಬಿಕೆಯನ್ನು ಹೊಂದಿದ್ದರೆ ಅವರು ಭೂಗತವಾಗಿ ಕೆಲಸ ಮಾಡಲು ಶುರುಮಾಡುತ್ತಾರೆ. ಅವರದ್ದೇ ಆಲೋಚನೆಗಳು ಮಂಚೂಣಿಗೆ ಬಂದಾಗ, ಇವರು ಹೊರಬರುತ್ತಾರೆ. ಉದಾಹರಣೆಗೆ, ಬಿಳಿಯ ಜನಾಂಗವೇ ಶ್ರೇಷ್ಠ ಎನ್ನುವ ಕೆಲವು ಪಾಶ್ಚಾತ್ಯರು.
Related Articles
Advertisement
18 ಮೇ 1593ರಲ್ಲಿ ಮಾರ್ಲೋನ ಬಂಧನಕ್ಕೆ ವಾರಂಟ್ ಹೊರಡಿಸಲಾಯಿತು. ಅವನು ಬರೆದ ಒಂದು ನಾಟಕದಲ್ಲಿ ಧರ್ಮದ್ರೋಹದ ಒಂದು ಪ್ಯಾರಾದಷ್ಟು ಅಂಶ ಇದೆ ಎನ್ನುವುದೇ ಅದಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ, ಇಂತಹದ್ದೊಂದು ರಹಸ್ಯ ಸಂಘ ಇದೆ ಎನ್ನುವುದು ಬೆಳಕಿಗೆ ಬಂತು. ಆದರೆ ಅವನನ್ನು ಕೋರ್ಟಿಗೆ ತೆಗೆದುಕೊಂಡು ಹೋಗುವ ಮೊದಲೇ ಸಂಶಯಾಸ್ಪದ ರೀತಿಯಲ್ಲಿ ಆತ ಸತ್ತುಹೋದ. ಇದು ಕೊಲೆ, ಸಹಜ ಸಾವಲ್ಲ ಎಂದು ಇಂದಿಗೂ ಜನರು ಮಾತಾಡುತ್ತಾರೆ.
ಬ್ರಿಟನ್ನಿನಲ್ಲಿ ಸ್ವಾನ್ ತಲೆ, ಹಂದಿಯ ತಲೆ, ಕುದುರೆಯ ತಲೆ ಹೀಗೆಲ್ಲ ಪಬ್ಬುಗಳಿಗೆ ಹೆಸರಿಡುವುದಿದೆ. ಅದಕ್ಕೆ ಇಂತದ್ದೇ ಎನ್ನುವ ಅರ್ಥವಿಲ್ಲ. ಈ ಸಂಪ್ರದಾಯವನ್ನು ಇಂದಿಗೂ ನೋಡಬಹುದು.
ಕರುಗಳ ತಲೆ ಕ್ಲಬ್ ( ದಿ ಕಾಲ್ವಸ್ ಹೆಡ್) – ಎನ್ನುವುದು ಇಂತಹುದ್ದೇ ಮತ್ತೂಂದು ರಹಸ್ಯ ಸಂಘ. ಈ ರಹಸ್ಯ ಕ್ಲಬ್‌ನ ಬಗ್ಗೆ ಇಂದಿಗೂ ಬಹಳ ವಿವಾದಾಸ್ಪದವಾದ ಚರ್ಚೆಯಾಗುತ್ತದೆ. ಇವರಿದ್ದುದು 17 ನೇ ಶತಮಾನದ ಉತ್ತರಾರ್ಧದಲ್ಲಿ. ಈ ಕ್ಲಬ್‌ನ ಸದಸ್ಯರಿಗೆ ಒಂದನೇ ಚಾರ್ಲ್ಸ್‌ನ ಹತ್ಯೆಯಾದ ಬಗ್ಗೆ ತೀವ್ರ ಅಸಮಾಧಾನವಿತ್ತು. 1649ನೇ ಇಸವಿ ಜನವರಿ 30ನೇ ತಾರೀಕು ಈ ರಾಜನ ತಲೆ ಕಡಿದು ಹತ್ಯೆಮಾಡಿದ ಕಾರಣ, ಈ ಕ್ಲಬ್‌ನ ಸದಸ್ಯರು ಪ್ರತೀ ವರ್ಷ ಅದೇ ದಿನದಂದು ಒಟ್ಟುಗೂಡಿ, ಈ ಬಗ್ಗೆ ಸಂತಾಪ, ಚರ್ಚೆ, ಕೋಪ ಮತ್ತು ಪ್ರತಿರೋಧವನ್ನು ತೋರಿಸುತ್ತಿದ್ದರೆನ್ನಲಾಗಿದೆ. ಆದರೆ ಒಂದು ಪ್ರತೀತಿಯ ಪ್ರಕಾರ ಅವರದ್ದೊಂ ದು ಘೋರ ನಡವಳಿಕೆ ಇತ್ತೆನ್ನಲಾಗಿದೆ. ಅಂದು ಅವರು ಚಾರ್ಲ್ಸ್‌ನ ಪ್ರತಿನಿಧಿಯಾಗಿಸಿ ಕರುವೊಂದರ ಶಿರಚ್ಛೇದ ಮಾಡುತ್ತಿದ್ದರಂತೆ.
ಪ್ರಜೆಗಳನ್ನು ಪ್ರತಿನಿಧಿಸಲು ಒಂದು ಕಾಡುಹಂದಿಯ ತಲೆಯನ್ನು ಮತ್ತು ತಂದೆಯ ತಲೆ ಕಡಿಸಿದ ಅವನ ಮಗ ಎರಡನೇ ಚಾರ್ಲ್ಸ್‌ನ ಪ್ರತೀಕವಾಗಿ ಒಂದು ಕಾಡ್ ಮೀನಿನ ತಲೆಯನ್ನು ಟೇಬಲ್ಲಿನ ಮೇಲಿಟ್ಟು ಅಲಂಕರಿಸುತ್ತಿದ್ದರಂತೆ. ಇಷ್ಟೆಲ್ಲ ವಿವರಗಳು ಸಿಕ್ಕಿದ್ದು 1707ರಲ್ಲಿ ಸಿಕ್ಕ ಒಂದು ಪುಸ್ತಕದ ಮೂಲಕ. ಅದರಲ್ಲಿ ಶಬ್ದಗಳಿರಲಿಲ್ಲವಾದರೂ, ಇಂತಹದ್ದೊಂದು ಚಿತ್ರವಿತ್ತಂತೆ. ಆದರೆ ಅದರ ಜತೆಯಲ್ಲಿ ಆ ಕ್ಲಬ್‌ನ ದ್ವಾರದಲ್ಲಿ ಒಂದು ವಿಕೃತ ಪಿಶಾಚಿಯ ಚಿತ್ರವೂ ಇದ್ದ ಕಾರಣ, ಈ ಎಲ್ಲವೂ ಕಾಲ್ಪನಿಕವೋ ಅಥವಾ ನಿಜವೋ ಎನ್ನುವ ಬಗ್ಗೆ ಬಹಳಷ್ಟು ವಿವಾದಗಳಿವೆ. ಇದಾದ 33 ವರ್ಷಗಳ ಅನಂತರ ಸಫೋಕ್ ಎನ್ನುವ ನಗರದಲ್ಲಿ ಒಂದಷ್ಟು ಜನ ಪಾನಮತ್ತರಾಗಿ, ತಾವು ಕೂಡ ಈ ರಹಸ್ಯ ಸಭೆಯ ಸದಸ್ಯರೆಂದು ಹೇಳಿಕೊಂಡಾಗ ಅಥವಾ ಬೊಗಳೆ ಬಿಟ್ಟಾಗ ಜನರು ತತ್ತರಿಸಿ, ಪೊಲೀಸರಿಗೆ ಕರೆಮಾಡಿ ಅವರನ್ನು ಬಂಧಿಸಿದರಂತೆ.
ಗೋರ್ಮೋಗೊನ್ಸ್ (ಪಿಶಾಚಿ ಮತ್ತು ಡ್ರಾಗನ್ ಜೋಡಣೆ ಪದ)- ಪ್ರಪಂಚದಲ್ಲೇ ಕುಪ್ರಸಿದ್ಧವಾದ ಒಂದು ರಹಸ್ಯ ಸಂಘ ಎಂದರೆ ಅದು ಇಲ್ಯುಮಿನಾಟಿ ಅಥವಾ ಫ್ರೀಮೇಸನರಿ. ಆದರೆ ಅದರ ನಡಾವಳಿಯನ್ನು ಸಹಿಸದ ಫಿಲಿಪ್ ವಾರ್ಟನ್ ಎನ್ನುವ ಡ್ನೂಕನೊಬ್ಬನನ್ನು ಈ ಸಂಘ ಹೊರದಬ್ಬಿತು. ಅದೇ ಕೋಪದಲ್ಲಿ ಆತ 1723ರ ವೇಳೆಗೆ ಲಂಡನ್ನಿನಲ್ಲಿ ಗೋರ್ಮೋಗೊನ್ಸ್ ಎನ್ನುವ ಮತ್ತೊಂದು ರಹಸ್ಯ ಸಂಘವನ್ನು ಕಟ್ಟಿದ ಎನ್ನಲಾಗಿದೆ. ಇದರ ಅರಿವನ್ನು ನೀಡುವ ಖಚಿತ ದಾಖಲೆಗಳು ದೊರೆತಿಲ್ಲವಾದರೂ, ಅಂದಿನ ಪ್ರಸಿದ್ಧ ಕಲಾವಿದ ವಿಲಿಯಮ್ ಹೋಗರ್ತ್ ಎನ್ನುವವನು ” ಮಿಸ್ಟರಿ ಆಫ್ ಮೇಸೊನರಿ ಬ್ರಾಟ್ ಟು ಲೈಟ್ ಬೈ ಯೆ ಗೊರ್ಮೊಗನ್’ ಎನ್ನುವ ಕಲಾಕೃತಿಯನ್ನು ರಚಿಸಿದ್ದಾನೆ. ಫ್ರೀಮೆಸೊನರಿ ಕ್ಲಬ್‌ನ ಆಚರಣೆಗಳನ್ನು ಆಡಿಕೊಂಡು ಹಲವರಿಗೆ ಅವರ ವೇಷಗಳನ್ನು ಹಾಕಿ, ಕುಚೋದ್ಯ ಮಾಡಿ, ಅವಹೇಳನ ಮಾಡುತ್ತಿರುವ ಚಿತ್ರವದು.ಆಡಿಕೊಂಡು ನಗುವವರು ಎಷ್ಟು ದಿನ ಹಾಗೆ ಮಾಡಲು ಸಾಧ್ಯ ಎನ್ನುವಂತೆ, ಬಲುಬೇಗ ಈ ಸಂಘದ ಹೆಸರು ಅನುಮಾನಗಳಿಗೂ ಎಡೆಮಾಡಿಕೊಡದಂತೆ ಇಲ್ಲವಾಯಿತು ಎನ್ನಲಾಗಿದೆ. “ಗೋಲ್ಡನ್ ಡಾವ್ನ್’
19 ನೇ ಶತಮಾನದ ವೇಳೆಗೆ “ಗೋಲ್ಡನ್ ಡಾವ್ನ್’ ಎನ್ನುವ ಮತ್ತೊಂದು ಅನಧಿಕೃತ ಚಟುವಟಿಕೆಗಳನ್ನು ನಡೆಸುವ, ಕಾನೂನುಗಳ ಸಂಕೋಲೆಗೆ ಒಳಪಡದ ಮತ್ತೊಂದು ಸಂಘ ಕಾರ್ಯಾಚರಣೆ ಮಾಡುತ್ತಿತ್ತು ಎನ್ನಲಾಗಿದೆ. ಯಕ್ಷಿಣಿ, ಪ್ರೇತವಿದ್ಯೆ, ಜಾದೂ, ಅತೀಂದ್ರಿಯ ಮತ್ತು ಅನುಭಾವಿಕ ವಿಚಾರಗಳ ಬಗ್ಗೆ ರಹಸ್ಯವಾದ ಸಭೆಗಳನ್ನು ಇವರು ಹಮ್ಮಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇದರ ಅತಿ ಪ್ರಸಿದ್ಧ ಸದಸ್ಯನೆಂದರೆ ಇಂಗ್ಲಿಷಿನ ಪ್ರಸಿದ್ಧ ಕವಿ ಡಬ್ಲ್ಯು. ಬಿ. ಯೇಟ್ಸ್. ಆದರೆ ಇವರಿದ್ದುದಕ್ಕೆ ಪೂರ್ತಿ ಸಾಕ್ಷ್ಯಾಧಾರಗಳು ದೊರೆತಿವೆ. ಇದು ನಡೆದದ್ದು ಕೂಡ ಒಂದು ಪ್ರಮಾದದ ಮೂಲಕ. 1900 ಎಪ್ರಿಲ್ ತಿಂಗಳಲ್ಲಿ ಯೇಟ್ಸ್ ಒಂದು ರಹಸ್ಯ ಸಭೆಯನ್ನು ಕರೆದಿದ್ದ. ಅದು ನಡೆಯುತ್ತಿದ್ದ ಜಾಗಕ್ಕೆ, ಈ ಸಂಘದಿಂದ ಹೊರಹಾಕಲಾಗಿದ್ದ ಅಲಿಸ್ಟರ್ ಕ್ರಾವ್ಲಿ ಎನ್ನುವವನು ಅತಿಕ್ರಮವಾಗಿ ನುಗ್ಗುತ್ತಾನೆ, ಕೈಯಲ್ಲಿ ಚಾಕು ಹಿಡಿದು ಇಡೀ ಕಟ್ಟಡವನ್ನೇ ವಶಪಡಿಸಿಕೊಂಡಿರುವುದಾಗಿ ಜನರನ್ನು ಹೆದರಿಸುವ ಕಾರಣ, ಆ ಕಟ್ಟಡದಲ್ಲಿದ್ದ ಇತರರು ಹೆದರಿ ಪೊಲೀಸರಿಗೆ ಕರೆ ಮಾಡುತ್ತಾರೆ. ಕವಿ ಯೇಟ್ಸ್ ಮತ್ತು ಅವನ ಸಹಚರರು ಬೆಳಕಿಗೆ ಬರುತ್ತಾರೆ. ಯೇಟ್ಸ್‌ನೂ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಇದಾದ ಅನಂತರವೂ ಯೇಟ್ಸ್ ಸುಮಾರು 1920ರ ವರೆಗೂ ಇದೇ ಹೆಸರಿನಲ್ಲಿ ಮತ್ತೆ ರಹಸ್ಯ ಸಭೆಗಳನ್ನು ಕರೆಯುತ್ತಿದ್ದ ಎನ್ನಲಾಗಿದೆ. ಆತ ಅನುಭಾವಿಕ ವಿಚಾರಗಳಿಗಾಗಿ ಮಾತ್ರ ಅಲ್ಲಿಗೆ ಹೋಗುತ್ತಿದ್ದ ಎನ್ನುವವರೂ ಇದ್ದಾರೆ. ಇಂತಹ ಸಂಘ, ಸೊಸೈಟಿ ಮತ್ತು ಕ್ಲಬ್‌ಗಳು ಈಗಲೂ ಇರಬಹುದು. ಪ್ರತಿಯೊಂದು ದೇಶದಲ್ಲಿಯೂ ಕೆಲಸ ಮಾಡುತ್ತಿರಬಹುದು. ಅವು ರಹಸ್ಯವಾಗಿಯೇ ಇರುವವರೆಗೆ ಅವುಗಳ ಅರಿವು ನಮಗಿಲ್ಲದೇ ಹೋಗಬಹುದು.