ಕಾನ್ಪುರ: ತಮ್ಮನ ಬದಲು ಅಣ್ಣ ಪರೀಕ್ಷೆ ಬರೆಯಲು ಹೋಗಿ ಪರೀಕ್ಷಾ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿರುವ ಮುಸ್ತಫಾಬಾದ್ ನ ಶಕುಂತಲಾ ದೇವಿ ಕಾಶೀರಾಮ್ ವಿದ್ಯಾಲಯದಲ್ಲಿ ನಡೆದಿದೆ.
ಸದ್ಯ ಪರೀಕ್ಷೆ ಬರೆಯಲು ಬಂದ ಅಣ್ಣ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯನ್ನು ಶೇರ್ಪುರ್ ಕಲಾನ್‌ನ ಶಾದಾಬ್ ಎನ್ನಲಾಗಿದೆ.
ಘಟನೆ ವಿವರ : ಬೋರ್ಡ್ ಪರೀಕ್ಷೆ ನಡೆಯುತ್ತಿದ್ದ ವೇಳೆ ಹಾಲ್ ಟಿಕೆಟ್ ನಲ್ಲಿ ತಮ್ಮನ ಫೋಟೋ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ಅವನಂತೆ ಹೋಲುವ ಅಣ್ಣ ಪರೀಕ್ಷೆ ಬರೆಯಲು ಹೋಗಿದ್ದಾನೆ, ಅಲ್ಲದೆ ಯಾರಿಗು ಅನುಮಾನ ಬರುವುದಿಲ್ಲ ಎಂದು ಶಾದಾಬ್ ನಂಬಿದ್ದ ಹಾಗೆ ಪರೀಕ್ಷೆ ನಡೆಯುತಿತ್ತು ಇನ್ನೇನು ಕೆಲವೇ ಹೊತ್ತಿನಲ್ಲಿ ಪರೀಕ್ಷೆ ಮುಗಿದು ಹೋಗುತ್ತದೆ ಎನ್ನುವಷ್ಟರಲ್ಲಿ ಪರೀಕ್ಷೆ ನಡೆಯುವ ಕೊಠಡಿಗೆ ಮೇಲ್ವಿಚಾರಕರು ಬಂದಿದ್ದಾರೆ ಪರೀಕ್ಷಾ ಕೊಠಡಿಯಲ್ಲಿ ಎಲ್ಲರ ಉತ್ತರ ಪತ್ರಿಕೆ, ಹಾಲ್ ಟಿಕೆಟ್ ಗಳನ್ನು ಪರಿಶೀಲನೆ ನಡೆಸಿ ಬಳಿಕ ಶಾಬಾದ್ ಬಳಿಗೆ ಬಂದಿದ್ದಾರೆ, ಹಾಲ್ ಟಿಕೆಟ್ ನಲ್ಲಿ ಫೋಟೋ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಶಾಬಾದ್ ತಾನು ಪರೀಕ್ಷೆ ಬರೆಯಬೇಕಾದ ಅಭ್ಯರ್ಥಿಯಲ್ಲ ಬದಲಿಗೆ ಆತನ ಸಹೋದರ ಎಂದು ತಪ್ಪು ಒಪ್ಪಿಕೊಂಡಿದ್ದಾನೆ.
ಬಳಿಕ ಆತನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ನನ್ನ ತಮ್ಮ ಮುಖೀಮ್ ಬದಲಿಗೆ ನಾನು ಪರೀಕ್ಷೆ ಬರೆಯಲು ಬಂದಿರುವುದಾಗಿ ಅಲ್ಲದೆ ಹಾಲ್ ಟಿಕೆಟ್ ನಲ್ಲಿ ತಮ್ಮನ ಚಿತ್ರ ಸ್ಪಷ್ಟವಾಗಿ ಕಾಣದ ಹಿನ್ನೆಲೆಯಲ್ಲಿ ನಾನು ಬರೆದರೂ ಗೊತ್ತಾಗಲಿಕ್ಕಿಲ್ಲ ಎಂಬ ಕಾರಣದಿಂದ ಪರೀಕ್ಷೆ ಬರೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಶಾಬಾದ್ ನನ್ನು ಪರೀಕ್ಷಾ ಮೇಲ್ವಿಚಾರಕರು ಪೊಲೀಸರಿಗೆ ಒಪ್ಪಿಸಿದ್ದು ಪೊಲೀಸರು ಶಾಬಾದ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ: ಎಕ್ಸಿಟ್ ಪೋಲ್ ಸಮೀಕ್ಷೆ