Advertisement

Sullia: ವಿದ್ಯಾರ್ಥಿನಿಗೆ ಕಿರುಕುಳ ಆರೋಪ

08:45 PM May 23, 2024 | Team Udayavani |

ಸುಳ್ಯ: ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ಯುವಕ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿದೆ.

Advertisement

ಸುಳ್ಯದ ಕಲ್ಲುಮುಟ್ಲುವಿನ ಯುವತಿ ಪೇಟೆಯಿಂದ ಗಾಂಧಿನಗರದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ಯುವಕ ಹಿಂಬಾಲಿಸಿದ್ದಲ್ಲದೆ ಪ್ರೀತಿಸುವುದಾಗಿ ಹೇಳಿದನು. ಯುವತಿಯು ಈ ವಿಚಾರವನ್ನು ಪೇಟೆಯಲ್ಲಿಯೇ ಇದ್ದ ತನ್ನ ತಂದೆಗೆ ತಿಳಿಸಿದಳು. ಅವರು ಬಂದ ಕೂಡಲೇ ಯುವಕ ಹೊಟೇಲೊಂದಕ್ಕೆ ನುಗ್ಗಿ ಹಿಂಬಾಗಿಲಿನ ಮೂಲಕ ತಪ್ಪಿಸಿಕೊಂಡನೆನ್ನಲಾಗಿದೆ. ಸುಳ್ಯ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next