Advertisement

Pop Corn: ಬೆಂಕಿಯಲ್ಲಿ ಅರಳಿದ ಹೂವು

04:06 PM Oct 15, 2023 | Team Udayavani |

ಅದು ಅಮೆರಿಕಾದ ಕಾಡಿನಲ್ಲಿ ಎದ್ದ ಕಾಳ್ಗಿಚ್ಚು. ಅಮೆರಿಕಾ ನಾಗರೀಕತೆ ಯತ್ತ ಮುಖ ಮಾಡಿ ನೆಡೆ ಯುತ್ತಿದ್ದ ಸಮಯವದು. ರೈತ ಬೆಳೆದ ಬೆಳೆಗಳೆಲ್ಲ ಬೆಂಕಿಗಾಹುತಿಯಾದವು. ಹೇಗೋ ಬೆಂಕಿ ಆರಿತು. ರೈತರೆಲ್ಲ ಅರೆ ಸುಟ್ಟ ಬೆಳೆಗಳನ್ನು ವಿಂಗಡಿಸುವಾಗ ಕಂಡದ್ದು ಆಶ್ಚರ್ಯ! ಬೆಳೆಗಳೆಲ್ಲ ಹೂವಿನಂತೆ ಆಗಿದ್ದವು. ಈ ಆಚ್ಚರಿ ಇಡೀ ಜಗತ್ತಿನಾದ್ಯಂತ ಪಸರಿಸತೊಡಗಿತು.
ಜನರ ಮುಗªತೆಗೆ ಅವುಗಳನ್ನು ಅಗ್ನಿದೇವನ ಮಾಲೆಯಿಂದ ಬಿದ್ದ ಹೂನಿವನ ಕಣ ಎಂದು ಪೂಜಿಸತೊಡಗಿದರು, ಹಾಗೇ ದಿನ ಕಳೆದಂತೆ ಆಕಸ್ಮಿಕವಾಗಿ ಬೆಂಕಿಯಲ್ಲಿ ಬಿದ್ದ ಜೋಳದ ತೆನೆ ಟಪ್‌ ಟಪ್‌ ಎಂದು ಸಿಡಿದು ಹೂವಿನಂತೆ ಆಗಿದ್ದು, ಆಗ ಅವರ ಮೂಡತೆ ಮರೆಯಾಯಿತು.

Advertisement

ಏನೋ ಆ ಆಕಸ್ಮಿಕತೆಯಿಂದ ಇಂದು ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ತಿನಿಸಾಗಿ ಪಾಪ್‌ ಕಾರ್ನ್ ಬದಲಾದದ್ದು ಕಣ್ಮುಂದೆಯೇ ಇದೆ. ವಿಜ್ಞಾನದ ಪರಿಚಯ ನಮ್ಮ ಸಾಮಾಜಿಕ ಬದುಕನ್ನು ಎಷ್ಟೆಲ್ಲಾ ಬದಲಾವಣೆ ಮಾಡಿದೆ ಎಂಬುದಕ್ಕೆ ಇದು ಉದಾಹರಣೆ.

ಇನ್ನು ಈ ಪಾಪ್‌ಕಾರ್ನ್ ವಿಷಯ, ಅದರ ಇತಿಹಾಸ ಯಾಕೆ ಎಂದು ಕೇಳುತ್ತೀರಾ? ಹೀಗೆ ಕೆಲವು ದಿನಗಳ ಹಿಂದೆ ನನ್ನ ತಂಗಿ ಪಾಪ್‌ ಕಾರ್ನ್ ಮಾಡಿ ತಂದಳು, ಆಗ ಕುಟುಂಬ ಸದಸ್ಯರೆಲ್ಲರೂ ಖುಷಿಯಿಂದ ಅವನ್ನು ತಿಂದೆವು. ಕೆಲವೇ ಕ್ಷಣಗಳಲ್ಲಿ ತುಂಬಿದ ಪಾತ್ರೆ ಖಾಲಿ ಖಾಲಿ, ನಾನು ಬೇಕಾಗಿ ನೋಡಿದಾಗ ಕೆಲವು ಅರಳದೆ ಉಳಿದ ಜೋಳದ ಕಾಳುಗಳು ಕಂಡವು.

ಹೇ ಅವನ್ನು ತಿನ್ಬೇಡ ಬಿಸಾಕು ಎಂದರು ಅಮ್ಮ..!
ನಾನು ಯಾಕೆ? ಎಂದು ಪ್ರಶ್ನಿಸಿದೆ, ನೋಡು ಅವು ಅರಳಿಲ್ಲ ಅದರಲ್ಲಿ ಏನು ಸತ್ವ ಇದೆ. ಬೇಕಿದ್ದರೆ ಹೊಸ ಪ್ಯಾಕ್‌ನಲ್ಲಿ ಮಾಡಿ ಕೊಡುವೆ ಎಂದು ಹೋದರು.

ನನಗೆ ಆಗ ಕಾಡಿದ ಪ್ರಶ್ನೆಗಳು, ನಿಮಗೂ ಕಾಡಿರಬಹುದು. ಅವೆಲ್ಲ ಇದ್ದದ್ದು ಒಂದೇ ಪ್ಯಾಕೆಟ್‌ನಲ್ಲಿ, ಹಾಕಿದು ಒಂದೇ ಪಾತ್ರೆಯಲ್ಲಿ, ಸುಟ್ಟದ್ದು ಒಂದೇ ಬೆಂಕಿಯ ಝಳದಲ್ಲಿ, ಮೇಲಾಗಿ ಅವೆಲ್ಲ ಒಂದೇ ತಳಿಯ ಜೋಳವೂ ಹೌದು. ಆದರೂ ಕೆಲವು ಕಾಳುಗಳು ಯಾಕೆ ಅರಳದೆ ಎಲ್ಲರಿಂದ ನಿರ್ಲಕ್ಷ್ಯಗೆ ಒಳಗಾದವು?

Advertisement

ಈ ಜೋಳದ ಕಾಳುಗಳು ನಮಗೆಲ್ಲ ಏನೋ ಸಂದೇಶ ಕೊಡುತ್ತಿವೆ ಅನಿಸುತ್ತಿಲ್ಲವೆ. ಹೌದು ಎಲ್ಲ ಒಂದೇ ತಳಿ, ಒಂದೇ ಬೆಂಕಿಯ ಬಿಸಿ ಸಿಕ್ಕರೂ ಎಲ್ಲವೂ ಒಂದೇ ಸಮವಾಗಿ ಅರಳಲಿಲ್ಲ. ಪಕ್ವ ಜೋಳ ಹೆಚ್ಚಿನ ಬಿಸಿಗಾಗಿ ಕಾಯದೆ ಅರಳಿದವು, ಅಂದರೆ ಅವು ಸಿದ್ಧರಾಗಿ ಕುಳಿತಿದ್ದವು. ಕೆಲವು ಜೋಳ ಏನು ಆಗದೆ ನಿರ್ಲಕ್ಷ್ಯಕ್ಕೆ ಒಳಗಾದವು. ನಾವು ಕೂಡ ಅಷ್ಟೇ ಜೀವನದ ಹೋರಾಟಗಳಿಗೆ ಸಿದ್ಧರಾಗಿ ಇದ್ದರೆ ಹೂವಿನಂತೆ ಅರಳುವು ನಿಶ್ಚಿತ.

ನಾವು ಏನೇ ಇರಬಹುದು, ನಮ್ಮ ಮನೆತನ, ತಂದೆ-ತಾಯಿ, ಹೆಸರು, ಆದರೆ ನಮ್ಮ ಅಸ್ತಿತ್ವವೇ ನಮ್ಮ ಅಸ್ಮಿತೆಯಾಗುತ್ತದೆ. ಪಕ್ವ ಜೋಳದ ಹಾಗೆ ನಾವು ಅವಕಾಶ ಕೈ ಚೆಲ್ಲದೇ ಪುಟಿದೇಳಬೇಕು, ಆಗ ಸಮಾಜದಲ್ಲಿ ಒಳ್ಳೆಯ ಸ್ಥಾನ, ಗೌರವ ಸಿಗುತ್ತದೆ. ಇಲ್ಲದಿದ್ದರೆ ನಿರ್ಲಕ್ಷ್ಯಗೆ ಒಳಗಾಗುತ್ತೇವೆ.

ನಿತ್ಯವೂ ಒಂದು ಹೊಸ ಜೀವನ. ನಿನ್ನೆಗಿಂತ ಇವತ್ತು ಸ್ವಲ್ಪ ಒಳ್ಳೆ ಜ್ಞಾನಾರ್ಜನೆಯಾಗಿದೆ ಎಂಬ ಸಂತೃಪ್ತಿಯಿಂದ ದಿನ ಕಳೆಯಬೇಕು.

ಹೆಚ್ಚು ಕಷ್ಟ, ಹೆಚ್ಚು ಪ್ರಯತ್ನ ಮಾಡಿದಷ್ಟು ಪಕ್ವವಾಗುತ್ತೇವೆ ಎಂದು ನನ್ನ ಶಾಲೆಯ ಮಾರ್ಕ್ಸ್ ಕಾರ್ಡ್‌ನ ಹಿಂದೆ ಮುದ್ರಣ ಇತ್ತು, ಇಂದು ಆ ಮಾತು ನಮಗೆಲ್ಲ ಮನದಟ್ಟಾಗಬೇಕು ಅಲ್ಲವೇ.. ಹೆಚ್ಚು ಪ್ರಯತ್ನಿಸಿದಷ್ಟೂ, ಹೆಚ್ಚು ಯಶಸ್ಸು ಪಕ್ವತೆ, ಹೇಗೆ ಬೆಂಕಿಯಲ್ಲಿ ಅರಳಿದ ಹೂವಿನ ಹಾಗೆ…

- ಮಂಜುನಾಥ ಕೆ.ಆರ್‌. ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next