Advertisement

ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ

06:24 PM Oct 16, 2021 | Team Udayavani |

ಮುಂಡಗೋಡ: ನಾಡಹಬ್ಬ ವಿಜಯದಶಮಿ ಅಂಗವಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಬೆಳಗ್ಗೆಯಿಂದಲೇ ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ಪಟ್ಟಣದ ಬನ್ನಿಕಟ್ಟಿಯ ಬನ್ನಿಮಹಾಕಾಳಿ, ಅಂಬೇಡ್ಕರ್‌ ಓಣಿಯಲ್ಲಿರುವ ಬನ್ನಿ ಮರಕ್ಕೆ ಹಾಗೂ ಗ್ರಾಮದೇವಿ ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ ಮಹಿಳೆಯರು ತಂಡೋಪತಂಡವಾಗಿ ಬಂದು ದೇವರ ದರ್ಶನ ಪಡೆದು ದೇವಸ್ಥಾನಕ್ಕೆ ಆಗಮಿಸಿದ ಮುತ್ತೈದೆಯರಿಗೆ ಆರತಿ ಬೆಳಗಿ ಉಡಿ ತುಂಬಿ ಹಾರೈಸಿದರು.

ಗುರುವಾರ ತಾಲೂಕು ಹಿಂದು ಜಾಗರಣೆ ವೇದಿಕೆಯಿಂದ ಬನ್ನಿಕಟ್ಟಿಯ ಬನ್ನಿಮಹಾಕಾಳಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಮುಂದೆ ಆಯುಧಗಳನ್ನು ಇಟ್ಟು ಆಯುಧ ಪೂಜೆ ಮಾಡಿದರು. ಶುಕ್ರವಾರ ಶ್ರೀರಾಮ ಸೇನೆ ತಾಲೂಕು ಘಟಕದಿಂದ ಬನ್ನಿಕಟ್ಟಿಯ ಬನ್ನಿಮಹಾಕಾಳಿ ದೇವಿಗೆ ಪೂಜೆ ಸಲ್ಲಿಸಿ ಸಿಹಿ ವಿತರಿಸಿ ಶುಭಾಶಯ ವಿನಮಯ ಮಾಡಿಕೊಂಡರು.

ಹಿಂಜಾವೆ ತಾಲೂಕು ಸಂಚಾಲಕ ಪ್ರಕಾಶ ಬಡಿಗೇರ, ಶ್ರೀರಾಮ ಸೇನೆಯ ತಾಲೂಕು ಸಂಚಾಲಕ ಮಂಜುನಾಥ ಎಚ್‌., ಮುಖಂಡರಾದ ಫಣಿರಾಜ ಹದಳಗಿ, ರವಿ ಹಾವೇರಿ, ವಿಶ್ವನಾಥ ನಾಯರ, ರಾಘವೇಂದ್ರ ಶಿರಾಲಿ, ಬಸವರಾಜ ತನಿಖೆದಾರ, ಗಣೇಶ ಶಿರಾಲಿ, ಮಲ್ಲಿಕಾರ್ಜುನ ಗೌಳಿ, ಕುಮಾರ ತಳವಾರ, ಮಹೇಶ ಎಲಿವಾಳ, ಭಗವಂತ ಗುಡಕರ್‌, ಸೋಮು ಕಲ್ಮಠ, ಕಿರಣ ಚವ್ಹಾಣ, ದೇವು ಕಲಾಲ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next