Advertisement
ಮೂಡುಬಿದಿರೆ: ಪಡು ಮಾರ್ನಾಡು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಬೆಳುವಾಯಿ, ಕಾಂತಾವರ ಈ ಆರು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿಕೊಂಡು 1967ರಲ್ಲಿ ಕ್ಷೀರಸಾಗರ ಹಾಲು ಉತ್ಪಾದಕರ ಸಹಕಾರ ಸಂಘ ಎಂಬ ಹೆಸರಿನಿಂದ ಪ್ರಾರಂಭವಾಗಿ ಕುಲಶೇಖರದ ಸರಕಾರಿ ಡೈರಿಗೆ ಹಾಲನ್ನು ಪೂರೈಸಲಾಗುತ್ತಿತ್ತು.
Related Articles
Advertisement
“ಸಂಘದ ಸದಸ್ಯರು, ನಿರ್ದೇಶಕರು, ಸಿಬಂದಿ ಹಾಗೂ ಒಕ್ಕೂಟದ ಸಹಕಾರದಿಂದ ಸಂಘವು ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ಪರಿಸರದ ಗ್ರಾಮಗಳಿಂದ ವಾಹನ ಮೂಲಕ ಹಾಲು ಸಂಗ್ರಹಿಸುವ ವ್ಯವಸ್ಥೆ ಮಾಡುವ, ಅಮನೊಟ್ಟು ಶಾಖೆಯನ್ನು ತೆರೆಯುವ ಯೋಜನೆ ಇದೆ’.– ಎಂ. ದಯಾನಂದ ಪೈ, ಅಧ್ಯಕ್ಷರು, ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ನಿ. ಸೌಕರ್ಯಗಳು
ಪರಿಶಿಷ್ಟ ಜಾತಿ/ಪಂಗಡದವರಿಗೆ ಉತ್ತಮ ತಳಿಯ ಕರುಗಳನ್ನು ಸರಕಾರದ ಸಹಾಯಧನದೊಂದಿಗೆ ಸಂಘದ ವತಿಯಿಂದ ಉಚಿತವಾಗಿ ನೀಡಲಾಗಿದೆ. ಕರು ಸಾಕಾಣಿಕೆಗೆ ಉಚಿತವಾಗಿ ಪಶುಆಹಾರ ಒದಗಿಸಲಾಗುತ್ತಿದೆ. ವಿಶೇಷ ತಜ್ಞ ಪಶುವೈದ್ಯರ ಸಹಕಾರದಿಂದ ದನಗಳ ಬಂಜೆತನ ನಿವಾರಣ ಶಿಬಿರ, ಕಾಲು ಬಾಯಿ ಜ್ವರ ನಿಯಂತ್ರಣ ಶಿಬಿರ, ಶುದ್ಧ ಹಾಲು ಉತ್ಪಾದನ ಶಿಬಿರ, ಹೈನುಗಾರಿಕಾ ಮಾಹಿತಿ ಶಿಬಿರ ಏರ್ಪಡಿಸಲಾಗುತ್ತಿದೆ. ಜಾನುವಾರುಗಳ ಜಂತು ಹುಳಕ್ಕೆ ಸಂಘದಿಂದ ಉಚಿತವಾಗಿ ಔಷಧಿ ನೀಡಲಾಗುತ್ತಿದೆ. ಒಕ್ಕೂಟ ಮತ್ತು ಸಂಘದ ಸಹಭಾಗಿತ್ವದಲ್ಲಿ ಜಾನುವಾರು ವಿಮೆ, ಸದಸ್ಯರಿಗೆ ಸಹಾಯಧನ ಹೀಗೆ ಸದಸ್ಯ ಹೈನುಗಾರರನ್ನು ವಿವಿಧ ರೀತಿಯಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ಊರಿನ ಧಾರ್ಮಿಕ, ಶೈಕ್ಷಣಿಕ ರಂಗಗಳಿಗೂ ಸಂಘದ ವತಿಯಿಂದ ಸಹಾಯಧನ ನೀಡಲಾಗುತ್ತಿದೆ. ಅಧ್ಯಕ್ಷರು
ಅಧ್ಯಕ್ಷರಾಗಿ ಎಂ. ದಯಾನಂದ ಪೈ, ಎಸ್.ಎ. ಸಾಲಿನ್ಸ್ , ಸಿಲ್ವಿಯಾ ಜೇಮ್ಸ್, ಎಂ. ದಯಾನಂದ ಪೈ, ಕೆ. ನಾರಾಯಣ ಶೆಟ್ಟಿ ಕೇಂಪುಲು, ಎಂ. ಸುಂದರನಾಥ ಭಂಡಾರಿ, ಬಿ. ಶೇಷಗಿರಿ ಕಾಮತ್ ಸೇವೆ ಸಲ್ಲಿಸಿದ್ದು ಇದೀಗ ಮೂರನೇ ಬಾರಿಗೆ ಪಡುಮಾರ್ನಾಡು ಹಾ. ಉ. ಸಹಕಾರ ಸಂಘ ಅಧ್ಯಕ್ಷರಾಗಿ ಎಂ. ದಯಾನಂದ ಪೈ ಆರಿಸಲ್ಪಟ್ಟಿದ್ದಾರೆ. ಕಾರ್ಯದರ್ಶಿಗಳು
ಕಾರ್ಯದರ್ಶಿಗಳಾಗಿ ರೋಸ್ ಸಿ. ಮಾಬೆನ್, ಶಾಂತಿ ಭಟ್, ಸತೀಶ ಭಟ್, ಉಮಾವತಿ, ವಸಂತಿ ಹಾಗೂ ಉಮಾವತಿ ಸೇವೆ ಸಲ್ಲಿಸುತ್ತಿದ್ದಾರೆ. - ಧನಂಜಯ ಮೂಡುಬಿದಿರೆ