Advertisement

Congress: ಒಂದೇ ಜಾತಿಯವರಿಗೆ  ಅಧಿಕಾರ ಸಲ್ಲದು: ಹರಿಪ್ರಸಾದ್‌

11:16 PM Sep 02, 2023 | Team Udayavani |

ಕಲಬುರಗಿ: ಅಧಿಕಾರ ಸಿಕ್ಕಾಗ ಕೆಲವೇ ಸಮುದಾಯಗಳು ಅದನ್ನು ಅನುಭವಿಸುತ್ತಿವೆ. ಎಲ್ಲ ವರ್ಗದವರಿಗೂ ಅಧಿಕಾರ ಸಿಗುವಂತಾಗಬೇಕು. ಜವಾನನಿಂದ ದಿವಾನನವರೆಗೂ ಒಂದೇ ಜಾತಿಯವರಿಗೆ ಅವಕಾಶ ನೀಡಲಾಗದು ಎಂದು ಹಿರಿಯ ಕಾಂಗ್ರೆಸ್‌ ಮುಖಂಡ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವರ್ಗದವರಿಗೂ ಅವಕಾಶ ನೀಡುವುದಕ್ಕೆ ಇಂದಿನವರು ಇಂದಿರಾಗಾಂಧಿ ಅವರನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದರು.

ನಾನು ಪಕ್ಕಾ ಕಾಂಗ್ರೆಸ್ಸಿಗ. ಮಂತ್ರಿ ಮಾಡಿಲ್ಲ ಅಂತ ಹೋರಾಟ ಮಾಡುತ್ತಿ¤ಲ್ಲ. ಸಣ್ಣ ಸಮುದಾಯಗಳಿಗೂ ಅವಕಾಶ ಸಿಗಬೇಕು ಎನ್ನುವುದು ನಮ್ಮ ಆಶಯ. ಅದಕ್ಕಾಗಿ ಹೋರಾಟ ಮುಂದುವರಿದಿದೆ ಎಂದರು.

ಆಪರೇಶನ್‌ನಲ್ಲಿ ಸಂತೋಷ್‌ ಪಿಎಚ್‌.ಡಿ.

ಕಾಂಗ್ರೆಸ್‌ನ 40ರಿಂದ 45 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ  ಬಿ.ಎಲ್‌. ಸಂತೋಷ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್‌, ಸಂತೋಷ್‌ ಅವರು “ಆಪರೇಷನ್‌ ಕಮಲ’ದಲ್ಲಿ ಪಿಎಚ್‌.ಡಿ. ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

ಇಸ್ರೋಗೆ ಜಾಗ ನೀಡಿದ್ದೇ ಕಾಂಗ್ರೆಸ್‌

ಇಸ್ರೋದಿಂದ ಆದಿತ್ಯ-ಎಲ್‌ 1 ನೌಕೆ ಉಡಾವಣೆ ಆಗಿರುವುದು ಸಂತಸ ತಂದಿದೆ. ಕಾಂಗ್ರೆಸ್‌ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅಚಲ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ನಾವು ಬಿಜೆಪಿಯವರಂತೆ ಮೂಢನಂಬಿಕೆಗೆ ಅಂಟಿಕೊಂಡವರಲ್ಲ. ಪ್ರಮುಖವಾಗಿ ಬೆಂಗಳೂರಿನಲ್ಲಿ ಇಸ್ರೋಗೆ ಜಾಗ ನೀಡಿದ್ದು ಕಾಂಗ್ರೆಸ್‌ ಸರಕಾರ. ನಾವು ಬಿತ್ತು ಬೆಳೆಸಿದ ಮರದ ಹಣ್ಣನ್ನು ಬಿಜೆಪಿಯವರು ತಿನ್ನುತ್ತಿದ್ದಾರೆ ಎಂದು ಹರಿಪ್ರಸಾದ್‌ ಪ್ರತಿಪಾದಿಸಿದರು.

ಒಂದು ದೇಶ-ಒಬ್ಬನೇ ನಾಯಕ!

ಭಾರತೀಯ ಜನತಾಪಕ್ಷ ಘೋಷಣೆಗಳನ್ನು ಮಾಡುವುದರಲ್ಲಿ ಯಾವುದಕ್ಕೂ ಕಮ್ಮಿಯಿಲ್ಲ. ಈಗ “ಒಂದು ದೇಶ-ಒಂದು ಚುನಾವಣೆ’ ಎನ್ನಲಾಗುತ್ತಿದೆ. ಮುಂದೆ “ಒಂದು ದೇಶ-ಒಬ್ಬನೇ ನಾಯಕ’ ಎಂದರೂ ಆಶ್ಚರ್ಯವಿಲ್ಲ ಎಂದು ಹರಿಪ್ರಸಾದ್‌ ಟೀಕಿಸಿದರು. “ಒಂದು ದೇಶ-ಒಂದು ಚುನಾವಣೆ’ ಜಾರಿಯಾದಲ್ಲಿ ರಾಷ್ಟ್ರೀಯ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಇದು ಸ್ವಾಮಿ ವಿವೇಕಾನಂದರ ಆಶಯಕ್ಕೂ ವಿರುದ್ಧವಾಗಿದೆ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next