Advertisement

ಕೊಪ್ಪಳದ ನಿವಾಸಿ ಹೈದರಾಬಾದ್ ನಲ್ಲಿ ಮೃತ, ಅಲ್ಲೇ ಅಂತ್ಯ ಸಂಸ್ಕಾರ

01:27 PM Jul 17, 2020 | keerthan |

ಗಂಗಾವತಿ: ಅನಾರೋಗ್ಯಪೀಡಿತ 59 ವರ್ಷದ ವ್ಯಕ್ತಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟ ಗಂಗಾವತಿಯ ಬಾಪಿರಡ್ಡಿ ಕ್ಯಾಂಪಿನ ನಿವಾಸಿಯನ್ನು ಅಲ್ಲೆ ಅಂತ್ಯ ಸಂಸ್ಕಾರ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿದ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಹೈದರಾಬಾದ್ ನಲ್ಲಿ ನಡೆಸುತ್ತಿದೆ.

Advertisement

ಮೊದಲು ಕುಟುಂಬದವರು ಶವವನ್ನು ಗಂಗಾವತಿ ಬಾಪಿರೆಡ್ಡಿ ಕ್ಯಾಂಪಿಗೆ ತರುವ ಸಿದ್ದತೆಯಲ್ಲಿದ್ದರು. ಆದರೆ ಕೋವಿಡ್-19 ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿ ಅಂತ್ಯ ಸಂಸ್ಕಾರ ಮಾಡುವಂತೆ ಕುಟುಂಬಕ್ಕೆ ಜಿಲ್ಲಾಡಳಿತ ಸಲಹೆ ನೀಡಿತು. ಕುಟುಂಬದವರು ಇದಕ್ಕೆ ಜಗ್ಗದೆ ಇದ್ದಾಗ ಬಾಪಿರೆಡ್ಡಿ ಕ್ಯಾಂಪ್ ನ ಯುವಕರು ಕೊಪ್ಪಳ ಡಿಸಿ ಸುರಳ್ಕರ್ ವಿಕಾಸ ಕಿಶೋರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು.

ಡಿಸಿ ಕೂಡಲೇ ಕಾರ್ಯಪ್ರವೃತ್ತರಾಗಿ ವ್ಯಕ್ತಿ ಮೃತಪಟ್ಟಿದ್ದು, ಅಂತರಾಜ್ಯದಿಂದ ಶವ ಸಾಗಿಸುವುದು ಸರಿಯಲ್ಲ ಒಂದು ವೇಳೆ ಮೃತದೇಹ ತರಲೇಬೇಕಾದ ಅನಿವಾರ್ಯತೆ ಇದ್ದರೆ ಕೊವಿಡ್-19 ನಿಯಮದಂತೆ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ. 50 ಜನರಿಗಿಂತ ಹೆಚ್ಚು ಗುಂಪು ಸೇರಬಾರದು ಎಂದು ಮೊಬೈಲ್ ನಲ್ಲಿ ಸೂಚನೆ ನೀಡಿದ್ದರಿಂದ ಮೃತ ವ್ಯಕ್ತಿಯ ಕುಟುಂಬದವರು ಹೈದರಾಬಾದ್ ನಲ್ಲಿ ಶವಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ. ಬಾಪಿರೆಡ್ಡಿ ಕ್ಯಾಂಪ್ ನ ಮೃತಪಟ್ಟ ವ್ಯಕ್ತಿ ಶವಸಂಸ್ಕಾರಕ್ಕೆ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮ ಅನಾಹುತವನ್ನು ತಪ್ಪಿಸಿದಂತಾಗಿದೆ.

ಸ್ಥಳೀಯರಿಂದ ಶ್ಲಾಘನೆ : ಹೈದರಾಬಾದ್ ನಲ್ಲಿ ಅನಾರೋಗ್ಯದ ಕಾರಣ ಮೃತಪಟ್ಟ ವ್ಯಕ್ತಿ ಶವ ಸಂಸ್ಕಾರ ಮಾಡಲು ಕೋವಿಡ್ ನಿಯಮ ಅನುಸರಿಸುವಂತೆ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್ ಕುಟುಂಬ ವರ್ಗದವರಿಗೆ ಸೂಚನೆ ನೀಡುವ ಮೂಲಕ ಹೈದರಾಬಾದ್ ನಲ್ಲಿ ಶವಸಂಸ್ಕಾರ ಮಾಡುವಂತೆ ಮಾಡಿದ ಜಿಲ್ಲಾಧಿಕಾರಿಗಳ ಮುನ್ನೆಚ್ಚರಿಕೆಯ ಕ್ರಮ ಶ್ಲಾಘನೀಯವಾಗಿದೆ ಎಂದು ಬಾಪಿರೆಡ್ಡಿ ಕ್ಯಾಂಪ್ ನ ಗ್ರಾಮಸ್ಥರು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next