Advertisement

ಅಪರೂಪದ “ಬ್ಲ್ಯಾಂಕೆಟ್‌ ಆಕ್ಟೋಪಸ್‌’ಪತ್ತೆ!

06:44 PM Jan 14, 2022 | Team Udayavani |

ಲಂಡನ್‌: ಸಮುದ್ರದಾಳದ ನಿಗೂಢ ಜಗತ್ತಿನಲ್ಲಿ ಅತ್ಯಂತ ಅಪರೂಪವಾಗಿ ಕಾಣಸಿಗುವ “ಬ್ಲ್ಯಾಂಕೆಟ್‌ ಆಕ್ಟೋಪಸ್‌’ ಈಗ ಸಂಶೋಧಕರ ಕಣ್ಣಿಗೆ ಬಿದ್ದಿದೆ.

Advertisement

ಗ್ರೇಟ್‌ ಬ್ಯಾರಿಯರ್‌ ರೀಫ್ ನಮೇಲ್ಭಾಗದ ನೀರಿನಲ್ಲಿ ಈ ವರ್ಣರಂಜಿತ ಆಕ್ಟೋಪಸ್‌ ಮೈ ಬಳುಕಿಸುತ್ತಾ ಕುಣಿದಾಡುತ್ತಿದ್ದ ದೃಶ್ಯವು ಸೆರೆಯಾಗಿದೆ. ಗ್ರೇಟ್‌ ಬ್ಯಾರಿಯರ್‌ ರೀಫ್ ನ ಲೇಡಿ ಎಲಿಯಟ್‌ ದ್ವೀಪದಲ್ಲಿ ಸಾಗರಜೀವವಿಜ್ಞಾನಿ ಜೆಸಿಂಟಾ ಶಾಕ್ಲಿಟನ್‌ ಅವರು ಇದನ್ನು ಪತ್ತೆಹಚ್ಚಿದ್ದಾರೆ.

“ಅದನ್ನು ಮೊದಲ ಬಾರಿಗೆ ನೋಡಿದಾಗ, ಉದ್ದನೆಯ ಈಜುರೆಕ್ಕೆಯುಳ್ಳ ಸಣ್ಣ ಮೀನಿರಬಹುದು ಎಂದು ಭಾವಿಸಿದೆ. ಆದರೆ, ಹತ್ತಿರಕ್ಕೆ ಬರುತ್ತಿದ್ದಂತೆ ಅದು ಹೆಣ್ಣು ಬ್ಲ್ಯಾಂಕೆಟ್‌ ಆಕ್ಟೋಪಸ್‌ ಎಂಬುದು ದೃಢವಾಯಿತು. ಅದನ್ನು ನೋಡಿದಾಗ ನನ್ನ ಕಣ್ಣುಗಳನ್ನು ನನಗೇ ನಂಬಲಾಗಲಿಲ್ಲ’ ಎಂದು ಜೆಸಿಂಟಾ ಹೇಳಿದ್ದಾರೆ.

ಇದನ್ನೂ ಓದಿ:ಬಹು ನಿರೀಕ್ಷಿತ ಕೇಂದ್ರ ಬಜೆಟ್ ಫೆ.1 ಕ್ಕೆ ಮಂಡನೆ ಸಾಧ್ಯತೆ

21 ವರ್ಷಗಳ ಹಿಂದೆ ಕಂಡಿತ್ತು:
ಮೊದಲ ಬಾರಿಗೆ ಸಜೀವ ಗಂಡು ಬ್ಲ್ಯಾಂಕೆಟ್‌ ಆಕ್ಟೋಪಸ್‌ ಕಂಡುಬಂದಿದ್ದು ಸುಮಾರು 21 ವರ್ಷಗಳ ಹಿಂದೆ. ಗ್ರೇಟ್‌ ಬ್ಯಾರಿಯರ್‌ ರೀಫ್ ನ ಉತ್ತರ ಭಾಗದಲ್ಲಿರುವ ರಿಬ್ಬನ್‌ ರೀಫ್ ನಲ್ಲಿ ಅದನ್ನು ಡಾ. ಜುಲಿಯನ್‌ ಫಿನ್‌ ನೋಡಿದ್ದರು. ಹೆಣ್ಣು ಬ್ಲ್ಯಾಂಕೆಟ್‌ ಆಕ್ಟೋಪಸ್‌ ಗರಿಷ್ಠ 2 ಮೀಟರ್‌ ಉದ್ದ ಬೆಳೆದರೆ, ಗಂಡು ಕೇವಲ 2.4 ಸೆಂಟಿ ಮೀಟರ್‌ ಉದ್ದವಷ್ಟೇ ಇರುತ್ತವೆ. ಅಲ್ಲದೇ, ಹೆಣ್ಣು ಆಕ್ಟೋಪಸ್‌ನಷ್ಟು ವರ್ಣಮಯವಾದ ಹೊರ ಹೊದಿಕೆಯನ್ನು ಗಂಡು ಆಕ್ಟೋಪಸ್‌ ಹೊಂದಿರುವುದಿಲ್ಲ. ಶತ್ರುಗಳ ದಾಳಿಯಾದಾಗ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇವುಗಳು ತಮ್ಮ ದೇಹದ ಹೊರಹೊದಿಕೆಯನ್ನು ಕಳಚಿಕೊಂಡು ಮುಂದೆ ಸಾಗುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next