Advertisement

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

08:01 PM Nov 29, 2024 | Team Udayavani |

ಮುಂಬೈ : ‘ಪುಷ್ಪ 2’ (Pushpa 2: The Rule) ಚಿತ್ರ ಭಾಷೆಯ ತಡೆಯನ್ನು ಮುರಿಯುತ್ತಿದೆ, ಚಿತ್ರದ ಮೂಲಕ ರಾಷ್ಟ್ರ ಮಟ್ಟದಲ್ಲಿ ತೆಲುಗು ಜನರನ್ನು ಹೆಮ್ಮೆಪಡುವಂತೆ ಮಾಡುವ ಸಮಯ ನನ್ನದು ಎಂದು ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಶುಕ್ರವಾರ(ನ29) ಹೇಳಿಕೆ ನೀಡಿದ್ದಾರೆ.

Advertisement

ಮಂಬೈನಲ್ಲಿ ನಡೆದ ಚಿತ್ರದ ಪ್ರಚಾರ ಸಮಾರಂಭದಲ್ಲಿ ಮಾತನಾಡಿದ ಅಲ್ಲೂ ಅರ್ಜುನ್ ‘ಒಂದು ಕಾಲದಲ್ಲಿ ಬಾಲಿವುಡ್‌ಗೆ ಪ್ರವೇಶಿಸುವುದು ಅಸಾಧ್ಯವೆಂದು ಭಾವಿಸಿಲಾಗಿತ್ತು ಆದರೆ ‘ಪುಷ್ಪ 2: ದಿ ರೂಲ್’ ಮೂಲಕ ದೇಶಾದ್ಯಂತದ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ನನ್ನ ಆಸೆ ಈಡೇರುತ್ತಿದೆ’ ಎಂದರು.

‘ಪುಷ್ಪ ಮೊದಲ ಭಾಗದಂತೆಯೇ ಅದೇ ಮಟ್ಟದ ಯಶಸ್ಸನ್ನು ಆನಂದಿಸುವ ನಿರೀಕ್ಷೆ ಇದೆ. ತೆಲುಗು ಉದ್ಯಮದಲ್ಲಿ ಅತಿ ದೊಡ್ಡ ಹಿಟ್‌ಗಳಲ್ಲಿ ಒಂದಾಗಬೇಕಿದೆ. ಪುಷ್ಪ 2 ಚಿತ್ರವು ಭಾರತದಲ್ಲೇ ಅತಿ ದೊಡ್ಡ ಚಿತ್ರವಾಗಲಿದೆ ಎಂಬ ನಿರೀಕ್ಷೆ ಇದೆ. ಇಡೀ ಭಾರತವೇ ನಮ್ಮಿಂದ ಈ ಚಿತ್ರವನ್ನು ನಿರೀಕ್ಷಿಸುತ್ತಿರುವಾಗ ನಮಗೆ ದೊಡ್ಡ ವಿಷಯ ಎಂದು ನಾನು ಭಾವಿಸಿದ್ದು, ನನ್ನ ತಾಯ್ನಾಡಿಗೆ ಒಳ್ಳೆಯ ಹೆಸರನ್ನು ತರುತ್ತದೆ ಎಂಬ ಕಾರಣಕ್ಕೆ ನಾನು ಜವಾಬ್ದಾರನಾಗಿದ್ದನೆ’ ಎಂದರು.

“20 ವರ್ಷಗಳಿಂದ ನನ್ನನ್ನು ಬೆಂಬಲಿಸಿದ ಮತ್ತು ನನ್ನನ್ನು ನಟನನ್ನಾಗಿ ಮಾಡಿದ ತೆಲುಗು ಜನರಿಗೆ ಇದು ಹೆಮ್ಮೆಯ ಕ್ಷಣವಾಗಿದೆ, ನಾನು ಅವರಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಪಡುವ ಮತ್ತು ‘ಪುಷ್ಪ’ವನ್ನು ಹಿಟ್ ಮಾಡುವ ಸಮಯ ಇದು” ಎಂದು 42 ರ ಹರೆಯದ ನಟ ಅಲ್ಲು ಅರ್ಜುನ್ ಹೇಳಿದರು.

Advertisement

ನಟಿ ರಶ್ಮಿಕಾ ಮಂದಣ್ಣ ಮಾತನಾಡಿ’“ ಇಂದು ನನ್ನ ಪೂರ್ಣ ಹೃದಯ, ನನ್ನ ಸಂಪೂರ್ಣ ವಿಶ್ವಾಸ ಮತ್ತು ಅತೀ ಉತ್ಸಾಹದಿಂದ ‘ಪುಷ್ಪ 2’ ಡಿಸೆಂಬರ್ 5 ಕ್ಕೆ ಬರಲಿದೆ ಎಂದು ಹೆಮ್ಮೆಯಿಂದ ಘೋಷಿಸುತ್ತೇನೆ.ನಟಿಯಾಗಿ ನನಗೆ ಇದು ಏಳು ವರ್ಷಗಳ ಪಯಣ, ಅದರಲ್ಲಿ ಐದು ವರ್ಷ ನಾನು ‘ಪುಷ್ಪ’ ಜತೆ ಇದ್ದೇನೆ. ಈ ಚಿತ್ರದೊಂದಿಗೆ, ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿಲ್ಲ. ಅದೀಗ ಕೊನೆಗೊಳ್ಳುತ್ತಿದೆ ಎಂದು ನನಗೆ ತುಂಬಾ ಬೇಸರವಾಗಿದೆ. ಚಿತ್ರ ಬಿಡುಗಡೆಗಾಗಿ ನಾನು ತುಂಬಾ ಉತ್ಸುಕಳಾಗಿದ್ದೇನೆ. ಹಾಗಾಗಿ ನಾನು ಸ್ವಲ್ಪಮಟ್ಟಿಗೆ ಆ ಗುಂಗಿನಲ್ಲೇ ಮುಳುಗಿದ್ದೇನೆ, ”ಎಂದರು.

‘ಅಲ್ಲು ಅರ್ಜುನ್ ಅವರ ಜತೆ ಕೆಲಸ ಮಾಡುವ ವೇಳೆ ನಾನು ನರ್ವಸ್ ಆಗಿದ್ದೆ’ ಎಂದು 28ರ ಹರೆಯದ ರಶ್ಮಿಕಾ ಮಂದಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next