Advertisement

ಅಗತ್ಯ ವಸ್ತುಗಳಿಲ್ಲದೇ ಸಾರ್ವಜನಿಕರ ಪರದಾಟ

06:42 AM Jul 05, 2020 | Lakshmi GovindaRaj |

ಕನಕಪುರ: ಸೀಲ್‌ಡೌನ್‌ ಮಾಡಿರುವ ವ್ಯಾಪ್ತಿಗಳಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಗತ್ಯ ವಸ್ತುಗಳ ಪೂರೈಕೆಯಿಲ್ಲದೆ ಪರದಾಡುವಂತಾಗಿದೆ ಎಂದು ಧರ್ಮರಾಜು ವರ್ಕ್‌ಶಾಪ್‌ ರಸ್ತೆ ಸಾರ್ವಜನಿಕರು ಆರೋಪಿಸಿದ್ದಾರೆ.  ತಾಲೂಕಿನಲ್ಲಿ ಕೊರೊನಾ ಹಾವಳಿ ಹೆಚ್ಚುತ್ತಿದೆ. ಈವರೆಗೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ, 1300ಕ್ಕೂ ಹೆಚ್ಚು ಫ‌ಲಿತಾಂಶಗಳು ಬಾಕಿಯಿವೆ.

Advertisement

ಪ್ರತಿ ದಿನ ಎರಡು ಮೂರು ಸೋಂಕಿತ ಪ್ರಕರಣಗಳು  ದಾಖಲಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ಕೋವಿಡ್‌-19 ನಿಯಮಗಳ ಪ್ರಕಾರ ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ 100 ಮೀ. ವ್ಯಾಪ್ತಿ ಸೀಲ್‌ ಡೌನ್‌ ಮಾಡಿ, ಆ ವ್ಯಾಪ್ತಿಯ ಸಾರ್ವಜನಿಕರಿಗೆ ಅಗತ್ಯ ವಸ್ತು ಪೂರೈಸಲು ಸ್ಥಳದಲ್ಲಿ  ಒಬ್ಬ ಸಿಬ್ಬಂದಿ ನೇಮಿಸಬೇಕು. ಆದರೆ ನಗರ ಸೇರಿದಂತೆ ಗ್ರಾಮೀಣ ಭಾಗದ ಸೀಲ್‌ಡೌನ್‌ ಪ್ರದೇಶಗಳಲ್ಲಿ ಅಗತ್ಯವಸ್ತುಗಳು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ.

ಇನ್ನು ಕೆಲವು ಕಡೆಗಳಲ್ಲಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಸಾರ್ವಜನಿಕರು ಹೋರಬರದಂತೆ ಸೀಲ್‌ಡೌನ್‌ ಮಾಡಿ, ಅಗತ್ಯ ವಸ್ತುಗಳ ಪೂರೈಕೆಗೆ ಸಿಬ್ಬಂದಿ ನೇಮಿಸಿಲ್ಲ ಎಂಬ ಆರೋಪ ವ್ಯಕ್ತವಾಗುತ್ತಿದೆ. ನಗರದ ವಾಣಿ ಚಿತ್ರಮಂದಿರದ ಎದುರಿನ ಧರ್ಮರಾಜು ವರ್ಕ್‌ಶಾಪ್‌ ರಸ್ತೆಯ ನಿವಾಸಿ ವಿಶ್ವೇಶ್ವರಾಯ ಬ್ಯಾಂಕ್‌ನ  ಸಿಬ್ಬಂದಿಗೆ ಸೋಂಕು ಕಾಣಿಸಿದ ಹಿನ್ನೆಲೆಯಲ್ಲಿ ಆ ರಸ್ತೆಯ ಎರಡು ಭಾಗಗಳಲ್ಲಿ ಸೀಲ್‌ಡೌನ್‌ ಮಾಡಿರುವ ಅಧಿಕಾರಿಗಳು ಕಳೆದ 15 ದಿನಗಳಿಂದ ಅಗತ್ಯವಸ್ತುಗಳ ಪೂರೈಕೆಗೆ ಒಬ್ಬ ಸಿಬ್ಬಂದಿ ನೇಮಿಸಿಲ್ಲ.

ಸೀಲ್‌ಡೌನ್‌  ಆದಾಗಿನಿಂದಲೂ ಈವರೆಗೆ ಯಾವೊಬ್ಬ ಅಧಿಕಾರಿಯು ಇತ್ತ ತಲೆ ಹಾಕಿಲ್ಲ. ನಮಗೆ ಪ್ರತಿ ದಿನ ಅಗತ್ಯ ವಸ್ತು ಸಿಗದೆ ಪರದಾಡುವಂತಾಗಿದೆ. ಅದರಿಂದ ನಮಗೂ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿದೆ ಎಂದು ಧರ್ಮರಾಜು ವಕ್‌  ìಶಾಪ್‌ ರಸ್ತೆ ಮಹದೇವಪ್ಪ ಪತ್ರಿಕೆ ವರದಿಗಾರರಿಗೆ ದೂರವಾಣಿ ಮೂಲಕ ನೋವು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next