Advertisement
ಪಂಚಭೂತಗಳಲ್ಲಿ ಒಂದಾದ ನೀರು ಸಂಜೀವಿನಂತೆ ಕೆಲಸ ಮಾಡುತ್ತದೆ. ನಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರಮಾಡುವ ಶಕ್ತಿ ನೀರಿಗಿದೆ ಎಂದರೆ ತಪ್ಪಾಗಲಾರದು. ಇಂತಹ ಹಲವು ಪ್ರಯೋಜನವುಳ್ಳ ನೀರನ್ನು ಹಿತ ಮಿತವಾಗಿ ಉಪಯೋಗಿಸಿ ಸಂರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ.
Related Articles
Advertisement
ಮಣ್ಣಿನ ಮಡಕೆಯಲ್ಲಿಟ್ಟಿರುವ ನೀರು ಸ್ವಾಭಾವಿಕವಾಗಿಯೇ ತಂಪಾಗಿರುವುದರಿಂದ ಈ ನೀರು ಕುಡಿಯುವುದರಿಂದ ದೇಹ ಕೂಡ ತಂಪಾಗುತ್ತ¤ದೆ. ಮಡಕೆ ನೀರಿನಿಂದ ನಮ್ಮ ದೇಹದ ಚಯಾಪಚಯ ಕ್ರಿಯೆ ಕೂಡ ಸುಧಾರಿಸುತ್ತದೆ. ಜೀರ್ಣಕ್ರಿಯೆ ವೃದ್ಧಿಸುತ್ತದೆ. ಹಾಗೂ ದೇಹದ ತೇವಾಂಶ ಕಾಪಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಒಟ್ಟಾರೆ ಬೇಸಿಗೆ ಕಾಲದಲ್ಲಿ ಮಣ್ಣಿನ ಮಡಕೆಯ ನೀರು ಕುಡಿಯುವುದು ತಂಬಾ ಒಳ್ಳೆಯದು.
ಬೇಸಿಗೆ ಕಾಲದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಫ್ರಿಡ್ಜ್ ನಲ್ಲಿಟ್ಟಿರುವ ನೀರನ್ನು ಕುಡಿಯುತ್ತಾರೆ. ಆದರೆ ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ನಾಂದಿಯಾಗಬಹುದು.
ಮಣ್ಣಿನ ಪಾತ್ರೆಯ ಲಾಭ
ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಸಂದರ್ಭ ಕಡಿಮೆ ಎಣ್ಣೆ ಬಳಕೆಯಾಗುವುದು, ಅದೇ ರೀತಿ ಮಣ್ಣಿನ ಮಡಕೆಯಲ್ಲಿ ಮಾಡಿದ ಆಹಾರ ಒಂದು ಆಹ್ಲಾದಕರ ರುಚಿಯನ್ನು ಪಡೆದಿರುತ್ತದೆ. ಮಣ್ಣಿನ ಪಾತ್ರೆಗಳಲ್ಲಿ ಆಹಾರ ಬೇಯಿಸುವುದರಿಂದ ನಮ್ಮ ದೇಹಕ್ಕೆ ಕಬ್ಬಿಣದ ಅಂಶ, ಕ್ಯಾಲ್ಸಿಯಂ ಅಂಶ ಹೇರಳವಾಗಿ ದೊರೆಯುತ್ತವೆ ಮತ್ತು ಮಣ್ಣಿನಲ್ಲಿ ಸಣ್ಣ ಸಣ್ಣ ರಂಧ್ರಗಳಿಂದ ಉಷ್ಣ ಮತ್ತು ತೇವಾಂಶ ಎರಡು ಸಮ ಪ್ರಮಾಣದಲ್ಲಿ ಪ್ರಸಾರವಾಗುತ್ತವೆ. ಈ ಎಲ್ಲ ಕಾರಣಗಳಿಂದ ಮಣ್ಣಿನ ಮಡಿಕೆಗಳು ತುಂಬಾ ಲಾಭದಾಯಕವಾಗಿವೆ. ಈ ಎಲ್ಲ ಕಾರಣಗಳಿಂದ ಮಣ್ಣಿನ ಮಡಕೆಯನ್ನು ಬಡವರ ಫ್ರಿಡ್ಜ್ ಎಂದೇ ಕರೆಯಬಹುದು.
-ಸುನಂದಾ ಪಟ್ಟಣಶೆಟ್ಟಿ
ವಿ. ವಿ. ವಿಜಯಪುರ