Advertisement
ಸೋಮವಾರ ಬೆಳಗ್ಗೆ ಸುಮಾರು 8.30ಕ್ಕೆ ಮಂಗಳೂರಿನಿಂದ ಮಣಿಪಾಲಕ್ಕೆ ಸಂಚರಿಸುತ್ತಿದ್ದ ಪಿರೇರಾ ಬಸ್‌ಗೆ ಕೊಟ್ಟಾರಚೌಕಿಯಲ್ಲಿ ಹತ್ತಿದ ವ್ಯಕ್ತಿಯೊಬ್ಬರು ಸುಮಾರು 300 ಮೀ. ದೂರದಲ್ಲೇ (ಕೋಡಿಕಲ್ ಕ್ರಾಸ್) ಕುಸಿದು ಬಿದ್ದರು. ಮಾತನಾಡಲಾಗದ ಸ್ಥಿತಿಯಲ್ಲಿದ್ದ ಅವರಿಗೆ ಸಹ ಪ್ರಯಾಣಿಕರಾದ ಕಾಪುವಿನ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಲಿನೆಟ್ ಅವರು ಪ್ರಥಮ ಚಿಕಿತ್ಸೆ ನೀಡಿದರು.
ಬಸ್ ನಿರ್ವಾಹಕ ಅನಿಲ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಆ ವ್ಯಕ್ತಿಯು ಬಸ್ಸಿಗೆ ಹತ್ತಿದ ಕೂಡಲೇ ಸಹ ಪ್ರಯಾಣಿಕರ ಹೆಗಲ ಮೇಲೆ ಕುಸಿದು ಬಿದ್ದರು. ಫಿಟ್ಸ್ ಇರಬಹುದು ಎಂದುಕೊಂಡೆ. ಬಳಿಕ ಹೃದಯಾಘಾತ ಉಂಟಾಗಿರಬಹುದೆಂದು ತತ್‌ಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದೆವು. ಆಸ್ಪತ್ರೆಯಲ್ಲಿಯೂ ತತ್‌ಕ್ಷಣ ದಾಖಲಿಸಲು ನೆರವಾಗಿದ್ದಾರೆ’ ಎಂದರು. “ಆ ಪ್ರಯಾಣಿಕ ಕೋವಿಡ್ ಅವಧಿಗೂ ಹಿಂದೆ ನಮ್ಮ ಬಸ್ಸಿನಲ್ಲಿ ಬರುತ್ತಿದ್ದರು. ಬಳಿಕ ಅವರನ್ನು ನೋಡಿದ ನೆನಪಿಲ್ಲ’ ಎಂದು ಚಾಲಕ ರವಿ ಹೇಳಿದ್ದಾರೆ.
Related Articles
ಹೃದಯಾಘಾತದಿಂದ ಕುಸಿದು ಬಿದ್ದ ಕೂಡಲೇ ಅವರಿಗೆ ಸಿಪಿಆರ್ ವಿಧಾನದಲ್ಲಿ ಪ್ರಥಮ ಚಿಕಿತ್ಸೆ ನೀಡಿದೆ. ಆದರೂ ಅವರು ಸ್ಪಂದಿಸುವ ಸ್ಥಿತಿಯಲ್ಲಿರಲಿಲ್ಲ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದೆ ಎನ್ನುತ್ತಾರೆ ಉಪಚರಿಸಿದ ಲಿನೆಟ್.
Advertisement
ಬಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಎದೆನೋವು ಉಂಟಾದಾಗ ಬಸ್ಸನ್ನು ನೇರವಾಗಿ ಕಂಕನಾಡಿಯ ಆಸ್ಪತ್ರೆಯೊಂದಕ್ಕೆ ಕೊಂಡೊಯ್ದ ಘಟನೆ ಜು.30ರಂದು ನಗರದಲ್ಲಿ ನಡೆದಿತ್ತು.