Advertisement

ಸೋಂಕು ತಡೆಗಟ್ಟಿದ ರಾಷ್ಟ್ರಗಳಿಗೆ ಹೊಸ ಸಮಸ್ಯೆ

06:46 PM Apr 20, 2020 | sudhir |

ಮಣಿಪಾಲ : ಅಮೆರಿಕ, ಯುಕೆ, ಸ್ಪೇನ್‌ , ಇಟಲಿ ಪ್ರಮುಖ ಜಾಗತಿಕ ಮಹಾಶಕ್ತಿಗಳು ಕೋವಿಡ್‌-19 ಸಾಂಕ್ರಾಮಿಕ ರೋಗಕ್ಕೆ ಬ್ರೇಕ್‌ ಹಾಕಲು ತೀವ್ರವಾಗಿ ಹೆಣಗಾಡುತ್ತಿರುವ ಸಮಯದಲ್ಲಿ ವೈರಸ್‌ ಹರಡುವುದನ್ನು ತಡೆಯುವಲ್ಲಿ ದಕ್ಷಿಣ ಕೊರಿಯಾದ ವಿಧಾನವು ಇತರರಿಗಿಂತಲೂ ಭಿನ್ನವಾಗಿದೆ ಮತ್ತು ಮಾದರಿಯಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು.

Advertisement

ಆದರೆ ಮತ್ತೆ ಭಾನುವಾರ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಪ್ರಜೆಗಳಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಸೋಂಕು ನಿಯಂತ್ರಣವಾಗಿ ಲಾಕ್‌ಡೌನ್‌ ತೆರವು ಮಾಡಿದ ಹಲವು ಪ್ರದೇಶಗಳಲ್ಲಿ ಸೋಂಕು ಮರುಕಳಿಸುತ್ತಿದೆ. ಇದೀಗ ದಕ್ಷಿಣ ಕೊರಿಯಾ ಮರುಸೋಂಕು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿದೆ.

2 ತಿಂಗಳ ಬಳಿಕ ಸೋಂಕು ಪತ್ತೆ
ಸೋಂಕು ಪ್ರಸರಣ ಪ್ರಮಾಣ ಸಂಪೂರ್ಣ ಕಡಿಮೆಯಾಗಿ ಲಾಕ್‌ಡೌನ್‌ ತೆರವುಗೊಂಡ 2 ತಿಂಗಳ ಬಳಿಕ ರವಿವಾರ ಪ್ರತ್ಯೇಕ ಎಂಟು ಹೊಸ ಸೋಂಕು ಪ್ರಕರಣ ದಾಖಲಾಗಿದ್ದು, ಸೋಂಕಿತರ ಪೈಕಿ ಐದು ವಿದೇಶ ಮೂಲಗಳಿಂದ ಹರಡಿದೆ ಎಂದು ಕೊರಿಯಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಕೆಸಿಡಿಸಿ) ತಿಳಿಸಿವೆ.

ಇನ್ನು ಫೆಬ್ರವರಿ 18ರ ನಂತರ ದಕ್ಷಿಣ ಕೊರಿಯಾದಲ್ಲಿ ಮೊದಲ ಬಾರಿಗೆ ಏಕ ಅಂಕಿಯ (ಸಿಂಗಲ್‌ ಡಿಜಿಟ್‌) ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕುಗಳ ಸಂಖ್ಯೆ 10,661 ಏರಿದೆ.

ಚೀನದಲ್ಲೂ ಇದೇ ಸಮಸ್ಯೆ
ದಕ್ಷಿಣ ಕೊರಿಯಾ ಸೇರಿದಂತೆ ಈಗಾಗಲೇ ಸೋಂಕು ತಡೆಗಟ್ಟುವಲ್ಲಿ ಯಶಸ್ವಿಯಾದ ರಾಷ್ಟ್ರಗಳಲ್ಲಿ ಈಗ ಮರು ಸೋಂಕು ಸಮಸ್ಯೆ ಆರಂಭವಾಗಿದೆ. ಸಿಂಗಾಪೂರದಲ್ಲೂ ಸಮಸ್ಯೆ ಈಗ ಉಲ½ಣಿಸುತ್ತಿದ್ದು, ವಲಸೆ ಕಾರ್ಮಿಕರು ಕಾರಣವೋ ಅಥವಾ ಮರು ಸೋಂಕೋ ಎಂಬುದು ಇನ್ನೂ ಪತ್ತೆಯಾಗಬೇಕಿದೆ. ಈ ಮಧ್ಯೆಯೇ, ಚೀನದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಚೀನ ಸದ್ಯ ನಂಬಿರುವುದು ವಿದೇಶಗಳಲ್ಲಿನ ಜನರು ಬರುತ್ತಿರುವುದರಿಂದ ಸೋಂಕು ಪ್ರಕರಣ ಪತ್ತೆಯಾಗುತ್ತಿದೆ ಎನ್ನಲಾಗುತ್ತಿದೆ. ಈಗ ದಕ್ಷಿಣ ಕೊರಿಯಾದಲ್ಲೂ ಇದೇ ಸಮಸ್ಯೆ ಮರುಕಳಿಸಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next