ಉಡುಪಿ: ಅರೆಬರೆ ಕಿತ್ತು ಹೋದ ಛಾವಣಿ,ಆಧಾರ ಸ್ತಂಭಗಳು,ಬೆಂಚುಗಳು ಜತೆಗೆ ಸ್ವಚ್ಛತೆಯ ಕೊರತೆ! ಇದು ಸದ್ಯ ಉಡುಪಿ ನಗರದ ಹೃದಯ ಭಾಗದಲ್ಲಿನ ಸಿಟಿ ಬಸ್‌ನಿಲ್ದಾಣದ ಇತ್ತೀಚಿನ ತನಕದ ಚಿತ್ರಣವಾಗಿತ್ತು. ಈ ಎಲ್ಲ ಸಮಸ್ಯೆಗಳಿಗೆ ಸದ್ಯ ತಾತ್ಕಾಲಿಕ ಮುಕ್ತಿ ಸಿಕ್ಕಿದೆ.
ಇದೇ ವೇಳೆ ಬಸ್‌ನಿಲ್ದಾಣವನ್ನು ಸ್ವಚ್ಛಗೊಳಿಸಿ, ಶಿಥಿಲವಾಗಿದ್ದ ನಿಲ್ದಾಣವನ್ನು ದುರಸ್ತಿಗೊಳಿಸಿದ್ದರು.ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ ಪ್ರಧಾನ ಕಾರ್ಯ ದರ್ಶಿ ರಾಘವೇಂದ್ರ ಕಿಣಿ ಅವರ ನೇತೃತ್ವದಲ್ಲಿ 29 ಮಂದಿ ಸ್ವಯಂಸೇವಕರು, ಬಿಜೆಪಿ ಕಾರ್ಯಕರ್ತರು ಹಾಗೂ ನಗರ ಸಭೆ ಸದಸ್ಯರು ಸೇರಿ ಸ್ಟಾಂಡ್ ಅನ್ನು ಸ್ವತ್ಛಗೊಳಿಸಿದರು. ಸೋಂಕು ಹರಡದಂತೆ ನಿಲ್ದಾಣದಲ್ಲೂ ಶುಚಿತ್ವ ಕಾಪಾಡುವುದಕ್ಕೂ ಪ್ರಾಮುಖ್ಯ ನೀಡಿದ್ದರು.
ಬಸ್‌ನಿಲ್ದಾಣದ ಛಾವಣಿ, ಆಧಾರ ಸ್ತಂಭಗಳು, ಬೆಂಚುಗಳು ಶಿಥಿಲ ಗೊಂಡಿದ್ದವು. ಸಿಮೆಂಟ್ ಇತ್ಯಾದಿ ಕಚ್ಚಾ ಸಾಮಗ್ರಿ ಗಳನ್ನು ತರಿಸಿಕೊಂಡ ಸ್ವಯಂ ಸೇವಕರು ಶಿಥಿಲವಾದ ಸ್ಥಳ ಗಳಿಗೆ ಮಿಶ್ರ ಗೊಳಿಸಿದ ಸಿಮೆಂಟ್ ಅನ್ನು ತುಂಬಿ ದುರಸ್ತಿ ಗೊಳಿಸಿದರು.ಹಲವು ಅವ್ಯವಸ್ಥೆಯ ಸ್ಯಾಂಪಲ್‌ಗಳಿಗೂ ಕಾಯಕಲ್ಪ ಒದಗಿಸಿ, ಪ್ರಯಾಣಿಕರು ನಿರ್ಭೀತಿಯಿಂದ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಸಿಟಿ ಬಸ್ ಆರಂಭಗೊಂಡ ಜೂ.1ರಿಂದ ಬಸ್‌ನಿಲ್ದಾಣದಲ್ಲಿ ಹೆಚ್ಚು ಪ್ರಯಾಣಿಕರು ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬರುತ್ತಿದೆ. ಆಗ ನಿಲ್ದಾಣ ಶುಚಿಯಾಗಿರಬೇಕು. ವಾತಾವರಣ ಶುಚಿಯಾಗಿದ್ದರೆ ಪ್ರಯಾಣಿಕರು ಕೂಡ ಶುಚಿತ್ವವನ್ನು ಪಾಲಿಸುತ್ತಾರೆ. ಎಂಬ ಧ್ಯೇಯದಿಂದ ಈ ಕಾರ್ಯವನ್ನು ಮಾಡಲಾಗಿತ್ತು.